ಗರ್ಭಪಾತದ ಬಳಿಕ ದೇಹದ ಶಕ್ತಿ ಹೆಚ್ಚಿಸಲು ಈ ಆಹಾರ ಬೆಸ್ಟ್

First Published Feb 26, 2021, 3:15 PM IST

ಗರ್ಭಿಣಿಯಾಗುವುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯುತ್ತಮ ಘಟ್ಟವಾಗಿದೆ. ಆದರೆ ಒಂದು ವೇಳೆ ಏನಾದರೂ ಸಮಸ್ಯೆಯಾಗಿ ಗರ್ಭಪಾತವಾದರೆ ಅದರಿಂದ ಮಹಿಳೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗರ್ಭಪಾತ ಅಥವಾ ಗರ್ಭಧಾರಣೆಯ ನಷ್ಟವು ಮಹಿಳೆಯರಲ್ಲಿ  ನಿಶ್ಯಕ್ತಿ ಮತ್ತು ಆಯಾಸದ ಭಾವನೆಗೆ ಕಾರಣವಾಗಬಹುದು. ಈ ಸಮಯದಲ್ಲಿ, ಪೌಷ್ಟಿಕತೆ ಬಹಳ ಮುಖ್ಯವಾಗುವುದರಿಂದ ಆರೋಗ್ಯಕರ ಆಹಾರ ಕ್ರಮವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

ಗರ್ಭಪಾತವಾದ ಮಹಿಳೆಯರು ನಂತರ ಸೇವಿಸಬೇಕಾದ ಕೆಲವು ಅತ್ಯುತ್ತಮ ಆಹಾರಗಳ ಮಾಹಿತಿ ಇಲ್ಲಿದೆ. ಇವುಗಳನ್ನು ಸೇವಿಸಿ ಉತ್ತಮ ಅರೋಗ್ಯ ಕಾಪಾಡಿ..
undefined
ಕೆಂಪು ಮಾಂಸ:ಗರ್ಭಧಾರಣೆಯ ನಷ್ಟವು ಅಧಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು, ಇದು ದೇಹಕ್ಕೆ ಕಬ್ಬಿಣದ ಕೊರತೆಯನ್ನು ಉಂಟುಮಾಡುತ್ತದೆ. ಕೆಂಪು ಮಾಂಸ ಮತ್ತು ಕಬ್ಬಿಣಾಂಶ ಹೆಚ್ಚಿರುವ ಆಹಾರಗಳು ಗರ್ಭಪಾತದ ನಂತರದ ಪರಿಣಾಮಗಳನ್ನು ಗುಣಪಡಿಸಬಹುದು.
undefined
ಸೀ ಫುಡ್ಸ್ :ಸಾಲ್ಮನ್ ಮತ್ತು ಸಾರ್ಡಿನ್ ಗಳಂತಹ ಸೀ ಫುಡ್ಸ್ ಗಳು ಹೆಮ್-ಕಬ್ಬಿಣದ ಸಮೃದ್ಧ ಮೂಲಗಳಾಗಿವೆ, ಇದು ಗರ್ಭಪಾತದ ನಂತರ ದೇಹಕ್ಕೆ ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.
undefined
ಹಸಿರು ತರಕಾರಿ:ಹಸಿರು ತರಕಾರಿಗಳು ಈ ಸಮಯದಲ್ಲಿ ಅತ್ಯುತ್ತಮ ಆಹಾರ. ಇವುಗಳನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಸೇವಿಸುವ ಮೂಲಕ ಅರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
undefined
ಬ್ರೊಕೋಲಿ:ಬ್ರೊಕೋಲಿಯು ಪ್ರಮುಖ ಪೋಷಕಾಂಶಗಳ ಒಂದು ಪ್ರಮುಖ ಮೂಲವಾಗಿದೆ, ಇದು ಗರ್ಭಧಾರಣೆಯ ನಷ್ಟವನ್ನು ಅನುಭವಿಸಿದ ಮಹಿಳೆಯರಿಗೆ ಅತ್ಯುತ್ತಮವಾಗಿದೆ.
undefined
ಡ್ರೈ ಫ್ರೂಟ್ಸ್:ನಟ್ಸ್ ಮತ್ತು ಖರ್ಜೂರದಂತಹ ಆಹಾರಗಳು ದೈಹಿಕ ಆರೋಗ್ಯವನ್ನು ಖಾತ್ರಿಪಡಿಸುವುದಲ್ಲದೆ, ಗರ್ಭಪಾತದ ನಂತರದ ಖಿನ್ನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
undefined
ಹಾಲು:ಗರ್ಭಪಾತದ ನಂತರ ದೇಹವು ತುಂಬಾ ದುರ್ಬಲವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯು ಕ್ಷೀಣಿಸಲು ಪ್ರಾರಂಭಿಸುತ್ತದೆ. ಈ ಕಾರಣಕ್ಕಾಗಿಯೇ ಹಾಲು ಕ್ಯಾಲ್ಸಿಯಂನ ಆರೋಗ್ಯಕರ ಮೂಲವಾಗಿದೆ. ಇದರ ಪರಿಣಾಮವನ್ನು ಹೆಚ್ಚಿಸಲು ಸ್ವಲ್ಪ ಅರಿಶಿನ ಪುಡಿಯನ್ನು ಸಹ ಸೇರಿಸಿಕೊಳ್ಳಬಹುದು.
undefined
ಸೋಯಾ ಉತ್ಪನ್ನಗಳು:ಸೋಯಾದಲ್ಲಿ ಅಧಿಕ ಫೈಟೇಟ್ ಮಟ್ಟ ಇದ್ದು, ಇದು ಕಬ್ಬಿಣವನ್ನು ಹೀರಿಕೊಳ್ಳುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಗರ್ಭಧಾರಣೆಯ ನಂತರ, ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಾಯ್ದುಕೊಳ್ಳುವುದು ನಿರ್ಣಾಯಕವಾಗುತ್ತದೆ, ಆದ್ದರಿಂದ ಸೋಯಾ ಉತ್ಪನ್ನಗಳು ಅಂತಹ ಸಮಯದಲ್ಲಿ ಪ್ರಮುಖ ಆಹಾರಗಳಾಗಿವೆ.
undefined
click me!