ಸ್ಮೆಲ್ಲಿ ಶೂಸ್? ನಿಮ್ಮ ಪಾದರಕ್ಷೆಯಿಂದ ವಿಪರೀತ ವಾಸನೆ ಬರುತ್ತಿದ್ದರೆ, ಅದನ್ನು ಹೋಗಲಾಡಿಸಲು ನಿಮ್ಮ ಶೂಗಳಲ್ಲಿ ಸ್ವಲ್ಪ ಉಪ್ಪನ್ನು ಚಿಮುಕಿಸಿ. ಇದರಿಂದ ವಾಸನೆ ನಿವಾರಣೆಯಾಗುತ್ತದೆ.
ಬಟ್ಟೆಯಲ್ಲಿ ಕಲೆ? ಈ ಕಲೆಯಿಂದ ಮುಕ್ತಿ ಪಡೆಯಲು ಒಂದು ತ್ವರಿತ ವಿಧಾನವೆಂದರೆ ನಿಮ್ಮ ಕಲೆ ಇರುವ ಬಟ್ಟೆಗಳನ್ನು ತಣ್ಣನೆಯ ಉಪ್ಪು ನೀರಿನಲ್ಲಿ ನೆನೆಸಿ. ನಂತರ ಸೋಪಿನ ಬಿಸಿ ನೀರಿನಿಂದ ತೊಳೆಯಿರಿ.
ಕಾಫಿ ಜಾಸ್ತಿ ಕಹಿ ಆಗಿದ್ಯಾ? ಕೆಲವೊಮ್ಮೆ ಕಾಫಿ ನಿಜವಾಗಿಯೂ ಕಹಿಯಾಗಿರಬಹುದು, ಮತ್ತು ಅದನ್ನು ಕಡಿಮೆ ಕಹಿಯನ್ನಾಗಿ ಮಾಡಲು, ಒಂದು ಚಿಟಿಕೆ ಉಪ್ಪನ್ನು ಸೇರಿಸಿ, ಅದರ ರುಚಿಯನ್ನು ಹೆಚ್ಚಿಸಬಹುದು.
ಕುದಿಯುವ ಮುನ್ನ ಒಂದು ಚಮಚ ಉಪ್ಪನ್ನು ನೀರಿನಲ್ಲಿ ಹಾಕಿ ಮೊಟ್ಟೆಗಳನ್ನು ಕುದಿಸಿ. ಇದರಿಂದ ಸಿಪ್ಪೆಗಳನ್ನು ಸುಲಭವಾಗಿ ತೆಗೆಯಬಹುದು. ಜೊತೆಗೆ ಮೊಟ್ಟೆ ಒಡೆದು ಹೋಗುವುದಿಲ್ಲ.
ಉಪ್ಪು ಬೆಂಕಿ ಯನ್ನು ನಂದಿಸಲು ಇರುವ ಅತ್ಯುತ್ತಮ ಮಾರ್ಗ. ಸಡನ್ ಆಗಿ ಬೆಂಕಿ ಹಚ್ಚಿದರೆ ಅದನ್ನು ಆರಿಸಲು ಉಪ್ಪು ಬಳಸಿ.
ಪೊರಕೆ: ಒಂದು ಬಕೆಟ್ ಬಿಸಿ ಉಪ್ಪು ನೀರಿನಲ್ಲಿ ಪೊರಕೆಯ ಸ್ಟ್ರಾ ಬ್ರಿಸ್ಟಲ್ ಗಳನ್ನು ನೆನೆಸಿ ನಿಮ್ಮ ಹೊಸ ಪೊರಕೆಯ ಶೆಲ್ಫ್ ಲೈಫ್ ಅನ್ನು ಹೆಚ್ಚಿಸಿ. 20 ನಿಮಿಷ ಹಾಗೆ ಬಿಡಿ.
ತುರಿಕೆ ಮತ್ತು ಗೀರು: ಕಿರಿಕಿರಿಯಾದ ಚರ್ಮದ ಮೇಲೆ ಬಿಸಿ ಉಪ್ಪು ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ಇರಿಸಿ. ಇದು ನಿಮಗೆ ತಕ್ಷಣದ ನಿರಾಳತೆ ನೀಡುತ್ತದೆ.