ಪ್ರೈವೆಟ್ ಭಾಗದಲ್ಲಿ ಪದೇ ಪದೇ ಸೋಂಕು… ಇದಕ್ಕೇನಿರಬಹುದು ಕಾರಣ?

First Published | Dec 23, 2022, 5:16 PM IST

ಮಹಿಳೆಯರಲ್ಲಿ ಯೀಸ್ಟ್ ಸೋಂಕು ಸಾಮಾನ್ಯವಾಗಿ ಕಂಡು ಬರುತ್ತದೆ. ಯೀಸ್ಟ್ ಬೆಳವಣಿಗೆಗೆ ಪ್ರಮುಖ ಕಾರಣ ಎಂದಾರೆ ನಮ್ಮ ದೇಹದಲ್ಲಿ ಅದು ಬೆಳೆಯಲು ಇರುವಂತಹ ಅನುಕೂಲಕರ ಸ್ಥಿತಿ. ಹಾಗಿದ್ರೆ ಈ ಸಮಸ್ಯೆ ಯಾವ ಸಂದರ್ಭದಲ್ಲಿ ಹೆಚ್ಚಾಗಿ ಕಾಡುತ್ತೆ. ಸಮಸ್ಯೆಯಿಂದ ಪರಿಹಾರ ಪಡೆಯುವುದು ಹೇಗೆ? ಅನ್ನೋದನ್ನು ನೋಡೋಣ. 

ಯೀಸ್ಟ್ ಸೋಂಕು (yeast infection) ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಸಂಭವಿಸಬಹುದು, ಆದರೆ ಸೋಂಕಿನ ಅಪಾಯ ಹೆಚ್ಚಿಸುವ ಕೆಲವು ಅಂಶಗಳಿವೆ. ಮಹಿಳೆಯರಲ್ಲಿ ಯೀಸ್ಟ್ ಸೋಂಕನ್ನು ಯೋನಿ ಕ್ಯಾಂಡಿಡಿಯಾಸಿಸ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಯೀಸ್ಟ್ ಸೋಂಕು ದೇಹದಲ್ಲಿ ಸ್ವಾಭಾವಿಕವಾಗಿ ಇರುವ ಕ್ಯಾಂಡಿಡಾ ಯೀಸ್ಟ್ ನ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಕೆಲವು ಜನರಲ್ಲಿ ಈ ಸಮಸ್ಯೆ ಮತ್ತೆ ಮತ್ತೆ ಸಂಭವಿಸುತ್ತದೆ. ಈ ರೀತಿಯ ದೀರ್ಘಕಾಲದ ಯೀಸ್ಟ್ ಸೋಂಕಿಗೆ ಕಾರಣವೆಂದರೆ ದೇಹದಲ್ಲಿ ಯೀಸ್ಟ್ ನ ಬೆಳವಣಿಗೆಗೆ ಇರುವ ಅನುಕೂಲಕರ ಸ್ಥಿತಿಗಳು.

ತಜ್ಞರೊಬ್ಬರು ಯೀಸ್ಟ್ ಸೋಂಕನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ವರ್ಷಕ್ಕೆ 3-4 ಬಾರಿ ಯೀಸ್ಟ್ ಸೋಂಕು ಕಾಡುವುದು ಗಂಭೀರ ಸಮಸ್ಯೆಯಾಗಿದೆ (serious health problem) ಎಂದು ತಜ್ಞರು ಹೇಳುತ್ತಾರೆ. ಅದರ ರೋಗಲಕ್ಷಣಗಳು ಮತ್ತು ಕಾರಣಗಳನ್ನು ತಕ್ಷಣವೇ ಗುರುತಿಸಬೇಕು ಮತ್ತು ಚಿಕಿತ್ಸೆ ನೀಡಬೇಕು.

Tap to resize

ಕಾರಣ ತಿಳಿದುಕೊಳ್ಳಿ

ಯೋನಿ ಸೋಂಕಿನ ಲಕ್ಷಣಗಳು
ಖಾಸಗಿ ಭಾಗದಲ್ಲಿ ತುರಿಕೆ ಮತ್ತು ಸುಡುವ ಸಂವೇದನೆ (itching in private part) 
ಮೂತ್ರವಿಸರ್ಜನೆ ಮಾಡುವಾಗ ಅಥವಾ ಲೈಂಗಿಕ ಕ್ರಿಯೆ ನಡೆಸುವಾಗ ಉರಿ ಅಥವಾ ನೋವು
ಖಾಸಗಿ ಭಾಗದಲ್ಲಿ ಊತ
ದದ್ದು
ದಪ್ಪ, ಬಿಳಿ, ವಾಸನೆರಹಿತ ಡಿಸ್ಚಾರ್ಜ್
ಯೋನಿ ಡಿಸ್ಚಾರ್ಜ್
ಹಾರ್ಮೋನುಗಳ ಅಸಮತೋಲನ

ನೀವು ಆಗಾಗ್ಗೆ ಯೋನಿ ಸೋಂಕುಗಳನ್ನು (vaginal infection) ಹೊಂದಿದ್ದರೆ, ಅದು ದೇಹದಲ್ಲಿನ ಅಸಮತೋಲನ ಹಾರ್ಮೋನ್ ಲೆವೆಲ್ (harmon imbalance) ನಿಂದಾಗಿ ಉಂಟಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಈ ಸಮಸ್ಯೆಯು ಹೆಚ್ಚಾಗಿ ಗರ್ಭಧಾರಣೆ, ಜನನ ನಿಯಂತ್ರಣ ಔಷಧಗಳು, ಋತುಚಕ್ರ, ಋತುಬಂಧದಿಂದ ಉಂಟಾಗುತ್ತದೆ. ಏಕೆಂದರೆ ಇದು ನಿಮ್ಮ ದೇಹದ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ಸಮತೋಲನವನ್ನು ಹಾಳು ಮಾಡುತ್ತೆ. ಹೆಚ್ಚಿನ ಮಟ್ಟದ ಈಸ್ಟ್ರೋಜೆನ್ ನಿಂದಾಗಿ, ಕ್ಯಾಂಡಿಡಾ ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ, ಇದು ಯೀಸ್ಟ್ ಸೋಂಕುಗಳಿಗೆ ಕಾರಣವಾಗುತ್ತದೆ.

ಮಧುಮೇಹ (diabetes)

ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ಅದು ರಕ್ತದಲ್ಲಿನ ಸಕ್ಕರೆಯನ್ನು ಅತ್ಯಂತ ಹೆಚ್ಚಿನ ಮಟ್ಟಕ್ಕೆ ಹೆಚ್ಚಿಸುತ್ತದೆ. ಸಕ್ಕರೆಯ ಈ ಹೆಚ್ಚಳವು ಯೀಸ್ಟ್ ಹೆಚ್ಚಿಸಲು ಕಾರಣವಾಗಬಹುದು, ವಿಶೇಷವಾಗಿ ಖಾಸಗಿ ಭಾಗದಲ್ಲಿ ಯೀಸ್ಟ್ ಹೆಚ್ಚುತ್ತದೆ. ಇದರಿಂದಾಗಿ ಯೋನಿ ಸೋಂಕು ಉಂಟಾಗಬಹುದು.

ದುರ್ಬಲ ರೋಗನಿರೋಧಕ ಶಕ್ತಿ (weak immunity power)

ದೇಹದ ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಯೀಸ್ಟ್ ಸುಲಭವಾಗಿ ಬೆಳೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆಗಾಗ್ಗೆ ಯೋನಿ ಸೋಂಕುಗಳನ್ನು ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇರಿಸಿ.

ವಿ-ವಾಶ್ ನ ಬಳಕೆ (using V wash)

ಇಂಟಿಮೇಟ್ ವಾಶ್ ಮತ್ತು ಇತರ ರೀತಿಯ ಯೋನಿ ಕ್ಲೆನ್ಸರ್ ಬ್ಯಾಕ್ಟೀರಿಯಾ ಸೋಂಕಿನ ಅಪಾಯವನ್ನು 3.5 ಪಟ್ಟು ಹೆಚ್ಚಿಸುತ್ತವೆ ಮತ್ತು ಯುಟಿಐಗಳ ಅಪಾಯವನ್ನು 2.5 ಪಟ್ಟು ಹೆಚ್ಚಿಸುತ್ತವೆ. ದೇಹದ ಅನೇಕ ಭಾಗಗಳಂತೆ, ನಿಮ್ಮ ಖಾಸಗಿ ಭಾಗವು ಸ್ವತಃ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಅಲಂಕಾರಿಕ ಉತ್ಪನ್ನದ ಬಳಕೆಯು ಅದರ ಪಿಎಚ್ ಮಟ್ಟವನ್ನು ಹಾಳುಮಾಡಲು ಕೆಲಸ ಮಾಡುತ್ತದೆ. ಇದು ತುರಿಕೆ, ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
 

ಎಸ್ಟಿಐ (STI problem)

ಕ್ಲಮೈಡಿಯಾ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯ ಲೈಂಗಿಕವಾಗಿ ಹರಡುವ ಸೋಂಕು (ಎಸ್ಟಿಐ). ಇದು ಸಾಮಾನ್ಯವಾಗಿ 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಗೊನೋರಿಯಾ ದೈಹಿಕ ಸಂಭೋಗದ ಮೂಲಕ ಹರಡುವ ಮತ್ತೊಂದು ಸಾಮಾನ್ಯ ಸೋಂಕು. ಇದು ಆಗಾಗ್ಗೆ ಕ್ಲಮೈಡಿಯಾದೊಂದಿಗೆ ಸಂಭವಿಸುತ್ತದೆ.

ವಜೈನಾವನ್ನು ಯೀಸ್ಟ್ ಸಮಸ್ಯೆಯಿಂದ ರಕ್ಷಿಸಲು ನೀವು ಏನು ಮಾಡಬಹುದು ನೋಡೋಣ: 
ಮೊಸರು, ಕಿಮ್ಚಿಯಂತಹ ಪ್ರೋಬಯಾಟಿಕ್ ಗಳನ್ನು ತಿನ್ನಿ
ವಜೈನಾ ವಾಶ್ (vagina wash) ಬಳಸುವುದನ್ನು ತಪ್ಪಿಸಿ
ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ
ಆರೋಗ್ಯಕರವಾಗಿ ತಿನ್ನಿ - ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಿ
ಆಂಟಿ ಬಯೋಟಿಕ್  ತೆಗೆದುಕೊಳ್ಳುವುದನ್ನು ತಪ್ಪಿಸಿ
 

Latest Videos

click me!