ಅಂಬಾನಿ ಪತ್ನಿಗೆ 57..! ನೀತಾ ಬ್ಯೂಟಿ ಸೀಕ್ರೇಟ್ ಏನು..?

First Published | Nov 3, 2020, 3:48 PM IST

ನೀತಾ ಅಂಬಾನಿಗೆ 57 ವರ್ಷ | ಬ್ಯೂಟಿಫುಲ್ ಮಹಿಳಾ ಉದ್ಯಮಿಯ ಫಿಟ್ನೆಸ್ ಸೀಕ್ರೇಟ್ ಏನು..?

ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಗೆ ಇವತ್ತು ಹ್ಯಾಪಿ ಬರ್ತ್‌ಡೇ.
ಭಾರತದ ಪ್ರಮುಖ ಮಹಿಳಾ ಉದ್ಯಮಿ 57ನೇ ವರ್ಷದ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Tap to resize

ರಿಲಯನ್ಸ್ ಫೌಂಡೇಷನ್‌ನ ಮುಖ್ಯಸ್ಥೆ, ಸಂಸ್ಥಾಪಕಿ ಭಾರತದ ಪ್ರಭಾವಿ ಮಹಿಳೆಯರಲ್ಲೊಬ್ಬರು.
ಇವರು ದೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಮುಖ್ಯಸ್ಥೆ ಮತ್ತು ಮುಂಬೈ ಇಂಡಿಯನ್ಸ್ ಸಹ ಮಾಲಕಿಯೂ ಹೌದು.
1963 ನವೆಂಬರ್ 1ರಂದು ಮುಂಬೈ ಉಪನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು.
ತಂದೆ ರವೀಂದ್ರ ಭಾಯಿ ದಲಾಲ್ ತಾಯಿ ಪೂರ್ಣಿಮಾ ದಲಾಲ್.
ನರ್ಸಿ ಮೋಣಜಿ ಕಾಲೇಜಿನಲ್ಲಿ ಬಿಕಾಂ ಕಲಿತಿದ್ದರು.
ನೀತಾ ಶಾಲಾ ಶಿಕ್ಷಕಿಯಾಗಿದ್ದಾಗ ಮುಖೇಶ್ ಅವರನ್ನು ಭೇಟಿಯಾಗಿದ್ದರು.
ಬಾಲ್ಯದಲ್ಲಿಯೇ ಭರತನಾಟ್ಯ ಕಲಿತಿದ್ದ ನೀತಾ ಪ್ರೋಫೆಷನಲ್ ಭರತನಾಟ್ಯ ನರ್ತಕಿಯೂ ಹೌದು.
ನೀತಾ ಅವರ ಫಿಟ್‌ನೆಸ್ ಕುರಿತು ಎಲ್ಲರಿಗೂ ಗೊತ್ತು. 90 ಕೆಜಿಯಿಂದ 50 ಕೆಜಿ ಇಳಿಸಿಕೊಂಡಿದ್ದರು ಇವರು.
ಪ್ರತಿದಿನ 40 ನಿಮಿಷ ಯೋಗ, ವ್ಯಾಯಾಮ, ಈಜುವುದಕ್ಕಾಗಿಯೇ ವ್ಯಯಿಸುತ್ತಾರೆ.ಫ್ಯಾಷನ್‌ ಪ್ರಿಯೆಯಾಗಿರುವ ನೀತಾ ಅಂಬಾನಿಯಲ್ಲಿ ಜಗತ್ತಿನ ಎರಡನೇ ದುಬಾರಿ ಹ್ಯಾಂಡ್ ಬ್ಯಾಗ್ ಇದೆ.
ಫೋರ್ಬ್ಸ್‌ ಬಿಡುಗಡೆ ಮಾಡಿದ 2016ರ ಏಷ್ಯಾದ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ನೀತಾ ಹೆಸರಿತ್ತು.
ಇವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯೂ ಹೌದು.
2017ರಲ್ಲಿ ಇವರಿಗೆ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಅವಾರ್ಡ್ ಲಭಿಸಿತ್ತು.

Latest Videos

click me!