ಸ್ಟ್ರಾಂಗ್ ಹೆಲ್ದಿ ಹೇರ್‌ಗೆ ಮನೆಯಲ್ಲೇ ನ್ಯಾಚುರಲ್‌ ಕೇರ್‌ ಹೀಗಿರಲಿ!

First Published | Mar 13, 2020, 4:08 PM IST

ಸುಂದರ ಆರೋಗ್ಯ ಕೂದಲು ಎಲ್ಲರ ಕನಸು. ಕೂದಲಿನ ಆರೋಗ್ಯ ಕಾಪಾಡಿಕೊಂಡು ಉತ್ತಮ ಕೂದಲು ಹೊಂದುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ದುಬಾರಿ ಹೇರ್ ಶ್ಯಾಂಪೂ, ಕಂಡೀಷನರ್‌ ಬಳಸದೆ ಕೂಡ ಶೈನಿಂಗ್ ಹೇಲ್ದಿ ಕೂದಲು ನಮ್ಮದಾಗುವುದು ಸುಲಭ.  ನೈಸರ್ಗಿಕವಾಗಿ ಸುಂದರ ಸದೃಢ ಕೂದಲು ಪಡೆಯಲು ಸಿಂಪಲ್‌ ಐಡಿಯಾಗಳು ಇಲ್ಲಿವೆ.

ಅತಿ ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಬೇಡಿ. ಉಗುರು ಬೆಚ್ಚಗಿನ ನೀರು ಕೂದಲಿಗೆ ಸೂಕ್ತ.
undefined
ತಲೆ ಹೊಟ್ಟು ನಿವಾರಣೆಗೆ ಮೆಂತ್ಯೆ ಕಾಳುಗಳನ್ನು ನೆನಸಿ ಪೇಸ್ಟ್‌ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ .
undefined

Latest Videos


ನೆಲ್ಲಿಕಾಯಿ ಪುಡಿಯನ್ನು ನಿಂಬೆ ರಸದ ಜೊತೆ ಬೆರೆಸಿ ಹಚ್ಚುವುದರಿಂದ ಡ್ರೈ ಹೇರ್‌ ಕಾಂತಿ ಪಡೆಯುತ್ತದೆ.
undefined
ಕೂದಲು ಬುಡದಿಂದ ಸದೃಢವಾಗಿ ಡ್ಯಾಮೇಜ್ ಹಾಗೂ ಡ್ರೈನೆಸ್ ಕಡಿಮೆಯಾಗಲು ವಾರಕ್ಕೆ 2-3 ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
undefined
ಫ್ರೆಶ್‌ ಅಲೋವೆರಾ ಜೆಲ್‌ ಅನ್ನು ರಾತ್ರಿ ತಲೆಗೆ ಹಚ್ಚಿಕೊಂಡು ಬೆಳಿಗ್ಗೆ ತೊಳೆಯಿರಿ. ಅಲೋವೆರಾ ನ್ಯಾಚುರಲ್‌ ಕಂಡೀಷನರ್‌ ಜೊತೆಗೆ ತಲೆ ತಂಪಾಗಿಸುತ್ತದೆ.
undefined
ಪ್ರೋಟೀನ್‌, ಫ್ಯಾಟಿ ಆ್ಯಸಿಡ್ ಭರಿತ ಮೊಟ್ಟೆಯ ಮಾಸ್ಕ್‌ ಶೈನಿ ಕೂದಲಿಗೆ ಟ್ರೈ ಮಾಡಿ.
undefined
ಆರೋಗ್ಯವಂತ ಕೂದಲಿಗೆ ಒಳ್ಳೆಯ ಆಹಾರವು ಮುಖ್ಯ. ದಿನನಿತ್ಯದ ಆಹಾರದಲ್ಲಿ ಪ್ರೆಶ್‌ ಹಣ್ಣು ತರಕಾರಿಗಳಿರಲಿ.
undefined
ಮೊಸರನ್ನು ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಕೂದಲಿಗೆ ಬೆಸ್ಟ್‌ ಕಂಡೀಶನರ್.
undefined
ಕೂದಲಿಗೆ ಆಗಾಗ ಮೆಹಂದಿ ಹಚ್ಚಿ. ಹೆನ್ನಾ ಯಾ ಮೆಹಂದಿ ಕೂದಲನ್ನು ಕಂಡೀಷನ್‌ ಮಾಡುವ ಜೊತೆಗೆ ಒಳ್ಳೆ ಕಲರ್‌ ನೀಡುತ್ತದೆ.
undefined
ಸುಂದರ ಆರೋಗ್ಯ ಕೂದಲಿನ ಸಿಕ್ರೇಟ್‌ ನಿದ್ರೆ. ಕನಿಷ್ಟ 7 ಘಂಟೆಗಳ ನೆಮ್ಮದಿಯ ನಿದ್ರೆ ನಿಮ್ಮ ದಿನಚರಿಯಲ್ಲಿ ಇರಲಿ.
undefined
click me!