ವಿಶ್ವದ 4ನೇ ಸಿರಿವಂತ ಮುಕೇಶ್ ಪತ್ನಿ ನೀತಾ ತಿನ್ನೋದು ಇದನ್ನಂತೆ!

First Published Jun 24, 2020, 7:23 PM IST

ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ಟೌನ್ ಆ್ಯಂಡ್ ಕಂಟ್ರಿ' 2020ರ ವರ್ಷದ ಉನ್ನತ ಸಾಮಾಜಿಕ ಕಾರ್ಯಕರ್ತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ. ಅವರೊಂದಿಗೆ ರಿಲಯನ್ಸ್ ಫೌಂಡೇಶನ್‌ಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ನೀತಾ ಬಹಳ ಸಮಯದಿಂದ ರಿಲಯನ್ಸ್ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದವರು ನೀತಾ ಒಬ್ಬರೇ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ, ಸಮಾಜದ ಬಡ ವರ್ಗಗಳಿಗೆ ಪರಿಹಾರ ಯೋಜನೆಗಳನ್ನು ನಡೆಸಲು, ಬಡವರಿಗೆ ಮತ್ತು ಕಾರ್ಮಿಕರಿಗೆ ಆಹಾರ ಒದಗಿಸಲು, ಆರ್ಥಿಕ ಸಹಾಯವನ್ನು ಒದಗಿಸಲು ಮತ್ತು ದೇಶದ ಮೊದಲ ಕೋವಿಡ್ -19 ಆಸ್ಪತ್ರೆಯನ್ನು ನಿರ್ಮಿಸಿದ ಕಾರಣಕ್ಕಾಗಿ ವಿಶ್ವದ ಪ್ರಮುಖ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ನೀತಾರನ್ನು ಸೇರಿಸಲಾಗಿದೆ. ಇಷ್ಟು ಕೆಲಸ ಕೆಲಸ ಮಾಡಿದರೂ, ಬ್ಯುಸಿಯಾಗಿದ್ದರೂ ನೀತಾರ ಮುಖದಲ್ಲಿ ಉದ್ವೇಗ ಕಾಣಿಸುವುದಿಲ್ಲ, ಅದಕ್ಕೆ ಕಾರಣ ಅವರ ಫಿಟ್‌ನೆಸ್. ಸೀಕ್ರೇಟ್ ಏನು?

ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ, ಹೊರತಾಗಿಯೂ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುವ ಫವರ್‌ಫುಲ್‌ ಮಹಿಳೆ.
undefined
ಯಶಸ್ವಿ ಮಹಿಳೆ ಜೊತೆಗೆ ನೀತಾ ಫಿಟ್‌ನೆಸ್‌ ಫ್ರಿಕ್‌ ಕೂಡ ಹೌದು.ನೀತಾ ಅಂಬಾನಿಯ ಕೆಲವು ಫಿಟ್ನೆಸ್ ರಹಸ್ಯಗಳಿವೆ ಇಲ್ಲಿ.
undefined
ತನ್ನನ್ನು ತಾನು ಸದೃಡವಾಗಿಡಲು, ನೀತಾ ಬೆಳಿಗ್ಗೆಯಿಂದ ಸಂಜೆಯವರೆಗೆ ಅನೇಕ ನಿಯಮಗಳನ್ನು ಪಾಲಿಸುತ್ತಾರೆ. ಇವುಗಳಲ್ಲಿ ಅವರ ಆಹಾರ ಮತ್ತು ವ್ಯಾಯಾಮ ವಿಶೇಷವಾಗಿ ಸೇರಿದೆ.
undefined
ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ, ನೀತಾ ಅವರು ಮದುವೆಯಾದಾಗ ತನ್ನ ತೂಕ 47 ಕೆ.ಜಿ ಆದರೆ ಮೂರು ಮಕ್ಕಳ ನಂತರ ತೂಕ 90 ಕೆ.ಜಿ.ಗೆ ಏರಿತ್ತು ಎಂದು ಹೇಳಿದ್ದರು.
undefined
ನಿಮ್ಮ ತೂಕ ಇಳಿಕೆಗೆ ಯಾರು ಕಾರಣ ಎಂದು ನೀತಾರನ್ನು ಕೇಳಿದಾಗ. ನನ್ನ ಕಿರಿಯ ಮಗ ಅನಂತ್ ಹೊರತುಪಡಿಸಿ ಯಾರೂ ಇದರ ಹಿಂದಿನ ಪ್ರೇರಣೆಯಲ್ಲ ಎಂದು ಹೇಳಿದರು. ನನ್ನ ಕೊನೆಯ ತೂಕ ಇಳಿಸುವಲ್ಲಿ ಮತ್ತು ಫಿಟ್‌ ಆಗಿರಲು ಸಾಕಷ್ಟು ಬೆಂಬಲ ನೀಡಿದ್ದಾನೆ ಎಂದಿದ್ದರು ಮುಂಬೈ ಇಂಡಿಯನ್ಸ್‌ ಓನರ್‌.
undefined
ಬೆಳಿಗ್ಗೆ 40 ನಿಮಿಷ ವ್ಯಾಯಾಮ, ಯೋಗ ಮತ್ತುಸ್ವೀಮ್‌ ಮಾಡುತ್ತಾರೆ. ಇದು ಅವರ ಫ್ಯಾಟ್‌ ಬರ್ನ್‌ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಹಾಗೂ ಹೆಚ್ಚು ಕ್ಯಾಲೊರಿಗಳನ್ನು ಕರಿಗಿಸಲು ಸಹಾಯ ಮಾಡುತ್ತದೆ.
undefined
ನೃತ್ಯ ಕೂಡ ಮಾಡುತ್ತಾರೆ. ಡ್ಯಾನ್ಸ್‌ ಬಹಳಷ್ಟು ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಕೆಲಸ ಮುಗಿದ ನಂತರ ನೀತಾ ಸಂಜೆ 30 ನಿಮಿಷಗಳ ವ್ಯಾಯಾಮ ಮತ್ತು ಯೋಗ ಮಾಡುತ್ತಾರೆ.
undefined
ಬಾದಾಮಿ ಮತ್ತು ವಾಲ್‌ನಟ್ಸ್ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸುವ ನೀತಾ ಮೊಟ್ಟೆಯ ಬಿಳಿ ಭಾಗದ ಆಮ್ಲೆಟ್ ಬೆಳಗ್ಗೆ ಉಪಾಹಾರದಲ್ಲಿ ತೆಗೆದುಕೊಳ್ಳಲಾಗುತ್ತಾರೆ.ಅಲ್ಲದೆ, ದಿನವಿಡೀ ನಿಮ್ಮ ಆಹಾರದಲ್ಲಿ ನೀವು ಅನೇಕ ಆರೋಗ್ಯಕರ ವಿಷಯಗಳನ್ನು ಸೇರಿಸಿ, ಅವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ ಎನ್ನುತ್ತಾರೆ ನೀತಾ.
undefined
ಮಧ್ಯಾಹ್ನದ ಊಟದಲ್ಲಿ ಹೆಚ್ಚು ಹೆಚ್ಚು ಹಸಿರು ತರಕಾರಿಗಳು ಮತ್ತು ಸೂಪ್‌ಗಳನ್ನು ಒಳಗೊಂಡಿರುತ್ತದೆ. ಪನ್ನೀರ್ ಅಥವಾ ಪ್ರೋಟೀನ್ ಭರಿತ ತಿಂಡಿಗಳನ್ನು ಸಂಜೆ ತೆಗೆದುಕೊಳ್ಳಲಾಗುತ್ತದೆ. ರಾತ್ರಿ ಊಟಕ್ಕೆ ಹಸಿರು ತರಕಾರಿಗಳು, ಸೂಪ್ ಮತ್ತು ಮೊಳಕೆ ಕಾಳು ಇರುತ್ತದೆ.
undefined
ದೈಹಿಕ ವ್ಯಾಯಾಮ ಮತ್ತು ಆಹಾರವು ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಒತ್ತಡ ಮುಕ್ತ ಜೀವನವೂ ಇದರೊಂದಿಗೆ ಬಹಳ ಮುಖ್ಯವಾಗಿದೆ. ಒತ್ತಡರಹಿತವಾಗಿರುವುದು ಹಸಿವನ್ನು ಹೆಚ್ಚಿಸುವ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಆಹಾರವನ್ನು ತಿನ್ನುವುದಿಲ್ಲ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡುವುದು ಸಹ ಬಹಳ ಮುಖ್ಯ ಎಂದು ನೀತಾ ಹೇಳುತ್ತಾರೆ.
undefined
click me!