ವಕ್ರ ಕುತ್ತಿಗೆಯಿಂದ ಮುಜುಗರ, ಕೆಲಸ ಸಿಗದೇ ಆತ್ಮಹತ್ಯೆಗೆ ಪ್ರಯತ್ನಿಸಿದ ಈಕೆ ಈಗ ದೊಡ್ಡ ಕಂಪನಿ CEO

First Published | Dec 5, 2023, 5:31 PM IST

ಶಾಲೆಯಲ್ಲಿ ಎಲ್ಲರಿಂದ ಮುಜುಗರ ಅನುಭವಿಸಿದ ಹುಡುಗಿ, ತನ್ನ ಇಂಡಿಯನ್ ಉಚ್ಛಾರಣೆಗಾಗಿ ಎಲ್ಲರೆದುರು ಮುಜುಗರಕ್ಕೆ ಒಳಗಾದ ಮಹಿಳೆ ಇದೀಗ ಅತ್ಯಂತ ಸಣ್ನ ವಯಸ್ಸಲ್ಲೆ ದೊಡ್ಡ ಕಂಪನಿಯ ಸಿಇಒ ಆದ ಒಂದು ಇಂಟ್ರೆಸ್ಟಿಂಗ್ ಘಟನೆ ಬಗ್ಗೆ ನಾವಿಲ್ಲಿ ಹೇಳ್ತೀವಿ ಕೇಳಿ. 
 

ತನ್ನ ಭಾರತೀಯ ಉಚ್ಚಾರಣೆ (indian accent) ಮತ್ತು ವಕ್ರ ಕುತ್ತಿಗೆಗಾಗಿ (broken neck)ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಎಲ್ಲರಿಂದಲೂ ಮುಜುಗರಕ್ಕೆ ಒಳಗಾಗಿ, ನಂತರ ಉದ್ಯೋಗಕ್ಕಾಗಿ ಅಲೆದು, ಹಲವು ಬಾರಿ ರಿಜೆಕ್ಟ್ ಆದ ರಾಧಿಕಾ ಗುಪ್ತಾ ತಮ್ಮ ಛಲದಿಂದ ಗೆದ್ದು, ಕಾರ್ಪೋರೇಟ್ ಜಗತ್ತನ್ನು (Corporate World) ಏರುವ ಮೂಲಕ ತಮ್ಮ 33ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆಯನ್ನು ನೀವು ಕೇಳಲೇಬೇಕು. 

ಎಡೆಲ್ವೀಸ್ (Edelweiss MF) ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಸಿಇಒ ಆಗಿರುವ ರಾಧಿಕಾ ಗುಪ್ತಾ (Radhika Gupta) ತಾವು ಜೀವನದಲ್ಲಿ ಅನುಭವಿಸಿದ ನೋವುಗಳನ್ನು ಬಿಚ್ಚಿಟ್ಟಿದ್ದಾರೆ. ಹುಟ್ಟುವಾಗಲೇ ವಕ್ರ ಕುತ್ತಿಗೆಯೊಂದಿಗೆ ಹುಟ್ಟಿದ ರಾಧಿಕಾ, ತನ್ನ ಲುಕ್ ಗಾಗಿ ಪ್ರತಿ ಬಾರಿ, ಶಾಲೆ ಕಾಲೇಜಿನಲ್ಲಿ ಎಲ್ಲರ ಮುಂದೆ ತಮಾಷೆಯ ವಸ್ತುವಾಗಿದ್ದರು. 
 

Tap to resize

'ಟಾರ್ಟಿಕೊಲಿಸ್' ಅಥವಾ ಗುಪ್ತಾ ಹೇಳುವಂತೆ 'ವಕ್ರ ಕುತ್ತಿಗೆ' ಎಂಬುದು ಕುತ್ತಿಗೆಯ ಸ್ನಾಯುಗಳು ಸಂಕುಚಿತಗೊಳ್ಳುವ ಅಪರೂಪದ ಸ್ಥಿತಿ. ಇದರಿಂದಾಗಿ ತಲೆ ಒಂದು ಬದಿಗೆ ತಿರುಗುತ್ತದೆ. ಇದರಿಂದ ಬೇರೇನೂ ಸಮಸ್ಯೆ ಇಲ್ಲದೇ ಇದ್ದರೂ, ಅದೊಂದು ವೈಕಲ್ಯದಂತೆ ತೋರುತ್ತದೆ. 
 

ರಾಜತಾಂತ್ರಿಕ ತಂದೆಯ ಮಗಳಾದ ರಾಧಿಕಾ ಪ್ರತಿ 3 ವರ್ಷಗಳಿಗೊಮ್ಮೆ ದೇಶ ಬದಲಾಯಿಸಬೇಕಿತ್ತಂತೆ. ನೈಜೀರಿಯಾಕ್ಕೆ ಬರುವ ಮೊದಲು ಭಾರತ, ಪಾಕಿಸ್ತಾನ ಮತ್ತು ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಅವರ ಭಾರತೀಯ ಉಚ್ಚಾರಣೆಗಾಗಿ ಅವರ ಸಹಪಾಠಿಗಳೇ ಅವರನ್ನು ತಮಾಷೆ ಮಾಡುತ್ತಿದ್ದರಂತೆ, ಅಷ್ಟೇ ಅಲ್ಲ ಗೆಳೆಯರು ಅವರನ್ನು ದಿ ಸಿಂಪ್ಸನ್ ನ ಒಂದು ಪಾತ್ರವಾದ 'ಅಪು' ಎಂದು ಕರೆದು ಗೇಲಿ ಮಾಡುತ್ತಿದ್ದರಂತೆ. 
 

ಶಾಲೆ, ಕಾಲೇಜಿನಲ್ಲಿ ತಮ್ಮ ಲುಕ್ ನಿಂದ ಟೀಕೆಗೆ ಒಳಗಾದ ರಾಧಿಕಾ, ವಿದ್ಯಾಭ್ಯಾಸದ ಬಳಿಕ ಹಲವು ಉದ್ಯೋಗ ಸಂದರ್ಶನಗಳನ್ನು (Jon Interviews) ನೀಡಿ ಸೋತಿದ್ದರು. ತಮ್ಮ 22ನೇ ವಯಸ್ಸಿನಲ್ಲಿ, ಮತ್ತೆ ತನ್ನ ಏಳನೇ ಉದ್ಯೋಗ ನಿರಾಕರಣೆಯನ್ನು (job rejection) ಎದುರಿಸಿದ ನಂತರ ಅವರಿಗೆ ಜೀವನವೇ ವ್ಯರ್ಥ ಎಂದು ಅನಿಸಿ ಖಿನ್ನತೆಗೆ(depression)  ಒಳಗಾಗಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದರಂತೆ. 
 

ತಾನು ಕಿಟಕಿಯಿಂದ ಜಿಗಿಯುತ್ತೇನೆ ಎಂದಾಗ ಗಾಬರಿಗೊಂಡ ಆಕೆಯ ಸ್ನೇಹಿತರು ಅವರನ್ನು ತಡೆದರಂತೆ. ನಂತರ ರಾಧಿಕಾ ಗುಪ್ತಾ ಅವರನ್ನು ಮನೋವೈದ್ಯಕೀಯ ವಾರ್ಡ್ ಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಖಿನ್ನತೆ (Depression) ಇರುವುದು ಪತ್ತೆಯಾಗಿತ್ತು. ಕೊನೆಗೆ ಒಂದು ದಿನ ತನಗೆ ಉದ್ಯೋಗ ಸಂದರ್ಶನವಿದೆ ಮತ್ತು ಅದು ತನ್ನ ಕೊನೆಯ ಶಾಟ್ ಆಗಿರಬಹುದು ಎಂದು ಹೇಳಿ ಮೆಂಟಲ್ ವಾರ್ಡ್ (mental health ward)ನಿಂದ ಹೊರ ಬಂದು ಸಂದರ್ಶನಕ್ಕೆ ಹೊರಟರಂತೆ. ಆ ದಿನ, ಅವರು ಮೆಕಿನ್ಸೆಯಲ್ಲಿ ಕೆಲಸ ಪಡೆದರು.
 

ಕೆಲಸ ಸಿಕ್ಕ ಮೇಲೆ ಅವರ ಜೀವನವು ಸರಿಯಾದ ಹಾದಿಯಲ್ಲಿತ್ತು ಎಂದು ಗುಪ್ತಾ ಹೇಳುತ್ತಾರೆ. 'ಆದರೆ 3 ವರ್ಷಗಳ ನಂತರ, 2008 ರ ಆರ್ಥಿಕ ಬಿಕ್ಕಟ್ಟಿನಿಂದ ನಂತರ, ಜೀವನದಲ್ಲಿ ಏನಾದರೂ ಬದಲಾವಣೆ ಆಗಬೇಕಿದೆ ಎಂದು ಬಯಸಿದ್ದ ರಾಧಿಕಾ ತಮ್ಮ 25 ನೇ ವಯಸ್ಸಿನಲ್ಲಿ, ಭಾರತಕ್ಕೆ ಸ್ಥಳಾಂತರಗೊಂಡರು, ಬಳಿಕ ತಮ್ಮ ಪತಿ ಮತ್ತು ಸ್ನೇಹಿತನೊಂದಿಗೆ ಸೇರಿ ಸ್ವಂತ ಆಸ್ತಿ ನಿರ್ವಹಣಾ ಸಂಸ್ಥೆಯನ್ನು ಪ್ರಾರಂಭಿಸಿದರು.
 

ಕೆಲವು ವರ್ಷಗಳ ನಂತರ, ಅವರ ಕಂಪನಿಯನ್ನು ಎಡೆಲ್ವೀಸ್ ಎಂಎಫ್ ಸ್ವಾಧೀನಪಡಿಸಿಕೊಂಡಿತು. ನಂತರ ರಾಧಿಕಾ ಕಾರ್ಪೊರೇಟ್ ಏಣಿಯನ್ನು ಏರಲು ಪ್ರಾರಂಭಿಸಿದರು. ಸದಾ ಅವಕಾಶಗಳನ್ನು ಸ್ವೀಕರಿಸಲು ಮುಂದಿದ್ದ ರಾಧಿಕಾ ಅವರಿಗೆ ಸಿಇಒ ಆಗಲು ಅವರ ಪತಿ ತುಂಬಾನೆ ಬೆಂಬಲ ನೀಡಿದ್ದರಂತೆ. 

ಕೆಲವು ವರ್ಷಗಳ ನಂತರ ಎಡೆಲ್ವೀಸ್ ಎಂಎಫ್ನಲ್ಲಿ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಲು ಇವರ ಪತಿ ತುಂಬಾನೆ ಪ್ರೋತ್ಸಾಹ ನೀಡಿದರು .ಆದರೆ ರಾಧಿಕಾ ಹಿಂಜರಿಯುತ್ತಿದ್ದರಂತೆ. 'ಅವರು ನನ್ನನ್ನು ಏಕೆ ಸಿಇಒ ಮಾಡುತ್ತಾರೆ ಅನ್ನೋದೇ ಇವರ ಯೋಚನೆ ಆಗಿತ್ತು. ಆದರೆ ಪತಿ ಪಾತ್ರ ಈ ಸ್ಥಾನಕ್ಕೆ ನೀನು ಅತ್ಯುತ್ತಮ ಆಯ್ಕೆ ಎಂದಿದ್ದರಂತೆ. ಇದಾಗಿ ಕೆಲವು ತಿಂಗಳ ನಂತರ, 33ನೇ ವಯಸ್ಸಿನಲ್ಲಿ, ರಾಧಿಕಾ ಭಾರತದ ಅತ್ಯಂತ ಕಿರಿಯ ಸಿಇಒಗಳಲ್ಲಿ (one of the youngest CEOs of India) ಒಬ್ಬರಾದರು. ಸದ್ಯ ದೊಡ್ಡ ಕಂಪನಿಯನ್ನು ನಡೆಸುವ ಜವಾಬ್ಧಾರಿ ರಾಧಿಕಾ ಗುಪ್ತಾ ಮೇಲಿದೆ. 
 

Latest Videos

click me!