ಅನೇಕ ಜನರು ಕಾಫಿ ಕುಡಿದ ನಂತರ ಉಳಿದ ಕಾಫಿ ಪುಡಿಯನ್ನ ಎಸೆಯುತ್ತಾರೆ. ಆದರೆ ಕಾಫಿ ಪುಡಿ ನಿಮ್ಮ ಬಾತ್ ರೂಂ ಕ್ಲೀನ್ ಮಾಡಲು ಮತ್ತು ಫ್ರೆಶ್ ಆಗಿಡಲು ಸರಳ ಮತ್ತು ಅಗ್ಗದ ಮಾರ್ಗವಾಗಿದೆ. ನಿಮ್ಮ ಶೌಚಾಲಯವನ್ನು ಸ್ವಚ್ಛಗೊಳಿಸಲು ನೀವು ಈ ಕಾಫಿ ಪುಡಿ ಬಳಸಿದರೆ ಅದು ನಿಮಿಷಗಳಲ್ಲೇ ಹೊಳೆಯಲು ಆರಂಭವಾಗುವುದಲ್ಲದೆ, ಕ್ಲೀನ್ ಆಗುತ್ತದೆ.
26
ಕಾಫಿ ಪುಡಿಯಿಂದ ಸ್ವಚ್ಛಗೊಳಿಸುವುದು ಹೇಗೆ?
ನೈಸರ್ಗಿಕ ಸ್ಕ್ರಬ್ಬರ್ ಕಾಫಿ ಪುಡಿಯಲ್ಲಿರುವ ಕಣಗಳು ನೈಸರ್ಗಿಕ ಸ್ಕ್ರಬ್ಬರ್ ಆಗಿ ಕಾರ್ಯನಿರ್ವಹಿಸುತ್ತವೆ. ಶೌಚಾಲಯವನ್ನು ಸಂಪೂರ್ಣವಾಗಿ ಸ್ಕ್ರಬ್ ಮಾಡಲು ಅವು ತುಂಬಾ ಉಪಯುಕ್ತವಾಗಿವೆ.
ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸುವ ಬದಲು, ಕಾಫಿ ಪುಡಿಯನ್ನು ಬಳಸುವುದರಿಂದ ಯಾವುದೇ ಹಾನಿಕಾರಕ ವಸ್ತುಗಳು ಇರುವುದಿಲ್ಲ.
36
ಶುಚಿಗೊಳಿಸುವ ವಿಧಾನ
ಒಂದು ಚಮಚ ಕಾಫಿ ಪುಡಿಯನ್ನು ಹಾಕಿ ಬ್ರಷ್‌ನಿಂದ ಉಜ್ಜಿದರೆ, ಲೈಟಾದ ಕಲೆಗಳು ಮತ್ತು ಧೂಳು ಸುಲಭವಾಗಿ ನಿವಾರಣೆಯಾಗುತ್ತದೆ.
ವಾಸನೆ ನಿಯಂತ್ರಣ ಕಾಫಿಯಲ್ಲಿರುವ ನೈಸರ್ಗಿಕ ತೈಲಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶೌಚಾಲಯವನ್ನು ಸ್ವಚ್ಛಗೊಳಿಸುವುದಲ್ಲದೆ, ವಾಸನೆಯನ್ನು ನಿವಾರಿಸುತ್ತದೆ. ಅದೇ ರಾಸಾಯನಿಕ ಕ್ಲೀನರ್‌ಗಳು ಒಂದು ರೀತಿ ವಾಸನೆ ಬೀರುತ್ತವೆ. ಆದರೆ ಕಾಫಿಯ ಪರಿಮಳವು ಸ್ನಾನಗೃಹವನ್ನು ತಾಜಾ ಮತ್ತು ಉಲ್ಲಾಸಕರವಾಗಿರಿಸುತ್ತದೆ.
46
ಪರಿಸರಕ್ಕೆ ಹಾನಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ಶೌಚಾಲಯ ಸ್ವಚ್ಛಗೊಳಿಸುವ ವಸ್ತುಗಳು ನೀರಿನ ಮೂಲಕ ಪರಿಸರಕ್ಕೆ ಹಾನಿ ಮಾಡಬಹುದು. ಆದರೆ ಕಾಫಿ ಪುಡಿ ಸಂಪೂರ್ಣವಾಗಿ ಜೈವಿಕ ವಿಘಟನೀಯವಾಗಿದ್ದು, ಯಾವುದೇ ಮಾಲಿನ್ಯವನ್ನು ಉಂಟುಮಾಡುವುದಿಲ್ಲ.
56
ದೂರ ಹೋಗುತ್ತಿದ್ದರೆ ..
ನೀವು ಮನೆಯಿಂದ ನೀವು ದೀರ್ಘಕಾಲ ದೂರ ಹೋಗುತ್ತಿದ್ದರೆ ಹೊರಡುವ ಮೊದಲು ಶೌಚಾಲಯಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಸುರಿಯಿರಿ. ಇದು ಸ್ನಾನಗೃಹದಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಮತ್ತು ಆ ಪ್ರದೇಶವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ನೀವು ಹಿಂತಿರುಗಿದಾಗ ಸ್ನಾನಗೃಹವು ಅದನ್ನು ಸ್ವಚ್ಛಗೊಳಿಸಿದಂತೆ ಕಾಣುತ್ತದೆ.
66
ಹಣ ಉಳಿತಾಯ
ಈ ಕಾಫಿ ಪುಡಿಯ ವಿಧಾನವು ಸುಲಭ ಮಾತ್ರವಲ್ಲದೆ ಹಣವನ್ನು ಉಳಿಸುತ್ತದೆ. ದುಬಾರಿ, ಕಠಿಣ ರಾಸಾಯನಿಕಗಳಿಗೆ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಬಳಸಿದ ಕಾಫಿ ಪುಡಿ ಎಸೆಯುವ ಬದಲು, ಅವುಗಳನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಮತ್ತು ಅಗತ್ಯವಿದ್ದಾಗ ಬಳಸಿ. ಮುಂದಿನ ಬಾರಿ ನೀವು ಕಾಫಿ ಕುಡಿಯುವಾಗ ಉಳಿದ ಪುಡಿಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇದು ನಿಮ್ಮ ಸ್ನಾನಗೃಹವನ್ನು ಸ್ವಚ್ಛವಾಗಿ ಮತ್ತು ವಾಸನೆಯಿಲ್ಲದೆಂತೆ ಇರಿಸುತ್ತದೆ.