ಚಳಿಗಾಲದ ಶುಷ್ಕ ಚರ್ಮ ನಿವಾರಣೆಗೆ ಮನೆಯಲ್ಲೇ ತಯಾರಿಸಿ ಕ್ರೀಂ

First Published Nov 28, 2020, 3:31 PM IST

ಚಳಿಗಾಲವು  ಬದಲಾವಣೆ ಸಮಯ. ನೀವು ಚಳಿಗಾಲದಲ್ಲಿ ಚರ್ಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಿಮ್ಮ ದೇಹಕ್ಕೆ ಈ ಋತುವಿನಲ್ಲಿ  ಹೆಚ್ಚು ಕಾಳಜಿ ಅಗತ್ಯವಿದೆ.  ಆರೋಗ್ಯಕರ ಆಹಾರದಿಂದ ಹಿಡಿದು ನಮ್ಮ ಆಹಾರಕ್ರಮದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ನಾವು ಸದೃಡವಾಗಿ ಮತ್ತು ಆರೋಗ್ಯವಾಗಿರಲು ಎಲ್ಲವನ್ನು ಪ್ರಯತ್ನಿಸುತ್ತೇವೆ. ಆದರೆ ನಮ್ಮಲ್ಲಿ ಹೆಚ್ಚಿನವರು ನಿರ್ಲಕ್ಷಿಸುವ ಒಂದು ವಿಷಯವೆಂದರೆ ನಮ್ಮ ಚರ್ಮ. 

ಹೌದು ಚಳಿಗಾಲದಲ್ಲಿ ಚರ್ಮದ ಕಾಳಜಿ ಅತ್ಯಗತ್ಯ. ಚರ್ಮಕ್ಕೆ ನಮ್ಮ ದೇಹದಷ್ಟೇ ಪ್ರೀತಿ ಮತ್ತು ಕಾಳಜಿಯ ಅಗತ್ಯವಿರುತ್ತದೆ, ಆದರೆ ಚರ್ಮದ ಬಿರುಕುಗಳು ಮತ್ತು ನೋವುಗಳು ನಮ್ಮನ್ನು ಕಾಡಲಾರಂಭಿಸುವವರೆಗೆ ನಾವು ಆಗಾಗ್ಗೆ ಚರ್ಮದ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ.
undefined
ಶುಷ್ಕ ಹವಾಮಾನವು ನಿಮ್ಮ ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಹಾನಿಗೊಳಗಾದ ಮತ್ತು ಶುಷ್ಕ ಚರ್ಮಕ್ಕೆ ಕಾರಣವಾಗುತ್ತದೆ. ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವ ಬದಲಾಗುತ್ತಿರುವ ಹವಾಮಾನದ ಬಗ್ಗೆ ನೀವೂ ತಲೆಕೆಡಿಸಿಕೊಳ್ಳುತ್ತಿದ್ದರೆ, ಇದಕ್ಕೆ ಪರಿಹಾರ ನಿಮ್ಮ ಅಡುಗೆಮನೆಯಲ್ಲಿಯೇ ಇರಬಹುದು. ಇದು ಕಷ್ಟಕರವೆಂದು ತೋರುತ್ತದೆ ಆದರೆ ಸಾಮಾನ್ಯ ಅಡಿಗೆ ಪದಾರ್ಥಗಳನ್ನು ಬಳಸಿಕೊಂಡು ನೀವು ನಿಜವಾಗಿಯೂ ಕೆಲವು ಅದ್ಭುತ ಕ್ರೀಮ್ ಮಾಡಬಹುದು.
undefined
ತೆಂಗಿನ ಎಣ್ಣೆಯ ಕ್ರೀಮ್ :ಈ ಸುಲಭವಾದ ದೇಹದ ಕ್ರೀಮ್ ತಯಾರಿಸಲು, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.1 ಕಪ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು, ನಂತರ 1 ಚಮಚ ಬಾದಾಮಿ ಎಣ್ಣೆಯಲ್ಲಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.
undefined
ನಂತರ ವಿಟಮಿನ್ ಸಿ ಎಸೆನ್ಶಿಯಲ್ ಎಣ್ಣೆಯ 8 ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಫ್ರಿಡ್ಜ್ ನಲ್ಲಿ ಇರಿಸಿ. ದಪ್ಪಗಾಗುವವರೆಗೆ ಬಿಡಿ.
undefined
ಒಮ್ಮೆ ತೈಲ ದಪ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. ದಪ್ಪ ಎಣ್ಣೆ ಮಿಶ್ರಣಕ್ಕೆ 1 ಚಮಚ ಕಾರ್ನ್ ಫ್ಲೋರ್ ಸೇರಿಸಿ, ಫೋರ್ಕ್ ಅಥವಾ ಬ್ಲೆಂಡರ್ ಬಳಸಿ, ಮಿಶ್ರಣವು ಕ್ರೀಮ್ ರೀತಿ ಆಗುವರೆಗೆ ವಿಪ್ ಮಾಡಿ. ಗಾಜಿನ ಜಾರ್ ಗೆ ವರ್ಗಾಯಿಸಿ.
undefined
ಇದನ್ನು ತಂಪಾದ ಅಥವಾ ಒಣ ಸ್ಥಳದಲ್ಲಿ ಸಂಗ್ರಹಿಸಿ. ನಂತರ, ರೆಫ್ರಿಜೆರೇಟ್ ಮಾಡಿ ಮತ್ತು ಬಳಸಿ. ಇದನ್ನು ಬಳಕೆ ಮಾಡಿದರೆ ಚರ್ಮ ಹೈಡ್ರೇಟ್ ಆಗಿರುತ್ತದೆ.
undefined
ಶಿಯಾ ಬಾಡಿ ಬಟರ್ : ಮನೆಯಲ್ಲಿ ಈ ಸುಲಭವಾದ ಬಾಡಿ ಬಟರ್ ತಯಾರಿಸಲು, ಡಬಲ್ ಬಾಯ್ಲರ್ ವಿಧಾನವನ್ನು ಬಳಸಿ, ½ ಕಪ್ ಶಿಯಾ ಬೆಣ್ಣೆ, ½ ಕಪ್ ಕೋಕೋ ಬೆಣ್ಣೆ, ½ ಕಪ್ ತೆಂಗಿನ ಎಣ್ಣೆ ಮತ್ತು ½ ಕಪ್ ಬಾದಾಮಿ ಎಣ್ಣೆಯನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಕರಗಿಸಿ ಮೃದುವಾದ ಮಿಶ್ರಣವನ್ನು ಮಾಡಿ.
undefined
ಒಮ್ಮೆ ಮಾಡಿದ ನಂತರ, ಜ್ವಾಲೆಯನ್ನು ಆಫ್ ಮಾಡಿ, ಮಿಶ್ರಣವನ್ನು ತಣ್ಣಗಾಗಲು ಮತ್ತು ಸಾಮಾನ್ಯ ತಾಪಮಾನವನ್ನು ಪಡೆಯಲು ಬಿಡಿ.
undefined
ನಂತರ ಮಿಶ್ರಣವನ್ನು ಫ್ರಿಜ್ ನಲ್ಲಿಡಿ ಮತ್ತು ಹ್ಯಾಂಡ್ ಬ್ಲೆಂಡರ್ ಬಳಸಿ, ಮಿಶ್ರಣವನ್ನು ಕ್ರೀಮ್ ನಂತೆ ಆಗುವವರೆಗೆ ಮಿಶ್ರಣ ಮಾಡಿ. ನಂತರ ಎಸೆನ್ಶಿಯಲ್ ಎಣ್ಣೆಯ 20-30 ಹನಿಗಳಲ್ಲಿ ಸೇರಿಸಿ ಮತ್ತೆ ಮಿಶ್ರಣ ಮಾಡಿ.
undefined
ನಂತರ ಮಿಶ್ರಣವನ್ನು ಗಾಜಿನ ಪಾತ್ರೆಯಲ್ಲಿ ವರ್ಗಾಯಿಸಿ ಮತ್ತು ತಂಪಾದ ಡಾರ್ಕ್ ಆದ ಸ್ಥಳದಲ್ಲಿ ಇರಿಸಿ. ಇವುಗಳ ಬಳಕೆಯಿಂದ ತ್ವಚೆ ಮೃದುವಾಗುತ್ತದೆ ಜೊತೆಗೆ, ಶುಷ್ಕ ವಾತಾವರಣದಿಂದ ದೇಹವನ್ನು ರಕ್ಷಿಸುತ್ತದೆ.
undefined
click me!