ಮುಖದ ಅಂದ ಹೆಚ್ಚಿಸುವ ಗ್ಲಿಸರಿನ್: ಇದನ್ನು ಬಳಸೋದು ಹೇಗೆ?

First Published Nov 16, 2020, 6:55 PM IST

ಗ್ಲಿಸರಿನ್ ಅನ್ನು ಬಹಳ ಹಿಂದಿನಿಂದಲೂ ಜನ ಬಳಸುತ್ತಿದ್ದಾರೆ ಮತ್ತು ಅವರ ಸೌಂದರ್ಯ ಸಂಗ್ರಹದ ಅತ್ಯಗತ್ಯ ಭಾಗವಾಗಿತ್ತು. ಎಲ್ಲಾ ಅಲಂಕಾರಿಕ ಕ್ರೀಮ್‌ಗಳು ಮತ್ತು ಲೋಷನ್‌ಗಳು ನಮ್ಮ ಮಾರುಕಟ್ಟೆಗಳಲ್ಲಿ ಬರುವುದಕ್ಕೆ ಮುಂಚೆಯೇ ಗ್ಲಿಸರಿನ್ ಚರ್ಮದ ಮೇಲೆ ಉತ್ತಮ ಪರಿಣಾಮಗಳನ್ನು ನೀಡುತ್ತಾ ಬಂದಿದೆ.  ನೀವು ಸಹ ಚರ್ಮದ ಸಮಸ್ಯೆ ಎದುರಿಸುತ್ತಿದ್ದರೆ ಖಂಡಿತವಾಗಿ ಗ್ಲಿಸರಿನ್ ನಿಮ್ಮ ಸಹಾಯಕ್ಕೆ ಬರುತ್ತದೆ. 
 

ನಿರಂತರವಾದ ಸ್ಕಿನ್‌ ಇರಿಟೇಶನ್‌, ಸಮಸ್ಯೆಯಿಂದಾಗಿ ಕೋಪ ಬರುತ್ತಿದೆಯೇ? ಈ ಸಮಸ್ಯೆ ನಿವಾರಣೆ ಮಾಡಲು ಒಂದು ವಿಧಾನ ಇಲ್ಲಿದೆ. ಇದಕ್ಕಾಗಿ ನೀವು ಗ್ಲಿಸರಿನ್‌ ಬಳಕೆ ಮಾಡಬೇಕು. ಅದರಿಂದ ಉಂಟಾಗುವ ಪ್ರಯೋಜನಗಳು ಯಾವುವು ತಿಳಿಯಿರಿ...
undefined
ಏನಿದು ಗ್ಲಿಸರಿನ್ : ಗ್ಲಿಸರಿನ್ ಅನ್ನು ಗ್ಲಿಸರಾಲ್ ಎಂದೂ ಕರೆಯುತ್ತಾರೆ, ಇದು ಬಣ್ಣರಹಿತ, ವಾಸನೆಯಿಲ್ಲದ, ಸಿಹಿ-ರುಚಿಯ ದ್ರವವಾಗಿದ್ದು ಅದು ತುಂಬಾ ದಪ್ಪ, ಸ್ನಿಗ್ಧತೆಯ ಸ್ಥಿರತೆಯನ್ನು ಹೊಂದಿರುತ್ತದೆ. ಸಾಬೂನು ತಯಾರಿಸುವ ಪ್ರಕ್ರಿಯೆಯ ಉಪ-ಉತ್ಪನ್ನ, ಸಕ್ಕರೆ ಮತ್ತು ಆಲ್ಕೋಹಾಲ್ ಸಾವಯವ ಸಂಯುಕ್ತವನ್ನು ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಪಡೆಯಲಾಗಿದೆ ಮತ್ತು ಇದನ್ನು ಸೌಂದರ್ಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
undefined
ಮಾಯಿಶ್ಚರೈಸರ್‌ : ಒಂದು ಚಮಚ ಗ್ಲಿಸರಿನ್‌ಗೆ 2 ಚಮಚ ರೋಸ್‌ ವಾಟರ್‌ ಬೆರೆಸಿ. ಇದನ್ನ ಕಾಟನ್‌ ಬಾಲ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ. 10 ನಿಮಿಷದ ನಂತರ ಉಗುರು ಬಿಸಿ ನೀರಿನಲ್ಲಿ ವಾಶ್‌ ಮಾಡಿ. ಇದರಿಂದ ಮುಖಕ್ಕೆ ಮಾಯಿಶ್ಚರೈಸ್‌ ಮಾಡುತ್ತದೆ.
undefined
ಸ್ಮೂಥ್‌ ಸ್ಕಿನ್‌ : ಆ್ಯಂಟಿ ಏಜಿಂಗ್‌ ಕ್ರೀಂಗಳನ್ನ ಬಳಕೆ ಮಾಡಿ ಸ್ಕಿನ್‌ ರಫ್‌ ಆಗಿದೆಯೆ? ಇದಕ್ಕೆ ಕಾರಣ ಕ್ರೀಂ ನಲ್ಲಿರುವ ಕೆಮಿಕಲ್‌ಗಳು. ನಿಮ್ಮ ಸ್ಕಿನ್‌ ಸ್ಮೂತ್‌ ಆಗಬೇಕೆಂದರೆ ಮುಖಕ್ಕೆ ಗ್ಲಿಸರಿನ್‌ ಹಚ್ಚಿ. ಇದರಿಂದ ಸ್ಕಿನ್‌ ಫ್ರೆಶ್‌ ಮತ್ತು ಯಂಗ್‌ ಆಗುತ್ತದೆ.
undefined
ಸ್ಕಿನ್‌ ವೈಟನಿಂಗ್‌ : ಗ್ಲಿಸರಿನ್‌ ಸ್ಕಿನ್‌ ಬಿಳುಪು ಹೆಚ್ಚಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಗ್ಲಿಸರಿನ್‌ನ್ನು ಕಾಟನ್‌ನಲ್ಲಿ ಅದ್ದಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. ನಿದ್ರೆ ಮಾಡುವ ಮುನ್ನ ಇದನ್ನು ಹಚ್ಚಿ. ಇದರಿಂದ ಸ್ಕಿನ್‌ ಬಿಳುಪಾಗುತ್ತದೆ.
undefined
ಡ್ರೈ ಸ್ಕಿನ್‌ ನಿವಾರಣೆ : ಫೇಸ್‌ ಪ್ಯಾಕ್‌ ಹಾಕಿದಾಗ ಸ್ಕಿನ್‌ ಪೂರ್ತಿಯಾಗಿ ಡ್ರೈ ಆಗುತ್ತದೆ. ಹೀಗೆ ಆಗಬಾರದು ಎಂದಾದರೆ ಫೇಸ್‌ಪ್ಯಾಕ್‌ಗೆ ಗ್ಲಿಸರಿನ್‌ ಮಿಕ್ಸ್‌ ಮಾಡಿ. ಇದರಿಂದ ಡ್ರೈ ಸ್ಕಿನ್‌ ಸಮಸ್ಯೆ ನಿವಾರಣೆಯಾಗುತ್ತದೆ.
undefined
ಕೋಲ್ಡ್‌‌ ಕ್ರೀಂ ಮತ್ತು ಬಾಡಿ ಲೋಶನ್‌ : ಕೋಲ್ಡ್‌‌ ಕ್ರೀಮ್‌ ಮತ್ತು ಬಾಡಿ ಲೋಶನ್‌ಗೆ ಸ್ವಲ್ಪ ಗ್ಲಿಸರಿನ್‌ ಮಿಕ್ಸ್‌ ಮಾಡಿ ಕೈ, ಕಾಲು, ಮುಖಕ್ಕೆ ಹಚ್ಚಿ. ಇದರಿಂದ ಕ್ರೀಮ್‌ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಅಲ್ಲದೆ ನಿಮ್ಮ ತ್ವಚೆಯನ್ನು ಫ್ರೆಶ್‌ ಆಗಿರಿಸುತ್ತದೆ.
undefined
ಆಯ್ಲಿ ಸ್ಕಿನ್‌ಗೆ ಬೆಸ್ಟ್‌ : ನಿಮ್ಮ ಮುಖದ ಮೇಲಿನ ಹೆಚ್ಚಿನ ಪ್ರಮಾಣದ ಆಯಿಲ್‌ನ್ನು ತೆಗೆಯಲು ಗ್ಲಿಸರಿನ್‌ ಬೆಸ್ಟ್ ಆಯ್ಕೆ.
undefined
ಕಲೆಗಳ ನಿವಾರಣೆ : ದೇಹದ ಮೇಲೆ ಮೂಡಿರುವ ಕಲೆ, ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ನೀವು ಗ್ಲಿಸರಿನ್‌ನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದು ಕಲೆಗಳನ್ನು ನಿವಾರಣೆ ಮಾಡಿ ಕ್ಲಿಯರ್‌ ಸ್ಕಿನ್‌ ನಿಮ್ಮದಾಗಲು ಸಹಾಯ ಮಾಡುತ್ತದೆ.
undefined
ಮೇಕಪ್ ರಿಮೂವ್ : ಮೇಕಪ್ ನ್ನು ನೀರಿನಿಂದ ತೊಳೆದರೆ ಅದರಿಂದ ಮೇಕಪ್ ಸರಿಯಾಗಿ ಹೋಗದೆ ಸಮಸ್ಯೆ ಉಂಟಾಗಬಹುದು. ಅದರ ಬದಲಾಗಿ ಮೇಕಪ್ ತೆಗೆಯಲು ಗ್ಲಿಸರಿನ್ ಬಳಕೆ ಮಾಡಿದರೆ ಮುಖ ಕ್ಲೀನ್ ಆಗುತ್ತದೆ.
undefined
click me!