ಬಾಲ್ಯದಲ್ಲೇಲ್ಲಾ ಮಕ್ಕಳ ಬಳಿ ನಿಮಗೆ ದೊಡ್ಡವರಾದ ಮೇಲೆ ಏನಾಗೋಕೆ ಇಷ್ಟ ಎಂದು ಕೇಳಿದಾಗ, ಹೆಚ್ಚಿನ ಹುಡುಗರು ಹೇಳೋದು ಬಸ್ ಡ್ರೈವರ್ ಅಂತಾನೆ. ಆದರೆ ಅದಕ್ಕೆ ವಿರುದ್ಧವಾಗಿ ಇಲ್ಲೊಬ್ಬಳು ಯುವತಿ ಬಾಲ್ಯದಿಂದಲೂ ಬಸ್ ಡ್ರೈವರ್ (Bus Driver) ಆಗಬೇಕೆಂದು ಕನಸು ಕಂಡು, ಇದೀಗ ಕೊಯಮತ್ತೂರಿನ ಬೀದಿಗಳಲ್ಲಿ ಬಸ್ ಓಡಿಸುತ್ತಾ ಗಮನ ಸೆಳೆಯುತ್ತಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಈಗ ಮೊದಲ ಮಹಿಳಾ ಬಸ್ ಚಾಲಕಿಯಾಗಿ ಎಂ ಶರ್ಮಿಳಾ (M Sharmila) ಕಾರ್ಯ ನಿರ್ವಹಿಸುತ್ತಿದ್ದಾರೆ. ವಡವಳ್ಳಿಯ ತಿರುವಳ್ಳುವರ್ ನಗರದ 24 ವರ್ಷದ ಯುವತಿ ಶರ್ಮಿಳಾ, ಶುಕ್ರವಾರ ಖಾಸಗಿ ಬಸ್ ಸ್ಟೀರಿಂಗ್ ವ್ಹೀಲ್ ಹಿಡಿದುಕೊಂಡಿದ್ದು, ತಮ್ಮ ಚಾಲನಾ ಸ್ಕಿಲ್ ಮೂಲಕ ಜನ ಹುಬ್ಬೇರಿಸುವಂತೆ ಮಾಡಿದ್ದಾರೆ. .
ಶರ್ಮಿಳಾ ಮೊದಲು ಪ್ರಯಾಣಿಸಿದ್ದು ಗಾಂಧಿಪುರಂ ಬಸ್ ನಿಲ್ದಾಣದಕ್ಕೆ, ಸೋಮನೂರಿಗೆ ಬಸ್ ಗಾಗಿ ಕಾಯುತ್ತಿರುವ ಅನೇಕರ ಮುಖದಲ್ಲಿ ಲೇಡಿ ಡ್ರೈವರ್ (lady bus driver) ನೋಡಿ ಆಶ್ಚರ್ಯ ಕಾದಿತ್ತು. ಕಾರಣ ಸ್ಪಷ್ಟವಾಗಿತ್ತು - ಮಹಿಳೆ ಬಸ್ ಓಡಿಸುವುದನ್ನು ಅವರು ಎಂದಿಗೂ ನೋಡಿರಲಿಲ್ಲ.
ಫಾರ್ಮಸಿಯಲ್ಲಿ ಡಿಪ್ಲೊಮಾ ಮಾಡಿರುವ ಶರ್ಮಿಳಾಗೆ ಹಿಂದಿನಿಂದಲೂ ಡ್ರೈವಿಂಗ್ ಮಾಡೋದಂದ್ರೆ ತುಂಬಾ ಇಷ್ಟ. ಶರ್ಮಿಳಾ ಬಸ್ ಡ್ರೈವಿಂಗ್ (bus driving) ಮಾಡೋ ಮುನ್ನ ಕಾಲ್-ಟ್ಯಾಕ್ಸಿಗಳನ್ನು ಓಡಿಸುತ್ತಿದ್ದಳು. ಅದಕ್ಕೂ ಮೊದಲು ಅವರು ಆಟೋರಿಕ್ಷಾಗಳನ್ನು ಸಹ ಓಡಿಸಿದ್ದಾರೆ.
ಬಸ್ ಓಡಿಸುವುದು ಅವರ ಬಹುಕಾಲದ ಕನಸಾಗಿತ್ತು, ಮತ್ತು ಭಾರಿ ವಾಹನಗಳನ್ನು ಓಡಿಸಲು ಪರವಾನಗಿ ಪಡೆದ ದಿನವೇ ಅದು ನನಸಾಯಿತು. ಆ ದಿನ ಶರ್ಮಿಳಾ ತನ್ನ ಸಾಮರ್ಥ್ಯವನ್ನು ಅನುಮಾನಿಸಿದ ಮತ್ತು ಅವಳನ್ನು ಅಪಹಾಸ್ಯ ಮಾಡಿದವರಿಗೆ ತನ್ನ ಡ್ರೈವಿಂಗ್ ಸ್ಕಿಲ್ ಮೂಲಕವೇ ಉತ್ತರ ನೀಡಿದ್ದರು..
ಪರವಾನಗಿ ಪಡೆದ ಕೂಡಲೇ, ಅವರು ಖಾಸಗಿ ಬಸ್ ಆಪರೇಟರ್ ಬಳಿ ಚಾಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಸ್ಟೀರಿಂಗ್ ವೀಲ್‌ನಲ್ಲಿ ಶರ್ಮಿಳಾ ಕೌಶಲ್ಯಗಳು ಬಸ್ ಮಾಲೀಕರನ್ನು ಆಕರ್ಷಿಸಿದವು. ಗಾಂಧಿಪುರಂ-ಸೋಮನೂರು ಮಾರ್ಗದಲ್ಲಿ ಚಲಿಸುವ ಬಸ್ಸ್ ನಲ್ಲಿ ಅವರಿಗೆ ಚಾಲಕರಾಗಿ ಕೆಲಸ ನೀಡಲಾಯಿತು.
ಬಸ್ ನಲ್ಲಿ ಮೊದಲ ಬಾರಿಗೆ ಲೇಡಿ ಡ್ರೈವರ್ ನೋಡಿದ ಜನಸಮೂಹ ಅಂತೂ ಮೂಕಸ್ಮಿತರಾಗಿದ್ದರು. ಪ್ರಯಾಣಿಕರು ಶರ್ಮಿಳಾ ಬಸ್ ಓಡಿಸುವ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿತು. ಅನೇಕರು ಅವರನ್ನು ಅಭಿನಂದಿಸಿದರು. ನಿಮಗೆ ಹೇಗನಿಸುತ್ತಿದೆ ಎಂದು ಕೇಳಿದಾಗ, ಶರ್ಮಿಳಾ 'ಬಸ್ ಅನ್ನು ಕೌಶಲ್ಯದಿಂದ ಓಡಿಸುವುದು ಪುರುಷರು ಮಾತ್ರ ಸಾಧಿಸಬಹುದಾದ ವಿಷಯವಲ್ಲ ಎಂದು ನಾನು ಅವರಿಗೆ ತೋರಿಸಿದ್ದೇನೆ; ಮಹಿಳೆಯರು ಕೂಡ ಚೆನ್ನಾಗಿಯೇ ವಾಹನ ಚಲಾಯಿಸಬಹುದು ಎಂದು ಹೇಳಿದ್ದಾರೆ.