ನೀತಾ ಅಂಬಾನಿ 50ನೇ ಬರ್ತ್‌ಡೇ ಪಾರ್ಟಿಗೆ ಸ್ವರ್ಗವೇ ಧರೆಗಿಳಿದಿತ್ತು, ಖರ್ಚಾಗಿದ್ದೆಷ್ಟು ಗೊತ್ತಾ?

Published : Apr 11, 2023, 03:25 PM IST

ಮುಕೇಶ್‌ ಅಂಬಾನಿ ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟವನ್ನು ಗಳಿಸಿಕೊಂಡಿದ್ದಾರೆ. 6.83 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿದ್ದು, ಎಲ್ಲರ ಬೆರಗಾಗುವಂತಿರುತ್ತೆ. ಅದರಲ್ಲೂ 2013ರಲ್ಲಿ ನಡೆದಿದ್ದ ನೀತಾ ಅಂಬಾನಿಯವರ 50ನೇ ಹುಟ್ಟುಹಬ್ಬದ ಕಾರ್ಯಕ್ರಮ ಸ್ವರ್ಗವೇ ಧರೆಗಿಳಿದಂತಿತ್ತು. ಆ ಅದ್ಭುತ ದೃಶ್ಯಗಳನ್ನು ಫೋಟೋದಲ್ಲಿ ನೋಡಿ.

PREV
17
ನೀತಾ ಅಂಬಾನಿ 50ನೇ ಬರ್ತ್‌ಡೇ ಪಾರ್ಟಿಗೆ ಸ್ವರ್ಗವೇ ಧರೆಗಿಳಿದಿತ್ತು, ಖರ್ಚಾಗಿದ್ದೆಷ್ಟು ಗೊತ್ತಾ?

ಅಂಬಾನಿ ಕುಟುಂಬದಲ್ಲಿ ಎಲ್ಲಾ ಸಮಾರಂಭಗಳು ಸಾಕಷ್ಟು ಅದ್ಧೂರಿಯಾಗಿ ನಡೆಯುತ್ತವೆ. ಸಣ್ಣ ಪುಟ್ಟ ಕಾರ್ಯಕ್ರಮವಾದರೂ ಕೋಟಿ ಕೋಟಿ ಖರ್ಚು ಮಾಡಿ ಸಾಕಷ್ಟು ಗ್ರ್ಯಾಂಡ್ ಆಗಿ ಮಾಡಲಾಗುತ್ತದೆ. ಹಾಗೆಯೇ 2013ರಲ್ಲಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯವರ 50ನೇ ಹುಟ್ಟುಹಬ್ಬದ ಸಮಾರಂಭ ಎಲ್ಲರ ಗಮನ ಸೆಳೆದಿತ್ತು.

27

ಬರೋಬ್ಬರಿ 220 ಕೋಟಿ ರೂ ವೆಚ್ಚದಲ್ಲಿ ಈ ಬರ್ತ್‌ಡೇ ಕಾರ್ಯಕ್ರಮ ನಡೆದಿತ್ತು. ಜೋಧ್‌ಪುರದ ಉನ್ನತ ದರ್ಜೆಯ ರೆಸಾರ್ಟ್‌ನಲ್ಲಿ ನೀತಾ ಅಂಬಾನಿಯವರ ಅದ್ದೂರಿ 50ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅಂಬಾನಿ ಕುಟುಂಬವು ಟ್ರೆಂಡ್‌ಸೆಟರ್ ಆಯಿತು.

37

ಮುಕೇಶ್ ಅಂಬಾನಿ ಅವರ ಪತ್ನಿ ಮತ್ತು ಹೆಸರಾಂತ ಸಮಾಜ ಸೇವಕಿ ನೀತಾ ಅಂಬಾನಿ ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ವೈಭವಯುತವಾಗಿ ಆಚರಿಸಿದರು. ಎರಡು ದಿನಗಳ ಬರ್ತ್‌ಡೇ ಆಚರಣೆ ಸಮಾರಂಭಕ್ಕೆ ಅತ್ಯಂತ ದುಬಾರಿ ಉಮೇದ್ ಭವನ ಅರಮನೆಯನ್ನು ಕಾಯ್ದಿರಿಸಲಾಗಿತ್ತು.

47

ನವೆಂಬರ್ 1, 2013ರಂದು ಜೋಧ್‌ಪುರದಲ್ಲಿ ನಡೆದ ಬರ್ತ್‌ಡೇ ಕಾರ್ಯಕ್ರಮ, ಸುಮಾರು 250 ಅತಿಥಿಗಳನ್ನು ಒಳಗೊಂಡಿತ್ತು, ರಿಲಯನ್ಸ್ ಸಮೂಹದ ಒಡೆತನದ 32 ಚಾರ್ಟರ್ಡ್ ಫ್ಲೈಟ್‌ಗಳ ಮೂಲಕ ಅದ್ದೂರಿ ರೆಸಾರ್ಟ್‌ಗೆ ಜನರು ಬಂದು ಸೇರಿದರು.

57

ಚಾರ್ಟರ್ಡ್ ಫ್ಲೈಟ್ ಹೊರತಾಗಿ, ನೀತಾ ಅಂಬಾನಿಯವರ 50 ನೇ ಹುಟ್ಟುಹಬ್ಬದ ಪಾರ್ಟಿಯು ನವೆಂಬರ್ 1ರಂದು ಧನ್ತೇರಸ್ ಪೂಜೆಯೊಂದಿಗೆ ಪ್ರಾರಂಭವಾಯಿತು. ಹುಟ್ಟುಹಬ್ಬದ ಹುಡುಗಿಯ ಹೆಸರನ್ನು ಉಚ್ಚರಿಸುವ ಬೆರಗುಗೊಳಿಸುವ ಸ್ಪಾರ್ಕ್ಲಿ ದೀಪಗಳು ಕಂಡು ಬಂದವು.

67

ಇದಲ್ಲದೆ, ಆಕಾಶದಲ್ಲಿ ಧೀರೂಭಾಯಿ ಅಂಬಾನಿ ಅವರ ಮುಖವನ್ನು ರೂಪಿಸಲು ಬೆಳಕಿನ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು. ಅದ್ಧೂರಿ ಬೆಳಕಿನ ಉತ್ಸವ ಎಲ್ಲರನ್ನೂ ಬೆರಗುಗೊಳಿಸಿತು.

77

240+ ಅತಿಥಿಗಳ ಪಟ್ಟಿಯಲ್ಲಿ ಮಿತ್ತಲ್ಸ್, ಮಹೀಂದ್ರಾ, ಬಿರ್ಲಾ, ಗೋದ್ರೇಜ್, ಶಾರುಖ್ ಖಾನ್, ಅಮೀರ್ ಖಾನ್, ಕರಿಷ್ಮಾ ಕಪೂರ್ ಮತ್ತು ರಾಣಿ ಮುಖರ್ಜಿ ಅವರಂತಹ ಅನೇಕ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದ್ದರು. ಸಂಪೂರ್ಣ ಮುಂಬೈ ಇಂಡಿಯನ್ಸ್ IPL ತಂಡ ಸಹ ಆಗಮಿಸಿತ್ತು. ಎರಡು ದಿನಗಳ ಸಂಭ್ರಮಾಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಎಆರ್ ರೆಹಮಾನ್ ಅವರ ಪ್ರದರ್ಶನಗಳು ಎಲ್ಲರ ಗಮನ ಸೆಳೆಯಿತು.

Read more Photos on
click me!

Recommended Stories