ಸುಂದರ ತ್ವಚೆ, ಆರೋಗ್ಯಕರ ಕೂದಲಿಗೆ ಬೆಲ್ಲ ಮಾಡುತ್ತೆ ಮ್ಯಾಜಿಕ್..!

First Published Nov 21, 2020, 6:19 PM IST

ನಮ್ಮ ಜೀವನಶೈಲಿ ಖಂಡಿತವಾಗಿಯೂ ಬದಲಾಗಿದೆ, ಆದರೆ ಬೆಲ್ಲ ಇನ್ನೂ ನಮ್ಮ ತಟ್ಟೆಯ ಒಂದು ಭಾಗವಾಗಿದೆ. ಬೆಲ್ಲವು ಆಹಾರದಲ್ಲಿ ರುಚಿಯಾಗಿರುವುದು ಮಾತ್ರವಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬೆಲ್ಲವು ಆಂಟಿ-ಆಕ್ಸಿಡೆಂಟ್ ಅನ್ನು ಹೊಂದಿದ್ದು ಅದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮುಖದ ಮೇಲೆ ಜಾದೂ ಮಾಡುತ್ತದೆ. ಹೌದು ಬೆಲ್ಲ ಸಹ ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. 

ಬೆಲ್ಲ ತಿನ್ನುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ದೂರವಾಗುತ್ತದೆ. ಜೊತೆಗೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಇದರ ಬಳಕೆಯು ಕೂದಲನ್ನು ಮೃದು, ಗಾಢ ಮತ್ತು ದಪ್ಪವಾಗಿಸುತ್ತದೆ. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ, ಆಗ ನಿಮ್ಮ ಹೊಟ್ಟೆಯ ತೊಂದರೆಗಳು ದೂರವಾಗುತ್ತವೆ. ಬೆಲ್ಲ ಚರಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ...
undefined
ಬೆಲ್ಲದ ಹೇರ್ ಪ್ಯಾಕ್ ನಿಮ್ಮ ಚರ್ಮ ಮತ್ತು ಕೂದಲಿನ ಹೊಳಪು ಹೆಚ್ಚಿಸುತ್ತದೆ. ಈ ಪ್ಯಾಕ್ ತಯಾರಿಸಲು ನಿಮಗೆ ಬೆಲ್ಲದ ಪುಡಿ ಬೇಕು. ನಿಮ್ಮಲ್ಲಿ ಬೆಲ್ಲ ಪುಡಿ ಇಲ್ಲದಿದ್ದರೆ ಬೆಲ್ಲವನ್ನು ಬ್ಲೆಂಡರ್‌ನಲ್ಲಿ ಪುಡಿಮಾಡಿ.
undefined
ಬೆಲ್ಲ ಚರ್ಮ ಮತ್ತು ಕೂದಲಿಗೆ ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಬೆಲ್ಲದ ಫೇಸ್ ಪ್ಯಾಕ್ ಮತ್ತು ಹೇರ್ ಪ್ಯಾಕ್ ಅನ್ನು ಬಳಸುವ ಮೂಲಕ ನಿಮ್ಮ ಕೂದಲು ಮತ್ತು ಚರ್ಮವನ್ನು ಹೇಗೆ ಸುಧಾರಿಸಬಹುದು ಎಂದು ನಾವು ನಿಮಗೆ ಹೇಳೋಣ.
undefined
ಮುಖದ ಗುಳ್ಳೆಗಳನ್ನು ತೆಗೆದು ಹಾಕಲು ಮತ್ತು ಸುಂದರ ತ್ವಚೆಗಾಗಿ ಬೆಲ್ಲದ ಫೇಸ್ ಪ್ಯಾಕ್:ಬೇಕಾಗುವ ವಸ್ತುಗಳು : ಬೆಲ್ಲ, ಟೊಮ್ಯಾಟೋ ರಸ, ನಿಂಬೆ ರಸ, ಅರಿಶಿನ,
undefined
ಈ ಫೇಸ್ ಪ್ಯಾಕ್ ಮಾಡುವುದು ಹೇಗೆಮೊದಲಿಗೆ, ಒಂದು ಟೀಚಮಚ ಟೊಮೆಟೊ ಜ್ಯೂಸ್, , ಬೆಲ್ಲದ ಪುಡಿ, ಕೆಲವು ಹನಿ ನಿಂಬೆ ರಸ ಮತ್ತು ಒಂದು ಚಿಟಿಕೆ ಅರಿಶಿನವನ್ನು ಒಂದು ಟೀ ಚಮಚದಲ್ಲಿ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಚೆನ್ನಾಗಿ ಹಚ್ಚಿ ,10-15 ನಿಮಿಷ ಬಿಡಿ. 15 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿದರೆ ಉತ್ತಮ.
undefined
ಸುಕ್ಕುಗಳನ್ನು ಕಡಿಮೆ ಮಾಡಲು :ಬೇಕಾಗುವ ಸಾಮಗ್ರಿಗಳು : ಬೆಲ್ಲ ಪುಡಿ, ಜೇನು, ನಿಂಬೆ ರಸ
undefined
ಈ ಪ್ಯಾಕ್ ತಯಾರಿಸುವುದು ಹೇಗೆ:ಒಂದು ಚಮಚ ಬೆಲ್ಲ ಪುಡಿಯನ್ನು ತೆಗೆದುಕೊಂಡು, ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. 10 ನಿಮಿಷಗಳ ನಂತರ, ಅದನ್ನು ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ವಯಸ್ಸಾಗುವಿಕೆಯ ಲಕ್ಷಣವನ್ನು ತೊಡೆದು ಹಾಕುತ್ತದೆ ಜೊತೆಗೆ ತ್ವಚೆ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.
undefined
ಕೂದಲಿಗೆ ಬೆಲ್ಲದ ಪ್ಯಾಕ್ ಬಳಸಿ:ಬೇಕಾಗುವ ಸಾಮಾಗ್ರಿಗಳು : ಬೆಲ್ಲ ಪುಡಿ, ಮುಲ್ತಾನಿ ಮಿಟ್ಟಿ, ಮೊಸರು,
undefined
ಈ ಪ್ಯಾಕ್ ತಯಾರಿಸುವುದು ಹೇಗೆಎರಡು ಚಮಚ ಮುಲ್ತಾನಿ ಮಿಟ್ಟಿ, ಎರಡು ಟೀ ಚಮಚ ಬೆಲ್ಲದ ಪುಡಿ ಮತ್ತು ಸ್ವಲ್ಪ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ. ಇದರೊಂದಿಗೆ ನಿಮ್ಮ ಕೂದಲನ್ನು ಮಸಾಜ್ ಮಾಡಿ. ಇದನ್ನು 10-15 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ. 15 ನಿಮಿಷಗಳ ನಂತರ ನೀರು ಮತ್ತು ಶಾಂಪೂಗಳಿಂದ ಕೂದಲನ್ನು ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾತ್ರ ಕೂದಲಿಗೆ ಹಚ್ಚಿ. ಬೆಲ್ಲ, ಮುಲ್ತಾನಿ ಮಿಟ್ಟಿ ಮತ್ತು ಮೊಸರು ಕೂದಲಿಗೆ ಉತ್ತಮ ಪರಿಹಾರವಾಗಿದೆ.
undefined
click me!