ಮಹಿಳೆಯರಿಂದ ಮಹಿಳೆಯರಿಗಾಗಿ: ಯೆಮನ್‌ನ ಈ ಕೆಫೆ ನೋಡಿ

First Published | Nov 3, 2020, 10:05 AM IST

ಇಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ನಡೆಸ್ತಾರೆ ಕೆಫೆ | ಮಾರ್ನಿಂಗ್ ಐಕನ್ ಕೆಫೆ ಸ್ತ್ರೀಯರದ್ದೇ ಲೋಕ

ತನ್ನ ನಗರದಲ್ಲಿ ಮಹಿಳೆಯರಿಗೆ ತಮ್ಮ ಬಿಡುವಿನ ವೇಳೆಯನ್ನು ಸುಂದರವಾಗಿ ಕಳೆಯಲು ಸ್ಥಳವೇ ಇಲ್ಲ ಎಂಬುದನ್ನು ಅರಿತುಕೊಂಡ ಉಮ್ ಫೆರಾಸ್ ಎಂಬ ಮಹಿಳೆ ಯೆಮೆನ್‌ನಲ್ಲಿ ಒಂದು ಕೆಫೆ ತೆರೆಯಲು ನಿರ್ಧರಿಸಿದ್ರು.
ಮಹಿಳಾ ಉದ್ಯಮಿಗಳು, ಮಹಿಳೆಯರು ವ್ಯಾಪಾರ ನಡೆಸುವುದನ್ನು ನೋಡುವ ದೃಷ್ಟಿಕೋನವನ್ನೇ ಈಕೆ ಬದಲಾಯಿಸಿದರು.ಉಮ್ ಅವರ ಈ ಯೋಚನೆ ಮಾರ್ನಿಂಗ್ ಐಕನ್ ಕೆಫೆ ತೆರೆಯಲು ಕಾರಣವಾಯ್ತು.
Tap to resize

ಮಹಿಳೆಯರನ್ನು ಮನೆಯಿಂದ ಹೊರ ಕಳುಹಿಸುವುದಕ್ಕೆ ಹಿಂದೆ ಮುಂದೆ ನೋಡುವ ಊರಲ್ಲಿ ಈಕೆ ಆರಂಭಿಸಿದ ಕೆಫೆ ಸ್ವತಃ ಅವರಿಗೇ ಅದಾಯದ ದಾರಿಯಾಗಿದ್ದಲ್ಲದೆ, ಬಹಳಷ್ಟು ಸ್ತ್ರೀಯರಿಗೆ ತಮ್ಮ ಬಿಡುವಿನ ವೇಳೆ ಕಳೆಯಲು ಮುಕ್ತ ಸ್ಥಳವಾಗಿ ಬದಲಾಯಿತು.
ಕಳೆದ ವರ್ಷ ಎಪ್ರಿಲ್‌ನಲ್ಲಿ ಮಧ್ಯ ಯೆಮೆನ್‌ನ ಮರೀಬ್‌ನಲ್ಲಿ ಮಾರ್ನಿಂಗ್ ಐಕನ್ ಕೆಫೆ ಆರಂಭವಾಯ್ತು.ವಿದ್ಯಾರ್ಥಿನಿಯರಿಗೆ ಜನರಲ್ ಆಗಿ ಇಲ್ಲಿ ಸ್ಥಳವಿದೆ.
ಬಹಳ ಕಡಿಮೆ ಇಂಟರ್‌ನೆಟ್ ಲಭ್ಯವಿರುವ ಸ್ಥಳದಲ್ಲಿ ಹೆಣ್ಮಕ್ಕಳಿಗಂತೂ ಸ್ಥಳವೇ ಇರಲಿಲ್ಲ ಎನ್ನುತ್ತಾರೆ ಇಲ್ಲಿನ ರೆಗ್ಯುಲರ್ ಕಸ್ಟಮರ್ ವಾದದ್. ಗಲಭೆ, ರೋಗ, ಆರ್ಥಿಕ ತೊಂದರೆ ನಡುವೆ ಈ ಪ್ರದೇಶದಲ್ಲಿ ಕೆಫೆ ನಡೆಸೋದು ಸವಾಲಿನ ಕೆಲಸ.
ಉಮ್ ಫೆರಾಸ್ ಕಾಫಿ ಮತ್ತು ಡ್ರಿಂಕ್ಸ್‌ಗಳನ್ನು ಹೆಚ್ಚಾಗಿ ಇಂಪೋರ್ಟ್ ಮಾಡಿಕೊಳ್ಳುತ್ತಾರೆ. ಆರ್ಥಿಕ ಸಮಸ್ಯೆ ನಡುವೆ ಉತ್ತಮ ಗುಣಮಟ್ಟದ ಸೇವೆ ನೀಡೋದು ಸವಾಲಾಗಿತ್ತು ಎನ್ನುತ್ತಾರೆ ಈಕೆ.ಮಕ್ಕಳು ಮತ್ತು ಸ್ತ್ರೀಯರಿಗಾಗಿ ರಜಾ ದಿನದ ಸ್ಪಾಟ್ ಒಂದನ್ನು ಇನ್ನಷ್ಟು ಅಭಿವೃದ್ಧಿಪಡಿಸೋ ಪ್ಲಾನ್‌ನಲ್ಲಿದ್ದಾರೆ ಉಮ್

Latest Videos

click me!