ಅಡುಗೆ ಸೋಡಾ ಮತ್ತು ಹರಳೆಣ್ಣೆಅಡುಗೆ ಸೋಡಾವನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ, ಇದರಿಂದ ಮಚ್ಚೆ ನಿವಾರಿಸಬಹುದು, ಅಡುಗೆ ಸೋಡಾ ಅನಗತ್ಯ ಚರ್ಮವನ್ನು ಒಣಗಿಸಲು ಸಮರ್ಥವಾಗಿದೆ.
ಆಪಲ್ ಸೈಡರ್ ವಿನೆಗರ್ (ACV)ACV ನೈಸರ್ಗಿಕ ಅಸಿಟಿಕ್ ಆಮ್ಲವನ್ನು ಹೊಂದಿದ್ದು, ಇದು ರಾಸಾಯನಿಕವಾಗಿ ಮಚ್ಚೆ ಭಾಗವನ್ನು ಸುಡಬಲ್ಲದು, ಇದು ಬಳಸಲು ಸಂಪೂರ್ಣ ಸುರಕ್ಷಿತ.
ಬೆಳ್ಳುಳ್ಳಿ ಎಣ್ಣೆಬೆಳ್ಳುಳ್ಳಿ ಎಣ್ಣೆಯನ್ನು ಸುಲಭವಾಗಿ ಖರೀದಿಸಬಹುದು ಮತ್ತು ಕೆಲವು ದಿನಗಳವರೆಗೆ ಮಚ್ಚೆಯ ಮೇಲೆ ಹಚ್ಚಿಕೊಳ್ಳಬಹುದು. ಈ ಎಣ್ಣೆಯಲ್ಲಿ ಕಿಣ್ವಗಳಿದ್ದು, ಇದು ಮಚ್ಚೆಗೆ ಕಾರಣವಾಗುವ ಕೋಶ ಗುಚ್ಛಗಳನ್ನು ಕರಗಿಸುತ್ತದೆ.
ಅಲೋವೆರಾಅಲೋವೆರಾ ಜೆಲ್ ನಿಯಮಿತವಾಗಿ ಹಚ್ಚಿದರೆ ಮಚ್ಚೆಯನ್ನು ನಿವಾರಿಸಬಹುದು.
ತೆಂಗಿನ ಎಣ್ಣೆತೆಂಗಿನ ಎಣ್ಣೆಯು ಮಚ್ಚೆಯ ಗಾತ್ರವನ್ನು ಕಡಿಮೆ ಮಾಡುವಲ್ಲಿ ತುಂಬಾ ಉಪಯುಕ್ತವೆಂದು ನಂಬಲಾಗಿದೆ. ಪ್ರತಿದಿನ ಮಚ್ಚೆಯ ಮೇಲೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಅದರ ಫಲಿತಾಂಶವನ್ನು ನೋಡಿ.
ಜೇನುಜೇನುತುಪ್ಪದಲ್ಲಿ ನೈಸರ್ಗಿಕ ಉರಿಯೂತ ನಿವಾರಕ ಗುಣಗಳಿದ್ದು, ಇದು ಮಚ್ಚೆಯ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಗಸೆ ಬೀಜದ ಎಣ್ಣೆಅಗಸೆ ಬೀಜದ ಎಣ್ಣೆಯಲ್ಲಿ ಕಪ್ಪು ಕಲೆಗಳನ್ನು ನಿವಾರಿಸುವ ಗುಣಗಳಿವೆ, ಆದ್ದರಿಂದ ಮಚ್ಚೆಗಳನ್ನು ಹೋಗಲಾಡಿಸಲು ಇದು ಸಾಮಾನ್ಯವಾದ ಮನೆಮದ್ದಾಗಿದೆ.
ಆಲೂಗಡ್ಡೆ ರಸಆಲೂಗಡ್ಡೆ ಯ ರಸದಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಗಳಿದ್ದು, ಇದು ಮಚ್ಚೆಯು ನೈಸರ್ಗಿಕ ಟೋನ್ ಗಿಂತ ಲೂಸ್ ಆಗಲು ಸಹಾಯ ಮಾಡುತ್ತದೆ.
ಟೀ ಟ್ರೀ ಎಣ್ಣೆಮಚ್ಚೆಯ ಮೇಲೆ ದಿನಕ್ಕೆ ಎರಡು ಬಾರಿ ಹಚ್ಚಿದರೆ, ಟೀ ಟ್ರೀ ಎಣ್ಣೆಯು ನೈಸರ್ಗಿಕವಾಗಿ ಮಚ್ಚೆಯನ್ನು ನಿವಾರಿಸಬಹುದು.