ಮಕ್ಕಳಿಗೆ ಗಂಜಿ ನೀರು ಕುಡಿಸೋದ್ರಿಂದ ಏನು ಪ್ರಯೋಜನ..?

First Published Jul 21, 2021, 9:43 AM IST

ಅಕ್ಕಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಗುಣಗಳಿವೆ. ತಜ್ಞರು ಚಿಕ್ಕ ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವಂತೆ ಸಲಹೆ ನೀಡುತ್ತಾರೆ. ಅಕ್ಕಿಯ ಒಳಗೆ ಇರುವ ಎಲ್ಲಾ ಪೋಷಕಾಂಶಗಳು ಅಕ್ಕಿ ನೀರಿನಲ್ಲಿವೆ. ಇದು ಅವರ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಆರೋಗ್ಯ ಸಮಸ್ಯೆಯಿಂದ ಅವರಿಗೆ ಪರಿಹಾರ ವನ್ನೂ ಒದಗಿಸುತ್ತದೆ. ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವುದು ಏಕೆ ಪ್ರಯೋಜನಕಾರಿ ಇಲ್ಲಿದೆ ಮಾಹಿತಿ... 

ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡಲು ಸರಿಯಾದ ಸಮಯ ಯಾವುದು:ಡಬ್ಲ್ಯೂಹೆಚ್ಒ ಪ್ರಕಾರ, ನವಜಾತ ಶಿಶುಗಳು ಹುಟ್ಟಿದ 6 ತಿಂಗಳವರೆಗೆ ಹಾಲು ಮಾತ್ರ ಉಣಿಸಬೇಕು. ನಂತರ ಅವರಿಗೆ ಸ್ತನ್ಯಪಾನದೊಂದಿಗೆ ಫಾರ್ಮುಲಾ ಹಾಲನ್ನು ನೀಡಬಹುದು. ಮತ್ತೊಂದೆಡೆ, ಸಣ್ಣ ಮಕ್ಕಳಿಗೆ ಕೆಲವು ಘನ ಆಹಾರಗಳನ್ನು ನೀಡುವ ಮೊದಲು ಅನ್ನ ಬೇಯಿಸಿದ ನೀರಿನಂತಹ ವಸ್ತುಗಳನ್ನು ನೀಡಬಹುದು. ಇದು ಘನ ಆಹಾರವನ್ನು ಜೀರ್ಣಿಸಿಕೊಳ್ಳಲು ಅವರ ದೇಹವನ್ನು ಸಿದ್ಧಪಡಿಸುತ್ತದೆ.
undefined
ಚಿಕ್ಕ ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವ ಪ್ರಯೋಜನಗಳು:ಆಹಾರ ತಜ್ಞೆರ ಪ್ರಕಾರ, ಅಕ್ಕಿ ನೀರಿನಲ್ಲಿ ಮಕ್ಕಳಿಗೆ ಪ್ರಯೋಜನಕಾರಿ ವಿಟಮಿನ್ ಗಳು ಮತ್ತು ಖನಿಜಗಳಿವೆ. ಇದು ಸರಿಯಾದ ಸಮಯದಲ್ಲಿ ಸ್ತನ್ಯಪಾನದ ಮೇಲೆ ಮಕ್ಕಳ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡಬಹುದು.
undefined
ಸ್ತನ್ಯಪಾನಕ್ಕೆ ಪರ್ಯಾಯವಾಗಿ ಇದನ್ನು ಯಾವುದೇ ರೀತಿಯಲ್ಲಿ ನೀಡಲು ಸಾಧ್ಯವಿಲ್ಲ. ಚಿಕ್ಕ ಮಕ್ಕಳಿಗೆ ಅನ್ನ ಬೇಯಿಸಿದನೀರು ನೀಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. ...
undefined
ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವುದರಿಂದ ಅವರಿಗೆ ವಿಟಮಿನ್ ಬಿ6, ನಿಯಾಸಿನ್ ಮತ್ತು ರಿಬೋಫ್ಲೇವಿನ್ ನಂತಹ ಪೋಷಕಾಂಶಗಳು ನೀಡುತ್ತವೆ. ಮಕ್ಕಳ ಬೆಳವಣಿಗೆ ಮತ್ತು ಬಲವಾದ ಆರೋಗ್ಯಕ್ಕೆ ವಿಟಮಿನ್ ಬಿ ಸಾಕಷ್ಟು ಅಗತ್ಯವಾಗಿದೆ.
undefined
ಚಿಕ್ಕ ಮಕ್ಕಳ ದೇಹ ಅಭಿವೃದ್ಧಿಹೊಂದುತ್ತದೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ಅಕ್ಕಿ ನೀರಿನಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್ ಗಳಿವೆ, ಇದು ಮಕ್ಕಳು ಆಯಾಸ ಮತ್ತು ದೌರ್ಬಲ್ಯವನ್ನು ಅನುಭವಿಸುವುದನ್ನು ತಡೆಯುತ್ತದೆ.
undefined
ಮಕ್ಕಳಿಗೆ ಅತಿಸಾರದ ಸಮಸ್ಯೆಗಳು ಇರುವುದು ತುಂಬಾ ಸಾಮಾನ್ಯವಾಗಿದೆ. ಅತಿಸಾರದಲ್ಲಿ ಅನ್ನ ಬೇಯಿಸಿದ ನೀರನ್ನು ನೀಡುವ ಮೂಲಕ ಚಿಕ್ಕ ಮಕ್ಕಳಿಗೆ ಅಗತ್ಯ ಶಕ್ತಿಯನ್ನು ತುಂಬಬಹುದು ಮತ್ತು ಇದು ಅತಿಸಾರವನ್ನು ನಿವಾರಿಸಲು ಸಹಾಯ ಮಾಡುತ್ತದೆ.
undefined
ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವುದು ಹೇಗೆ?:ಮೊದಲು 2 ರಿಂದ 3 ಟೀ ಚಮಚ ಬಿಳಿ ಅಕ್ಕಿಯನ್ನು ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದು ಅದರ ಕೊಳೆಯನ್ನು ತೆಗೆಯಿರಿ.ನಂತರ ಒಂದು ಬಾಣಲೆಗೆ ಅಕ್ಕಿ ಮತ್ತು 1 ಕಪ್ ನೀರನ್ನು ಸೇರಿಸಿ ಕುದಿಸಿ.
undefined
ಅಕ್ಕಿ ಮೃದುವಾದಾಗ, ನೀರನ್ನು ಒಂದು ಕಪ್ ಗೆ ಆಗುವವರೆಗೆ ಕುದಿಸಿ. ನಂತರ ಅದನ್ನು ಸೋಸಿ.ಈ ನೀರನ್ನು ಚಿಕ್ಕ ಮಕ್ಕಳಿಗೆ ಚಮಚಗಳ ಸಹಾಯದಿಂದ ನೀಡಬಹುದು.
undefined
ವಿಶೇಷ ಸೂಚನೆ ಮಕ್ಕಳಿಗೆ ಈ ರೀತಿಯಲ್ಲಿ ಅನ್ನ ಬೇಯಿಸಿದ ನೀರನ್ನು ನೀಡುವ ಮುನ್ನ ವೈದ್ಯರ ಬಳಿ ಈ ಬಗ್ಗೆ ಕೇಳಿ ನಂತರ ಮಕ್ಕಳಿಗೆ ಅದನ್ನು ನೀಡಿದರೆ ಉತ್ತಮ. ಕೆಲವೊಮ್ಮೆ ಮಕ್ಕಳ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಆದುದರಿಂದ ವೈದ್ಯಕೀಯ ಸಲಹೆಯ ಮೇರೆಗೆ ಇದನ್ನು ಬಳಸಿ.
undefined
click me!