ಮಾಜಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿರುವ ಮಾಡೆಲ್ ಐಶ್ವರ್ಯಾ ಶಿಯೋರನ್ ನಾಗರಿಕ ಸೇವೆಗಳ ಪರೀಕ್ಷೆ ಮೊದಲ ಪ್ರಯತ್ನದಲ್ಲಿ 93 ನೇ ರ್ಯಾಂಕ್ ಪಡೆದಿದ್ದಾರೆ.
undefined
ಸೈನ್ಯದ ಹಿನ್ನೆಲೆಯಿಂದ ಬಂದಿರುವ ಐಶ್ವರ್ಯಾ, ಲಿಖಿತವಾಗಿ ಯಾವುದೇ ತರಬೇತಿಯಿಲ್ಲದೆ ರ್ಯಾಂಕ್ ಪಡೆದ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಒಬ್ಬರು ಎಂದು ವರದಿಯಾಗಿದೆ.
undefined
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಬರುವ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಸೇರಿದಂತೆ ನಾಗರಿಕ ಸೇವೆಗಳ ಪರೀಕ್ಷೆಗೆ ಅರ್ಹತೆ ಪಡೆದ 829 ಅಭ್ಯರ್ಥಿಗಳಲ್ಲಿ ಐಶ್ವರ್ಯಾ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ.
undefined
ಐಶ್ವರ್ಯಾ ಶಿಯೋರನ್ ಯಶಸ್ವಿ ಮಾಡೆಲ್ ಮತ್ತು ಮನೀಶ್ ಮಲ್ಹೋತ್ರಾ ಅವರಂತಹ ಫೇಮಸ್ ಡಿಸೈನರ್‌ಗಾಗಿ ಕ್ಯಾಟ್‌ವಾಕ್ ಮಾಡಿದ್ದಾರೆ. ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಗಳನ್ನು ಕ್ಲೀಯರ್ ಮಾಡಲು ಬಯಸಿದ್ದ ಕಾರಣದಿಂದ ತನ್ನ ಮಾಡೆಲಿಂಗ್ ವೃತ್ತಿಜೀವನದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಳು. ಐಎಎಸ್ ಅಧಿಕಾರಿಯಾಗ ಬೇಕೆಂಬುದು ಈ ಮಾಡೆಲ್‌ನ ಕನಸಾಗಿತ್ತು.
undefined
ಬ್ರೈಟ್ ಮತ್ತು ಬ್ಯೂಟಿಫುಲ್ ಐಶ್ವರ್ಯಾ ಭಾಗವಹಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಯಾವಾಗಲೂ ಉತ್ತಮ ಸಾಧನೆ ಮಾಡಿದ್ದಾಳೆ.
undefined
ಯಾವುದೇ ತರಬೇತಿಯಿಲ್ಲದೆ 10 ತಿಂಗಳಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ ಆಕೆ ತನ್ನ ಮೊದಲ ಪ್ರಯತ್ನದಲ್ಲಿ 93 ನೇ ರ್ಯಾಂಕ್ ಪಡೆದಳು.
undefined
ಐಶ್ವರ್ಯಾ ಈ ಹಿಂದೆ 2015 ರಲ್ಲಿ ಫ್ರೆಶ್‌ಫೇಸ್ ದೆಹಲಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ, ನಂತರ ಕ್ಯಾಂಪಸ್ ಪ್ರಿನ್ಸೆಸ್ ದೆಹಲಿ 2016 ರಲ್ಲಿ ಭಾಗವಹಿಸಿ ಮಿಸ್ ಬ್ಯೂಟಿ ವಿಥ್ ಎ ಪರ್ಪಸ್ ಎಂಬ ಬಿರುದನ್ನು ಪಡೆದರು ಮತ್ತು ನಂತರ ಫೆಮಿನಾ ಮಿಸ್ ಇಂಡಿಯಾ 2016 ರ ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.
undefined
ದೆಹಲಿಯ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಎಕನಾಮಿಕ್ಸ್ ಆನರ್ಸ್ ಪೂರ್ಣಗೊಳಿಸಿದ ಐಶ್ವರ್ಯಾ ಹೆಚ್ಚಿನ ಅಧ್ಯಯನಕ್ಕಾಗಿ 2018 ರಲ್ಲಿ ಇಂದೋರ್‌ನ ಐಐಎಂನಲ್ಲಿ ಆಯ್ಕೆಯಾದರು, ಆದರೆ UPSC CSE ಗೆ ಪ್ರಿಫೇರ್ ಆಗಲು ಅದನ್ನು ಬಿಟ್ಟರು.
undefined
ಮೂಲತಃ ರಾಜಸ್ಥಾನ ಮೂಲದ ಚೆಲುವೆ 9 ನೇ ತೆಲಂಗಾಣ ಎನ್‌ಸಿಸಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್, ಕರೀಂನಗರದ ಅಜಯ್ ಕುಮಾರ್ ಅವರ ಪುತ್ರಿ ಮತ್ತು ಅವರ ಈ ಗೆಲುವಿನಿಂದ ಇಂದು ತಂದೆಯನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.
undefined