ವಿದ್ಯಾರ್ಥಿ ಭವನದ ದೋಸೆಪ್ರಿಯೆ ಶಕುಂತಳಾ ದೇವಿ

First Published | Aug 6, 2020, 3:58 PM IST

ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಳಾ ದೇವಿ ನಮ್ಮ ಬೆಂಗಳೂರಿನ ವಿದ್ಯಾಪೀಠದವರು. 1929, ನವೆಂಬರ್ 4ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಕುರಿತ ಬಾಲಿವುಡ್ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ಶಕುಂತಳಾ ದೇವಿಯ ಗಣಿತದ ಪ್ರತಿಭೆಯಾಚೆಗಿನ ವ್ಯಕ್ತಿತ್ವದತ್ತಲೂ ಚಿತ್ರ ಬೆಳಕು ಚೆಲ್ಲಿದೆ. ಕನ್ನಡತಿ ಶಕುಂತಳಾದೇವಿಯ ಕುರಿತ ವಿಶೇಷ ವಿಷಯಗಳು ಹಾಗೂ ಅಪರೂಪದ ಚಿತ್ರಗಳು ಇಲ್ಲಿವೆ.

ಶಕುಂತಳಾದೇವಿ ಭಾರತದ ಪ್ರಖ್ಯಾತ ನಿಮೋನಿಸ್ಟ್ ಆಗಿದ್ದು, ದೊಡ್ಡ ದೊಡ್ಡ ಸಂಖ್ಯೆಗಳು, ದಿನ, ಹೆಸರುಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಲ್ಲವರಾಗಿದ್ದರು. ದೊಡ್ಡ ದೊಡ್ಡ ಕ್ಲಿಷ್ಟಕರ ಗಣಿತದ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಮಾಡಬಲ್ಲವರಾಗಿದ್ದರು. ಅವರ ಕಾಲದ ಕಂಪ್ಯೂಟರ್‌ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಕಾರಣ ಅವರಿಗೆ ಮಾನವ ಕಂಪ್ಯೂಟರ್ ಎಂದೇ ಹೆಸರು ಬಂದಿತು.
undefined
ತನ್ನ ಗಣಿತದ ಸಾಮರ್ಥ್ಯಕ್ಕಾಗಿ ಜಗತ್ತಿನಾದ್ಯಂತ ಮನೆಮಾತಾದ ಶಕುಂತಳಾ ದೇವಿ ಶಾಲೆಗೇ ಹೋಗಿಲ್ಲ. ಮೂರು ವರ್ಷದವಳಾಗಿರುವಾಗಲೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿದ್ದ ಆಕೆಯ ಪ್ರತಿಭೆ ನೋಡಿದ ತಂದೆ, ಸರ್ಕಸ್‌ನಲ್ಲಿ ತನ್ನ ಕೆಲಸ ಬಿಟ್ಟು ಮಗಳ ಪ್ರತಿಭೆಯನ್ನು ರಸ್ತೆಮಧ್ಯೆ ಪ್ರದರ್ಶನ ಮಾಡಿ ದುಡ್ಡು ಮಾಡತೊಡಗಿದರು. ಆರು ವರ್ಷದವಳಿರುವಾಗಲೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಆಕೆಯ ಪ್ರತಿಭೆ ಅನಾವರಣವಾಯಿತು.
undefined

1944ರಲ್ಲಿ ಶಕುಂತಳಾದೇವಿ ತನ್ನ ತಂದೆಯೊಡನೆ ಪ್ರತಿಭೆ ಪ್ರದರ್ಶಿಸುವ ಸಲುವಾಗಿ ಲಂಡನ್‌ಗೆ ತೆರಳಿದರು. ನಂತರದ 20-30 ವರ್ಷ ಜಗತ್ತಿನ ಬಹುತೇಕ ದೇಶಗಳನ್ನು ಸುತ್ತುತ್ತಾ ಅಲ್ಲಿನ ಜನರನ್ನು ತನ್ನ ಪ್ರತಿಭೆಯಿಂದ ಚಕಿತಗೊಳಿಸುತ್ತಾ ಸಾಗಿದರು.
undefined
1977ರಲ್ಲಿ ಸದರ್ನ್ ಮೆಥಾಡಿಸ್ಟ್ ಯೂನಿವರ್ಸಿಟಿಯಲ್ಲಿ ಶಕುಂತಳಾದೇವಿ ಒಟ್ಟು 201 ಸಂಖ್ಯೆಗಳ 23ನೇ ರೂಟ್ ಎಷ್ಟಾಗುತ್ತದೆಂಬುದನ್ನು ಕೇವಲ 50 ಸೆಕಂಡ್‌ಗಳಲ್ಲಿ ಹೇಳಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದರು.
undefined
1980ರಲ್ಲಿ ಲಂಡನ್‌ನ ಕಾಲೇಜಿನಲ್ಲಿ 13 ಸಂಖ್ಯೆಗಳನ್ನು ಹೊಂದಿದ 7,686,369,774,870 × 2,465,099,745,779 ಈ ಲೆಕ್ಕ ನೀಡಿ ಉತ್ತರ ಎಷ್ಟಾಗುತ್ತದೆಂದು ಕೇಳಿದಾಗ ಕೇವಲ 28 ಸೆಕೆಂಡ್‌ಗಳಲ್ಲಿ ಶಕುಂತಳಾದೇವಿ ಸರಿಯಾದ ಉತ್ತರ ನೀಡಿದ್ದರು. ಅದರ ಉತ್ತರ 18,947,668,177,995,426,462,773,730 ಇದಾಗಿತ್ತು. ಇದರ ನಂತರ ಆಕೆಯ ಹೆಸರು ಗಿನ್ನೆಸ್ ದಾಖಲೆಗೆ ಸೇರಿತು.
undefined
ಐನ್‌ಸ್ಟೀನ್ ನೀಡಿದ ಲೆಕ್ಕವೊಂದಕ್ಕೆ ಶಕುಂತಳಾ ಅರ್ಧ ನಿಮಿಷದಲ್ಲಿಸರಿ ಉತ್ತರ ನೀಡಿದಾಗ ಸ್ವತಃ ಐನ್‌ಸ್ಟೀನ್ ಚಕಿತರಾಗಿದ್ದರು. ತಮಗೆ ಆ ಕ್ಲಿಷ್ಟಕರ ಲೆಕ್ಕ ಬಿಡಿಸಲು ಏನಿಲ್ಲವೆಂದರೂ 3 ಗಂಟೆ ಬೇಕು. ಇತರರಿಗೆ 6 ಗಂಟೆಯಾದರೂ ಬೇಕು. ಆದರೆ ಈಕೆ ಹೇಗೆ ಬಿಡಿಸಿದರೆಂಬುದೇ ಅವರಿಗೆ ಒಗಟಾಗಿತ್ತು. ಈ ಘಟನೆಯನ್ನು ಓಶೋ ಹೇಳಿದ್ದಾರೆ.
undefined
ಶಕುಂತಳಾದೇವಿ ಕೋಲ್ಕತ್ತಾದ ಐಎಎಸ್ ಆಫೀಸರ್ ಪಾರಿತೋಶ್ ಬ್ಯಾನರ್ಜಿಯನ್ನು ವಿವಾಹವಾಗಿದ್ದರು. ಅವರಿಗೆ ಅನುಪಮ ಬ್ಯಾನರ್ಜಿ ಎಂಬ ಮಗಳು ಜನಿಸಿದಳು. ಆದರೆ, 1979ರಲ್ಲಿ ಅವರ ವಿಚ್ಛೇದನವಾಯಿತು. ಪತಿ ಸಲಿಂಗಿಯಾಗಿದ್ದರು ಎಂದು ಶಕುಂತಳಾ ಹೇಳಿದ್ದರು.
undefined
ಹ್ಯೂಮನ್ ಕಂಪ್ಯೂಟರ್ ಎಂಬ ಹೆಸರು ಶಕುಂತಳಾಗೆ ಇಷ್ಟವಿರಲಿಲ್ಲ. ಮನುಷ್ಯರ ಮೆದುಳು ಕಂಪ್ಯೂಟರ್‌ಗಿಂತ ಹೆಚ್ಚಿನ ಚಮತ್ಕಾರ ಮಾಡಬಲ್ಲದು, ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತದೆ ಎಂದು ಅವರು ವಾದಿಸುತ್ತಿದ್ದರು.
undefined
1977ರಲ್ಲಿ ಶಕುಂತಳಾ ದೇವಿ ಸಲಿಂಗಿಗಳ ಕುರಿತು ವರ್ಲ್ಡ್ ಆಫ್ ಹೋಮೋಸೆಕ್ಷುಯಲ್ಸ್ ಎಂಬ ವಿಶಿಷ್ಠ ಪುಸ್ತಕ ಬರೆದಿದ್ದರು. ಸಲಿಂಗಿಗಳನ್ನು ಅವರು ಸಹಜವಾಗಿಯೂ, ಅರ್ಥ ಮಾಡಿಕೊಳ್ಳುವಂತೆಯೂ ನೋಡಿದ್ದರು.
undefined
ಪ್ರೇರಣಾದಾಯಕ ಭಾಷಣ ನೀಡುವ ಜೊತೆಗೆ, ಅಡುಗೆ, ಜ್ಯೋತಿಷ್ಯಶಾಸ್ತ್ರದಲ್ಲೂ ಶಕುಂತಳಾ ಪ್ರತಿಭೆ ಪ್ರದರ್ಶಿಸುತ್ತಿದ್ದರು. ಈ ಸಂಬಂಧ ಹಲವಾರು ರೀತಿಯ ಪುಸ್ತಕಗಳನ್ನು ಅವರು ಬರೆದಿದ್ದಾರೆ.
undefined
1980ರಲ್ಲಿ ಶಕುಂತಳಾ ದೇವಿ 2 ಲೋಕಸಭಾ ಎಲೆಕ್ಷನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರಿ. ಮೇದಕ್‌ನಲ್ಲಿ ಇಂದಿರಾ ಗಾಂಧಿಯ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದರು.
undefined
ಶಕುಂತಳಾ ಹಾಗೂ ಪುತ್ರಿ ಅನುಪಮಾ ಬೆಂಗಳೂರಿನಲ್ಲಿರುವಾಗ ವಿದ್ಯಾರ್ಥಿ ಭವನಕ್ಕೆ ದೋಸೆ ತಿನ್ನಲು ಹೋಗುತ್ತಿದ್ದರು. ಶಕುಂತಳಾಗೆ ಈ ದೋಸೆ ಎಂದರೆ ಬಹಳ ಇಷ್ಟವಿತ್ತು.
undefined
ಶಕುಂತಳಾ ಪುತ್ರಿ ಅನುಪಮಾ ಆಕೆಯ ಪತಿ ಅಭಯ್ ಕುಮಾರ್ ಜೊತೆಗೆ ಸಧ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ.
undefined
2013ರ ಏಪ್ರಿಲ್ 21ರಂದು, 83 ವರ್ಷದ ಶಕುಂತಳಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದರು.
undefined

Latest Videos

click me!