ಭೂಮಿ ತಾಯಿ ರಕ್ಷಣೆ ನಮ್ಮೆಲ್ಲರ ಹಕ್ಕು, ಪ್ಲಾಸ್ಟಿಕ್ಕಿಗೆ ಹೇಳಿ ಗುಡ್ ಬೈ

First Published Nov 22, 2020, 4:16 PM IST

ನಮ್ಮ ಜೀವನದಲ್ಲಿ ನಾವು ಪ್ಲಾಸ್ಟಿಕ್ ಗೆ ತುಂಬಾನೇ ಎಡಿಕ್ಟ್ ಆಗಿ ಬಿಟ್ಟಿದ್ದೇವೆ. ಆದರೆ ನಾವು ಆದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಡೆಯಬೇಕು. ಅದು ಮೊದಲು ನಮ್ಮ ಅಡುಗೆಮನೆಯಿಂದ ಪ್ರಾರಂಭಿಸಬೇಕು. ಮನೆಯನ್ನು ನೋಡಿಕೊಳ್ಳುವ ಜವಾಬ್ಧಾರಿ ಹೆಂಗಸರಿಗೆ ಸೇರಿದ್ದು ಹಾಗಾಗಿ ನಾವು ಮೊದಲು ಮಾಡುವ ಆದ್ಯ ಕರ್ತವ್ಯವೇನೆಂದರೆ ನಮ್ಮ ನಮ್ಮ ಮನೆಗಳಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಬೇಕು ಮತ್ತು ಮರುಬಳಕೆ ಆಗುವ ವಸ್ತುಗಳಿಗೆ ಆದ್ಯತೆ ನೀಡಬೇಕು. ಇಂತಹ ಸಣ್ಣ ಪ್ರತಿಜ್ಞೆ ನಮ್ಮ ಪರಿಸರವನ್ನು ಉಳಿಸಲು ಬಹಳ ಸಹಾಯ ವಾಗುತ್ತದೆ. ಅಲ್ಲದೆ ನಮ್ಮ ನಂತರದ ಪೀಳಿಗೆಗೆ ಮಾದರಿಯಾಗಿರೋಣ. 

ಮೊದಲನೆಯದಾಗಿ ನಮ್ಮ ಮನೆಗಳಲ್ಲಿ ಮರುಬಳಕೆ ಆಗದ ವಸ್ತುಗಳು ಹಾಲಿನ ತೊಟ್ಟೆ , ದಿನಸಿ ತೊಟ್ಟೆ ತಿಂಡಿಗಳ ಕವರ್, ಅಲ್ಲದೆ ದಿನನಿತ್ಯ ಉಪಯೋಗಿಸುವ ಹಲ್ಲು ತೊಳೆಯುವ ಬ್ರಷ್, ಪೇಸ್ಟ್ ಟ್ಯೂಬ್, ಪಾತ್ರೆ ತೊಳೆಯುವ ಬ್ರಷ್ ಗಳು ಸ್ಕ್ರಬ್, ನಾವು ಬಳಸುವ ಪ್ಲಾಸ್ಟಿಕ್ ಡಬ್ಬಗಳು, ಸಾಮಾನುಗಳನ್ನು ತುಂಬಿಡುವ ಡಬ್ಬಗಳು, ಕೈ ತೊಳೆಯಲು ಹ್ಯಾಂಡ್ ವಾಶ್ ಬಾಟಲ್, ಶಾಂಪೂ ಬಾಟಲ್, ಸುಗಂಧದ್ರವ್ಯದ ಬಾಟಲ್ ಮುಚ್ಚಳ, ಟಾಯ್ಲೆಟ್ ಕ್ಲೀನ್ ಮಾಡೋ ಲಿಕ್ಯುಡ್ ಬಾಟಲ್, ಡೈಪರ್, ಪ್ಯಾಡ್, ಸೋಪಿನ ಹೊರಕವರ್, ಹೀಗೆ ಹುಡುಕಿದರೆ ಇನ್ನು ಇರುತ್ತವೆ ಇವೆಲ್ಲವು ಪ್ಲಾಸ್ಟಿಕ್ ಗಳು. ನಾವು ಇವುಗಳ ಬದಲಾಗಿ ಬೇರೆ ವಸ್ತುಗಳನ್ನು ಆದಷ್ಟು ಬಳಕೆ ಮಾಡಿದರೆ ಅದರಿಂದ ಹೆಚ್ಚಿನ ಪ್ರಯೋಜನಗಳಿವೆ.
undefined
ಮೊದಲು ಪ್ಲಾಸ್ಟಿಕ್ ಡಬ್ಬಗಳ ಬದಲು ಸ್ಟೀಲ್, ಮರ, ಗ್ಲಾಸ್ ಗಳ ಜಾರ್ ಗಳನ್ನು ಬಳಸಿ. ಇವು ಬಹಳ ಕಾಲದವರೆಗೆ ಬಾಳಿಕೆ ಬರುತ್ತದೆ. ಜೊತೆಗೆ ಪ್ಲಾಸ್ಟಿಕ್ ನಿಂದ ಉಂಟಾಗುವ ಸಮಸ್ಯೆಗಳು ಸಹ ಉಂಟಾಗುವುದಿಲ್ಲ.
undefined
ಪ್ಲಾಸ್ಟಿಕ್ ಸ್ಪೂನ್, ಪ್ಲೇಟ್ ಬದಲು ಸ್ಟೀಲ್ ಹಾಗು ಮರದ ಸ್ಪೂನ್ ಬಳಸಿ. ಪ್ಲಾಸ್ಟಿಕ್ ಸ್ಪೂನ್ ಬಳಕೆಯಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಆದುದರಿಂದ ಇದರ ಬದಲಾಗಿ ಸ್ಟೀಲ್ ಅಥವಾ ಮರದ ವಸ್ತು ಬಳಸಿ.
undefined
ಹಾಲನ್ನು ತೆಗೆದುಕೊಳ್ಳುವುದರಿಂದ ಅದರ ಜೊತೆಗೆ ಬರುವ ಕವರ್ ಗಳು ಮನೆಯಲ್ಲಿ ಸೇರಿ, ಅದರಿಂದಲೂ ಮಾಲಿನ್ಯ ಉಂತಂಗಬಹುದು. ಅದರ ಬದಲು ಹಾಲು ಹಾಕುವವರಿಂದ ಪಡೆಯಿರಿ.
undefined
ಪಾತ್ರೆ ತೊಳೆಯುವ ಸ್ಕ್ರಬ್ ಬದಲು ನಾರಿನ ಬ್ರಷ್ ಗಳನ್ನು ಬಳಸಿ. ಅಥವಾ ತೆಂಗಿನ ನಾರನ್ನು ಬಳಸಬಹುದು. ಇದನ್ನು ಬಿಸಾಕಿದರೂ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
undefined
ಆದಷ್ಟು ನೈಸರ್ಗಿಕ ವಸ್ತುಗಳ ಬಳಕೆ ಮಾಡಿ ಶಾಂಪೂ ಸೋಪ್ ಗಳನ್ನು ಬಳಸುವ ಬದಲಾಗಿ ಅಲೋವೆರಾ ಜೆಲ್, ಕಡ್ಲೆ ಹಿಟ್ಟು, ನೊರೆಕಾಯಿ ಬಳಕೆ ಮಾಡಬಹುದು.
undefined
ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆ ಬ್ಯಾಗುಗಳನ್ನು ಬಳಸಬಹುದು. ಇವುಗಳನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದು ಹೆಚ್ಚು ಕಾಲ ಬಾಳಿಕೆ ಕೂಡ ಬರುತ್ತದೆ.
undefined
ಹಳೆ ಪ್ಲಾಸ್ಟಿಕ್ ಡಬ್ಬಗಳನ್ನು ಬಿಸಾಕ ಬೇಡಿ. ಬದಲಾಗಿ ಮಣ್ಣು ತುಂಬಿಸಿ ಗಿಡಗಳನ್ನು ನೆಡಿರಿ. ಅಥವಾ ಅದಕ್ಕೆ ಮತ್ತಷ್ಟು ಮೆರುಗು ನೀಡಿ,ಇದನ್ನು ಮನೆ ಅಲಂಕಾರ ವಸ್ತುವಾಗಿ ಸಹ ಬಳಕೆ ಮಾಡಬಹುದು.
undefined
ಮನೆಯಲ್ಲೇ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಮನೆಯಲ್ಲಿ ಉಳಿದ ಹಸಿ ಕಸಗಳನ್ನು ಮರದ ಬುಡಕ್ಕೆ ಹಾಕಿ ಅವುಗಳಿಗೆ ಗೊಬ್ಬರ ಹಾಕಿದ ಹಾಗಾಗುತ್ತದೆ. ಹಸಿ ಕಸ, ಒಣ ಕಸ ವೆಂದು ಬೇರೆ ಬೇರೆಯಾಗಿ ಇಡಿ. ಇದು ಕಸ ತೆಗೆದು ಕೊಂಡು ಹೋಗುವವರಿಗೆ ಸಹಾಯವಾಗುತ್ತದೆ.
undefined
ಆದಷ್ಟು ಮಕ್ಕಳಿಗೆ ಡೈಪರ್ ಹಾಕುವುದನ್ನು ಕಡಿಮೆ ಮಾಡಿ. ಅದರ ಬದಲು ಪುನರ್ಬಳಕೆ ಮಾಡುವ ಡೈಪರ್ ಉಪಯೋಗಿಸಿ ಪ್ಯಾಡ್ ಬದಲು ಟಂಪೂನ್ಸ್, ಮೇನ್ಸ್ಟ್ರುವಲ್ ಕಪ್ , ಬ್ಯಾಂಬೂ ಫೈಬರ್ ಸ್ಯಾನಿಟರಿ ಪ್ಯಾಡ್ ಪುನರ್ಬಳಕೆ ಆಗುವ ಪ್ಯಾಡ್ ಗಳನ್ನು ಉಪಯೋಗಿಸಿ. ಹೀಗೆ ಇಂತಹ ವಸ್ತುಗಳ ಬಳಕೆ ಪ್ಲಾಸ್ಟಿಕ್ ಮುಕ್ತವಾಗಿರಿಸಲು ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ.
undefined
click me!