ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

First Published | Jul 19, 2021, 12:29 PM IST

ಸೆಲ್ಫಿ ಹುಚ್ಚಿಗೆ ಮತ್ತೊಂದು ಜೀವ ಬಲಿಯಾದ ಘಟನೆ ವರದಿಯಾಗಿದೆ. ಹಾಂಗ್ ಕಾಂಗ್ ಮಾಡೆಲ್ 32 ವರ್ಷದ ಸೋಫಿಯಾ ಚೆಯುಂಗ್ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜುಲೈ 10ರಂದು ಹಾಂಕಾಂಗ್‌ನಲ್ಲಿ 16 ಅಡಿ ಬಂಡೆಯಿಂದ ಜಾರಿ ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು  ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಗಲೇ ಜೀವ ಕಳೆದುಕೊಂಡಿದ್ದಾರೆ ಎಂದು ಡಾಕ್ಟರ್‌ ಘೋಷಿಸಿದರು. 

ಹಾಂಗ್ ಕಾಂಗ್ ಮಾಡೆಲ್32 ವರ್ಷದ ಸೋಫಿಯಾ ಚೆಯುಂಗ್ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಂಡಿದ್ದಾರೆ.
ಜುಲೈ 9 ರಂದು, ಸೋಫಿಯಾ ಕೊನೆಯ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
Tap to resize

ಅವರು ಬೀಚ್‌ನಲ್ಲಿಕುಳಿತಿರುವ ಫೋಟೋಗೆ ಉತ್ತಮ ದಿನಗಳು ಬರಲಿವೆ, ಅವುಗಳಿಗೆ ಶನಿವಾರ ಮತ್ತು ಭಾನುವಾರ ಎಂದು ಕರೆಯಲಾಗುತ್ತದೆ ಎಂದು ಕ್ಯಾಪ್ಷನ್‌ ನೀಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಸೋಫಿಯಾ ಶನಿವಾರ ತನ್ನ ಫ್ರೆಂಡ್ಸ್‌ ಜೊತೆಗೆ ಹಾಂಗ್ ಕಾಂಗ್‌ನ ಹಾ ಪಾಕ್ ಲೈ ನೇಚರ್ ಪಾರ್ಕ್‌ಗೆ ಹೋಗಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಸೋಫಿಯಾ ಚೆಯುಂಗ್ ತನ್ನ ಮೂವರು ಸ್ನೇಹಿತರೊಂದಿಗೆ ಹಾ ಪಾಕ್ ಲೈ ಪಾರ್ಕ್‌ಗೆ ಹೋಗಿದ್ದರು.
ವಾಸ್ತವವಾಗಿ, ಸೋಫಿಯಾ ಜಲಪಾತದ ಮೇಲ್ಭಾಗದಲ್ಲಿದ್ದರು ಮತ್ತು ಅಲ್ಲಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಅಪಘಾತದ ನಂತರ, ಸ್ನೇಹಿತರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು..
ಸೋಫಿಯಾರ ಸಾವಿನ ಸುದ್ದಿ ಫ್ಯಾನ್ಸ್‌ಗೆ ಶಾಕ್ ನೀಡಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಗೌರವ ಸಲ್ಲಿಸಿದರು.
ಸೋಫಿಯಾ ಇನ್‌ಸ್ಟಾಗ್ರಾಮ್‌ನಲ್ಲಿ 17.2 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಫೇಮಸ್‌ ಮಾಡೆಲ್‌.

Latest Videos

click me!