ಚಿಪ್ಸ್, ಬೊಂಡಾ ಮಾತ್ರವಲ್ಲ. ಆಲೂಗಡ್ಡೆಯಿಂದ ಈ ಕೆಲಸ ಸಹ ಮಾಡ್ಬಹುದು!

Suvarna News   | Asianet News
Published : May 05, 2021, 04:06 PM IST

ಆಲೂಗಡ್ಡೆಯಿಂದ ರುಚಿ ರುಚಿಯಾದ ಅಡುಗೆಗಳನ್ನು ಮಾಡುತ್ತೇವೆ. ಇವು ನಾಲಗೆಗೆ ರುಚಿಯನ್ನು ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಅಡುಗೆಗಳನ್ನು ಹೊರತುಪಡಿಸಿ ಆಲೂಗಡ್ಡೆಯಿಂದ ಸೌಂದರ್ಯವನ್ನೂ ಹೆಚ್ಚಿಸಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದಲ್ಲದೆ ಆಲೂಗಡ್ಡೆಯಿಂದ ಬೇರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

PREV
110
ಚಿಪ್ಸ್, ಬೊಂಡಾ ಮಾತ್ರವಲ್ಲ. ಆಲೂಗಡ್ಡೆಯಿಂದ ಈ ಕೆಲಸ ಸಹ ಮಾಡ್ಬಹುದು!

ಗಾಜನ್ನು ಸ್ವಚ್ಛಗೊಳಿಸಲು
ಗಾಜು ಕೆಳಗೆ ಬಿದ್ದು ಒಡೆದುಹೋದರೆ ಅದರ ಚೂರುಗಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಹೀಗಿರುವಾಗ ಯಾರೂ ಕೂಡಾ ಅದರ ಮೇಲೆ ಹೆಜ್ಜೆ ಹಾಕಲು ಬಯಸುವುದಿಲ್ಲ. ಈ ಸಂದರ್ಭದಲ್ಲಿ ಆಲೂಗಡ್ಡೆ ಸಹಾಯಕ್ಕೆ ಬರುತ್ತದೆ. 
 
210

ಗಾಜಿನ ಎಲ್ಲಾ ಚೂರುಗಳನ್ನು ತೆಗೆಯುವುದು ಕಷ್ಟದ ಕೆಲಸ. ಕೆಲವು ತುಣುಕುಗಳು ತುಂಬಾ ಚಿಕ್ಕದಾಗಿದ್ದು, ಅವು ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಆಗ ಆಲೂಗಡ್ಡೆಯನ್ನು ಅರ್ಧದಷ್ಟು ಕತ್ತರಿಸಿ. ಗಾಜು ಒಡೆದು ಬಿದ್ದ ಜಾಗಕ್ಕೆ ಉಜ್ಜಿಕೊಳ್ಳಿ. ಆಗ ಗಾಜಿನ ಸಣ್ಣ ಪುಟ್ಟ ಚೂರುಗಳು ಆಲೂಗಡ್ಡೆಯಲ್ಲಿ  ಅಂಟಿಕೊಳ್ಳುತ್ತವೆ.
 
310

ಕನ್ನಡಕವನ್ನು ಶುಚಿಗೊಳಿಸಲು
ಕನ್ನಡಕವನ್ನು ಧರಿಸಿದರೆ, ಕನ್ನಡಕದ ಮೇಲೆ ಮಂಜು ಆವರಿಸಿದಾಗ ಅದು ಎಷ್ಟು ಕಿರಿಕಿರಿ ಸನಿಸುತ್ತದೆ ಅಲ್ಲವೆ? ಈಗಂತೂ ಫೇಸ್ಮಾಸ್ಕ್ ಹಾಕಿಕೊಂಡು ಕನ್ನಡಕ ಧರಿಸಿರುವವರಿಗಂತೂ ಇದು ಪ್ರತಿದಿನದ ಸಮಸ್ಯೆ.
 
410

ಮಂಜಾದ ಕನ್ನಡಕವನ್ನು ಕ್ಲೀನ್ ಮಾಡೋದು ಈಗ ತುಂಬಾ ಸುಲಭ. ಕನ್ನಡಕದ ಒಳ ಭಾಗದಲ್ಲಿ ಹಸಿ ಆಲೂಗಡ್ಡೆಯನ್ನು ಉಜ್ಜಿಕೊಳ್ಳಿ. ಆಲೂಗಡ್ಡೆಯಲ್ಲಿರುವ ಪಿಷ್ಟವು ಕನ್ನಡಕವನ್ನು ಮಸುಕಾಗದಂತೆ ಮಾಡುತ್ತದೆ.

510

ತುಕ್ಕು ನಿವಾರಿಸಲು
ತುಕ್ಕು ತೆಗೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಯಾವುದೇ ತುಕ್ಕುಹಿಡಿದ ಜಾಗಕ್ಕೆ ಅಥವಾ ತುಕ್ಕು ಹಿಡಿದ ಚಾಕುವಿಗೆ ಆಲೂಗಡ್ಡೆಯನ್ನು ಕತ್ತರಿಸಿ ಉಜ್ಜಿದರೆ ಚಾಕುವನ್ನು ಸ್ವಚ್ಛಗೊಳಿಸಬಹುದು. 

610

ಆಲೂಗಡ್ಡೆಯನ್ನು ಅರ್ಧದಷ್ಟು ಕತ್ತರಿಸಿ ಅದಕ್ಕೆ ಸ್ವಲ್ಪ ಪಾತ್ರೆ ತೊಳಿಯುವ ಲಿಕ್ವಿಡ್ ಮತ್ತು ಬೇಕಿಂಗ್ ಸೋಡಾವನ್ನು ಹಾಕಿ. ತುಕ್ಕು ಸಂಪೂರ್ಣವಾಗಿ ಹೋಗುವವರೆಗೆ ಚಾಕುವಿನ ಮೇಲೆ ಉಜ್ಜಿಕೊಳ್ಳಿ. ನೀರಿನಿಂದ ಚೆನ್ನಾಗಿ ತೊಳೆಯಿರಿ ಮತ್ತು ಒಣಗಲು ಬಿಡಿ.

710

ಬೆಳ್ಳಿಯ ಹೊಳಪನ್ನು ಮತ್ತೆ ಪಡೆಯಲು
ಆಲೂಗಡ್ಡೆ ಬೇಯಿಸಿದ ನೀರನ್ನು ಸಾಮಾನ್ಯವಾಗಿ ಚೆಲ್ಲುತ್ತೇವೆ. ಆ ನೀರಿನಲ್ಲಿ ಸಾಕಷ್ಟು ಪಿಷ್ಟಗಳಿವೆ, ಅದು  ಬೆಳ್ಳಿ ಪಾತ್ರೆಗಳಲ್ಲಿನ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 

810

ಕನಿಷ್ಠ ಒಂದು ಗಂಟೆ ಆಲೂಗಡ್ಡೆ ಬೇಯಿಸಿದ ನೀರಿನಲ್ಲಿ ಬೆಳ್ಳಿಯನ್ನು ಇರಿಸಿ. ಅದು ಒಣಗಿದಾಗ ಅದನ್ನು ಪಾಲಿಷ್ ಮಾಡಿ . ಈಗ ಬೆಳ್ಳಿಯ ಸಾಮಾಗ್ರಿಗಳು ಪಳ ಪಳನೆ ಹೊಳೆಯುತ್ತದೆ.
 
910

ಬಟ್ಟೆ ಮೇಲಿನ ಕಲೆಗಳು
ಬಟ್ಟೆಯ ಮೇಲಾಗಿರುವ ಸಣ್ಣ ಪುಟ್ಟ ಕಲೆಗಳನ್ನು ನಿವಾರಿಸಲು ಆಲೂಗಡ್ಡೆಯಿಂದ ಸಾಧ್ಯ. ಅದನ್ನು ತೊಡೆದುಹಾಕಲು ಅರ್ಧದಷ್ಟು ಹಸಿ ಆಲೂಗಡ್ಡೆಯನ್ನು ಗ್ರೀಸ್ ಸ್ಟೇನ್ ಮೇಲೆ ಹಾಕಿ. ಕಲೆ ಸಂಪೂರ್ಣವಾಗಿ ಹೋಗಲು ಈ  ಪ್ರಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಬೇಕಾಗುತ್ತದೆ.
  
1010

ಮನೆಯಲ್ಲಿ ಸಿಂಪಲ್ ಆಗಿ ಮಾಡಬಹುದಾದಂತಹ ಈ ಟ್ರಿಕ್ ನ್ನು ಇವತ್ತೇ ಟ್ರೈ ಮಾಡಿ, ಸುಲಭವಾಗಿ ಉತ್ತಮ ಫಲಿತಾಂಶ ಬರೋದೇ ಆದ್ರೆ ಮಾಡೋದಕ್ಕೇನು ಕಷ್ಟ ಆಲ್ವಾ? 

click me!

Recommended Stories