3Dಡೆಕೊರೇಶನ್ ಪಾರ್ಟಿಯ ಹೈಲೈಟ್ ಆಗಿತ್ತು. ಗ್ರೀನರಿ, ಹಾರುವ ಪಕ್ಷಿಗಳು ಮತ್ತು ಹೂಗಳ ಅಲಂಕಾರ ಎಲ್ಲರ ಕಣ್ಮನ ಸೆಳೆಯಿತು. ಅಲಂಕಾರದ ಪ್ರಮುಖ ಅಂಶವೆಂದರೆ ಭಗವಾನ್ ನಾಥದ್ವಾರದ ಸುಂದರವಾದ ಪ್ರತಿಮೆ, ಇದನ್ನು ಕೇಂದ್ರಬಿಂದುವಾಗಿ ಇರಿಸಲಾಗಿತ್ತು. ಪ್ರವೇಶ ದ್ವಾರದಿಂದ ಪ್ರಧಾನ ವೇದಿಕೆಯ ಹಿನ್ನೆಲೆಯವರೆಗೂ ಅಭಿಮನ್ಯು ಚೋಪ್ರಾ ಮತ್ತು ಸುರಭಿ ಭೌಮಿಕ್ ರಚಿಸಿದ ಡಿಜಿಟಲ್ ಗಾರ್ಡನ್ ಡೆಕೋರ್ ಆಕರ್ಷಕವಾಗಿತ್ತು.