ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲು ನೀಡುತ್ತಿರುವ ದೃಶ್ಯಗಳನ್ನು ಹೊರಾಂಗಣದಲ್ಲಿ ಚಿತ್ರೀಕರಿಸಿದ್ದಾರೆ.
ಸ್ಥಳೀಯ ಪೋಟೋಗ್ರಾಫರ್ ಎಚ್ ಆಂಡ್ ಸಿ ಯ ಲಖಿಶಾ ಕೊಯಿಲ್ ಅವರ ನೆರವನ್ನು ಪಡೆದುಕೊಂಡಿದ್ದಾರೆ.
ತಾಯಿ ಮಗುವಿಗೆ ಎದೆಹಾಲು ನೀಡುತ್ತಿರುವ ವಿಶೇಷ ಅನುಭೂತಿಯನ್ನು ಸೆರೆಹಿಡಿದಿದ್ದಾರೆ.
ಕಪ್ಪು ವರ್ಣದ ತಾಯಂದಿರಿಗೆ ವಿಶೇಷ ಆದ್ಯತೆ ನೀಡಿದ್ದಾರೆ.
ತಮ್ಮ ಪೋಟೋಗಳ ಮೂಲಕವೇ ಎದೆ ಹಾಲಿನ ಮಹತ್ವನ್ನು ಸಾರುವ ಕೆಲಸ ಮಾಡಿದ್ದಾರೆ.
ಎದೆ ಹಾಲು ನೀಡುವ ಮಹತ್ವವನ್ನು ತಾಯಂದಿರಿಗೆ ತಿಳಿಸಿ ಹೇಳಬೇಕಾಗುತ್ತದೆ ಎಂಬುದನ್ನು ತಮ್ಮ ಪೋಟೋಗಳ ಮೂಲಕ ಹೇಳುತ್ತಾ ಹೋಗಿದ್ದಾರೆ.
ಮಕ್ಕಳು ನಿಸರ್ಗಕ್ಕೆ ಹೊಂದಿಕೊಂಡು ಬದುಕಲು ಮತ್ತು ಬೆಳೆಯಲು ಇದು ಹೇಗೆ ನೆರವು ನೀಡುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಪೋಟೋ ಶೂಟ್ ಹೇಗೆ ನಡೆಸಲಾಯಿತು ಎಂಬುದನ್ನು ವಿವರಿಸಿದ್ದಾರೆ.
ಮೊದಲಿಗೆ ತಾಯಂದಿರಿಗೆ ಒಂದು ಸ್ಕ್ರಿಪ್ಟ್ ನೀಡಲಾಗಿತ್ತು. ಆದರೆ ನಂತರ ಅದನ್ನು ಬದಿಗೆ ಇಟ್ಟು ನಿಸರ್ಗಕ್ಕೆ ತಕ್ಕಂತೆ ಪೋಟೋ ಶೂಟ್ ನಡೆಸಲಾಯಿತು ಎಂದು ಏಂಜೆಲಾ ವಾರೆನ್ ತಿಳಿಸುತ್ತಾರೆ.
ಜನರಿಗೆ ಈ ಪೋಟೋಗಳನ್ನು ನೋಡಿದಾಗ ತಾಯಿ ಮತ್ತು ಮಗುವಿನ ನಡುವಿನ ಬಾಂಧ್ಯವ್ಯ ಅರಿವಿಗೆ ಬರಲಿದೆ ಎಂಬುದನ್ನು ಹೇಳಲು ಮರೆಯಲ್ಲ.
ಇದೊಂದು ಮಾದರಿ ಕಾರ್ಯವಾಗಿದೆ. ಮಗುವಿನ ಸರ್ವತೋಮುಖ ಬೆಳವಣಿಗೆ ಮೂಲಕ ಉತ್ತಮ ಪೀಳಿಗೆ ಕಟ್ಟಿಕೊಡಬೇಕು ಎಂದು ಹೇಳಿದ್ದಾರೆ.
ತಾಯಿ ಹಾಲಿನ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ ನಲ್ಲಿ ಸ್ತನ್ಯಪಾನ ಜಾಗೃತಿ ವಾರವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತದೆ .