YouTube ಮೂಲಕ ಕೋಟ್ಯಾಧಿಪತಿಗಳಾದ ಭಾರತೀಯ ಮಹಿಳೆಯರು… ನೀವ್ಯಾಕೆ ಸುಮ್ನೆ ಕೂತಿದ್ದೀರಾ?

Published : Aug 31, 2025, 06:51 PM IST

ಜನರಿಗೆ ಇಂದು ಸಾಮಾಜಿಕ ಮಾಧ್ಯಮಗಳಾದ Instagram ಮತ್ತು YouTube ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಅಂತದುರಲ್ಲಿ ಯೂಟ್ಯೂಬ್ ಮೂಲಕ ವಿವಿಧ ಕಂಟೆಂಟ್ ಕ್ರಿಯೇಟ್ ಮಾಡಿ ಕೋಟ್ಯಾಧಿಪತಿಗಳಾದ ಮಹಿಳಾ ಯೂಟ್ಯೂಬರ್ ಗಳು ಯಾರೆಂದು ನೋಡೋಣ.

PREV
111
ಶ್ರೀಮಂತ ಮಹಿಳಾ ಯೂಟ್ಯೂಬರ್ ಗಳು

ಇಂದಿನ ಕಾಲದಲ್ಲಿ, ಸಾಮಾಜಿಕ ಮಾಧ್ಯಮವು ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಮಾಧ್ಯಮವಾಗಿದೆ. ಜನರು Instagram ಮತ್ತು YouTube ನಲ್ಲಿ ಕಂಟೆಂಟ್ ಕ್ರಿಯೇಟ್ ಮಾಡೂವ ಮೂಲಕ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಭಾರತೀಯ ಮಹಿಳಾ ಯೂಟ್ಯೂಬರ್‌ಗಳು ತಮ್ಮ ಕಠಿಣ ಪರಿಶ್ರಮದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಮತ್ತು ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಹಾಸ್ಯ ಮತ್ತು ತಂತ್ರಜ್ಞಾನದಿಂದ ಆಹಾರ ಮತ್ತು ಸೌಂದರ್ಯದವರೆಗೆ, ವಿಡೀಯೋ ಮಾಡಿ, ಅತಿ ಹೆಚ್ಚು ಹಣ ಗಳಿಸಿದ ಯೂಟ್ಯೂಬರ್ ಗಳು ಯಾರು ನೋಡೋಣ.

211
ಹಿಮಾಂಶಿ ಟೆಕ್ವಾನಿ

"ದಟ್ ಗ್ಲಾಮ್ ಗರ್ಲ್"  (That glam girl) ಚಾನೆಲ್ ಮೂಲಕ ಪ್ರಸಿದ್ಧಿಯಾಗಿರುವ ಹಿಮಾಂಶಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ 52 ಲಕ್ಷ ಚಂದಾದಾರರಿದ್ದಾರೆ. ಕೆಲವು ತಿಂಗಳ ಹಿಂದೆ, ಗ್ಲಾಮರ್ ಗರ್ಲ್ ಮತ್ತು ಅವರ ಪತಿ ರಿಷಿ ಅಥ್ವಾನಿ ವಿಚ್ಛೇದನದಿಂದಾಗಿ ವಿವಾದಕ್ಕೆ ಸಿಲುಕಿದ್ದರು. .ಇವರ ನೆಟ್ ವರ್ತ್ 1-2 ಕೋಟಿಯಾಗಿದೆ.

311
ಕೋಮಲ್ ಗುಡನ್

ಕೋಮಲ್ ಗುಡೆನ್ ತನ್ನ ಯೂಟ್ಯೂಬ್ (Youtube) ಸೌಂದರ್ಯ ಮತ್ತು ಫ್ಯಾಷನ್ ಕುರಿತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಪ್ರಾರಂಭಿಸಿದರು. ಅವರು ಚರ್ಮದ ಆರೈಕೆ, ಲೈಫ್ ಸ್ಟೈಲ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು, ನಂತರ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದರು. ಅವರ ಚಾನೆಲ್ ಅನ್ನು ಸೂಪರ್ ಸ್ಟೈಲ್ ಟಿಪ್ಸ್ ಎಂದು ಹೆಸರಿಸಲಾಗಿದೆ ಮತ್ತು ಪ್ರಸ್ತುತ ಅವರು 39 ಲಕ್ಷ ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ.

411
ಕಬಿತಾ ಸಿಂಗ್

ಕಬಿತಾ ಸಿಂಗ್ ಅವರ "ಕಬಿತಾಸ್ ಕಿಚನ್" ಚಾನೆಲ್ 2014 ರಲ್ಲಿ ಪ್ರಾರಂಭವಾಯಿತು, ಪ್ರಸ್ತುತ ಇದು 1.43 ಕೋಟಿ ಸಬ್’ಸ್ಕ್ರೈಬರ್ಸ್ ಹೊಂದಿದೆ. ಅವರು ಭಾರತದ ಅತ್ಯಂತ ಜನಪ್ರಿಯ ಫುಡ್ ಯೂಟ್ಯೂಬರ್‌ಗಳಲ್ಲಿ ಒಬ್ಬರು, ಅವರು ತಮ್ಮ ಅಡುಗೆಮನೆಯಿಂದ ಸರಳ ಮತ್ತು ರುಚಿಕರವಾದ ಆಹಾರ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. .ಇವರ ನೆಟ್ ವರ್ತ್ 6 -7 ಕೋಟಿಯಾಗಿದೆ.

511
ಪೂಜಾ ಲೂತ್ರಾ

ಪೂಜಾ ಲೂತ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರೋಗ್ಯ, ಚರ್ಮದ ಆರೈಕೆ ಮತ್ತು DIY ಕುರಿತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ರಚಿಸಿದ್ದಾರೆ. ವರ್ಷಗಳಲ್ಲಿ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪೂಜಾ ಅವರ ಚಾನೆಲ್ 76 ಲಕ್ಷ ಸಬ್’ಸ್ಕ್ರೈಬರ್ಸ್ ಹೊಂದಿದೆ. ಇವರ ನೆಟ್ ವರ್ತ್ 9 ಕೋಟಿಯಾಗಿದೆ.

611
ನಿಹಾರಿಕಾ ಸಿಂಗ್

"ಕ್ಯಾಪ್ಟನ್ ನಿಕ್",  (Captain Nick) ಅವರ ನಿಜವಾದ ಹೆಸರು ನಿಹಾರಿಕಾ, 2016 ರಲ್ಲಿ ತಮ್ಮ ಯೂಟ್ಯೂಬ್ ಕರಿಯರ್ ಪ್ರಾರಂಭಿಸಿದರು. ಅವರು ತಮ್ಮ ವೀಡಿಯೊಗಳಲ್ಲಿ ಬಹು ಪಾತ್ರಗಳನ್ನು ನಿರ್ವಹಿಸುವುದರಿಂದ ಮತ್ತು ಅವರ ಹಾಸ್ಯಕ್ಕೆ ಹೆಸರುವಾಸಿಯಾಗಿರುವುದರಿಂದ ಅವರ ಕಂಟೆಂಟ್ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ. ಕ್ಯಾಪ್ಟನ್ ನಿಕ್ ಪ್ರಸ್ತುತ 24.5 ಲಕ್ಷ ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ..ಇವರ ನೆಟ್ ವರ್ತ್ 13 ಕೋಟಿಯಾಗಿದೆ.

711
ಅನಿಶಾ ದೀಕ್ಷಿತ್

ರಿಕ್ಷಾವಾಲಿ ಎಂದೇ ಜನಪ್ರಿಯರಾಗಿರುವ ಅನಿಶಾ ದೀಕ್ಷಿತ್, 2013 ರಲ್ಲಿ ತಮ್ಮ ಯೂಟ್ಯೂಬ್ ಕರಿಯರ್ ಪ್ರಾರಂಭಿಸಿದರು. ಅವರು ತಮ್ಮ ವೀಡಿಯೊಗಳಲ್ಲಿ ಹಾಸ್ಯ ಮತ್ತು ಹಾಸ್ಯದ ಮೂಲಕ ನಿಜ ಜೀವನದ ಸನ್ನಿವೇಶಗಳನ್ನು ಹೆಚ್ಚಾಗಿ ಚಿತ್ರಿಸುತ್ತಾರೆ. ಅವರ ಚಾನೆಲ್ ಪ್ರಸ್ತುತ 34.4 ಲಕ್ಷ ಸಬ್’ಸ್ಕ್ರೈಬರ್ಸ್ ಇದ್ದಾರೆ. .ಇವರ ನೆಟ್ ವರ್ತ್15-20 ಕೋಟಿಯಾಗಿದೆ.

811
ಪ್ರಜಕ್ತಾ ಕೋಲಿ

ಪ್ರಜಕ್ತ  (Prajakta Koli) 2015 ರಲ್ಲಿ "ಮೋಸ್ಟ್ಲಿಸೇನ್" ಎಂಬ ಹೆಸರಿನ ತನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು ಮತ್ತು ಈಗ 7.2 ಮಿಲಿಯನ್ ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ. ಅವರು ಹಾಸ್ಯ ವಿಷಯವನ್ನು ಕ್ರಿಯೇಟ್ ಮಾಡುತ್ತಾರೆ.. ಅವರ ಮನರಂಜನೆ ಮತ್ತು ಆಸಕ್ತಿದಾಯಕ ವೀಡಿಯೊಗಳಿಂದಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. .ಇವರ ನೆಟ್ ವರ್ತ್ 16 ಕೋಟಿಯಾಗಿದೆ.

911
ಕೋಮಲ್ ಪಾಂಡೆ

ಕೋಮಲ್ ಪಾಂಡೆ 2017 ರಲ್ಲಿ ಸೌಂದರ್ಯ, ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಮೇಲೆ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ತಮ್ಮದೇ ಆದ ಚಾನೆಲ್ ಅನ್ನು ಪ್ರಾರಂಭಿಸುವ ಮೊದಲು, ಕೋಮಲ್ ಪಾಂಡೆ ಪಾಪ್‌ಕ್ಸೊ ಜೊತೆ ಕೆಲಸ ಮಾಡಿದ್ದರು. .ಇವರ ನೆಟ್ ವರ್ತ್ 30 ಕೋಟಿಯಾಗಿದೆ.

1011
ನಿಶಾ ಮಧುಲಿಕಾ

ನಿಶಾ ಮಧುಲಿಕಾ 2011 ರಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ (Youtube Channel) ಪ್ರಾರಂಭಿಸಿದರು. ಸರಳ ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸುವ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ತಮ್ಮ ಅಡುಗೆ ವಿಧಾನಗಳಿಂದಾಗಿ ಗೃಹಿಣಿಯರಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಪ್ರಸ್ತುತ, ನಿಶಾ ಮಧುಲಿಕಾ 1.47 ಕೋಟಿ ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ. .ಇವರ ನೆಟ್ ವರ್ತ್ 43 ಕೋಟಿಯಾಗಿದೆ.

1111
ಶ್ರುತಿ ಅರ್ಜುನ್ ಆನಂದ್

ಶ್ರುತಿ 2010 ರಲ್ಲಿ ಮೇಕಪ್ ಮತ್ತು ಬ್ಯೂಟಿ ಟಿಪ್ಸ್ ಗಳನ್ನು (beauty tips) ಹೇಳುವ ಮೂಲಕ ತನ್ನ ಯೂಟ್ಯೂಬ್ ಕರಿಯರ್ ಪ್ರಾರಂಭಿಸಿದರು. ಅವರು ಕ್ರಮೇಣ ಫ್ಯಾಷನ್, ಜೀವನಶೈಲಿ ಮತ್ತು ಕುಟುಂಬ ಮನರಂಜನಾ ವೀಡಿಯೊಗಳನ್ನು ಸಹ ಮಾಡಲು ಪ್ರಾರಂಭಿಸಿದರು. ಅವರು 1.2 ಕೋಟಿ ಸಬ್’ಸ್ಕ್ರೈಬರ್ಸ್ ಹೊಂದಿದ್ದಾರೆ.ಇವರ ನೆಟ್ ವರ್ತ್ 45 ಕೋಟಿಯಾಗಿದೆ.

Read more Photos on
click me!

Recommended Stories