ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಆತ ತಾಯಂದಿರನ್ನು ಸೃಷ್ಟಿಸಿದ- ರುದ್ಯಾರ್ಡ್ ಕಿಪ್ಲಿಂಗ್
ಯಾವುದೇ ಫಲಾಪೇಕ್ಷೆ ಇಲ್ಲದೆ ಅಮ್ಮ ಮಕ್ಕಳಿಗಾಗಿ, ತನ್ನ ಕುಟುಂಬಕ್ಕಾಗಿ, ಮನೆಗಾಗಿ ಸದಾ ದುಡಿಯುತ್ತಿರುತ್ತಾರೆ. ತನ್ನ ಈ ಕೆಲಸದಿಂದ ಇವರು ಯಾವತ್ತೂ ಹಿಂದೆ ಸರಿದವರೇ ಅಲ್ಲ. ತನ್ನ ಬಗ್ಗೆ ಕಿಂಚಿತ್ತೂ ಯೋಚಿಸದೆ ತನ್ನವರಿಗಾಗಿ ಸದಾ ಶ್ರಮ ಪಡುವ ಮಮತಾಮಯಿ ಅಮ್ಮ.