ಗರ್ಭಾವಸ್ಥೆಯಲ್ಲಿ ಕಾಡೋ ಹೃದಯ ಸಂಬಂಧಿ ಸಮಸ್ಯೆ: ತಪ್ಪಿಸಲು ಇಲ್ಲಿವೆ ದಾರಿ!

First Published | Mar 8, 2023, 4:42 PM IST

ಗರ್ಭಧಾರಣೆಯ ಸಮಯವು ಮಹಿಳೆಗೆ ತುಂಬಾ ಸೂಕ್ಷ್ಮವಾಗಿರುತ್ತೆ. ಈ ಸಮಯದಲ್ಲಿ, ಅವರು ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಆರೋಗ್ಯಕರ ಗರ್ಭಧಾರಣೆಯ ಮೇಲೆ ಪರಿಣಾಮಬೀರಬಹುದು. 

ಹೃದಯ(Heart) ನಮ್ಮ ದೇಹದ ಪ್ರಮುಖ ಭಾಗ. ಅದು ಇಲ್ಲದೆ ದೇಹವು ಬದುಕುಳಿಯಲು ಸಾಧ್ಯವಿಲ್ಲ. ಗರ್ಭಾವಸ್ಥೆಯಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತೆ. ಗರ್ಭಾವಸ್ಥೆಯಲ್ಲಿ ಬ್ಲಡ್ ಸರ್ಕ್ಯುಲೇಶನ್ ಪರಿಣಾಮಕಾರಿ. ಇದು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ದೇಹದಲ್ಲಿ ರಕ್ತ ಪರಿಚಲನೆಯಲ್ಲಿನ ತೊಂದರೆಗಳಿಂದಾಗಿ, ಹೃದ್ರೋಗಗಳ ಅಪಾಯವು ಹೆಚ್ಚಾಗುತ್ತೆ. ಗರ್ಭಾವಸ್ಥೆಯಲ್ಲಿ, ಅನಿಯಮಿತ ಹೃದಯ ಬಡಿತ, ಸ್ಪೊನ್ಟ್ನಿಯುಸ್ ಕೊರೋನರಿ ಆರ್ಟರಿ ಡಿಸ್ ಫುನ್ಕ್ಷನ್, ಮಯೋಕಾರ್ಡಿಯಲ್ ಇಸ್ಕೀಮಿಯಾ ಮತ್ತು ಹೃದಯಾಘಾತದಂತಹ(Heart attack) ಗಂಭೀರ ಸಮಸ್ಯೆಗಳು ತಾಯಿ ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುತ್ತವೆ. 

Tap to resize

ಮಾರ್ಚ್ 8 ರಂದು ಮಹಿಳಾ ದಿನಾಚರಣೆ (Women's day) ಆಚರಿಸಲಾಗುತ್ತೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹೃದಯ ಆರೋಗ್ಯಕರವಾಗಿಡಲು ಏನು ಮಾಡಬಹುದು, ಅವರ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿಯೋಣ. 

ಗರ್ಭಾವಸ್ಥೆಯಲ್ಲಿ ಹೃದಯವನ್ನು ಆರೋಗ್ಯವಾಗಿಡೋದು ಹೇಗೆ? 
1. ಹೃದ್ರೋಗದ ಲಕ್ಷಣಗಳನ್ನು ಗುರುತಿಸಿ-   
ಗರ್ಭಾವಸ್ಥೆಯಲ್ಲಿ ಹೃದಯವನ್ನು ಆರೋಗ್ಯಕರವಾಗಿಡಲು, ಕೆಲವು ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಈ ರೋಗಲಕ್ಷಣಗಳು ಗೋಚರಿಸಿದ್ರೆ, ತಕ್ಷಣ ಪರೀಕ್ಷೆಗೆ ಒಳಗಾಗಿ ಏಕೆಂದರೆ ಅವು ಹೃದ್ರೋಗದ ಲಕ್ಷಣಗಳಾಗಿರಬಹುದು-     
ಮತ್ತೆ ಮತ್ತೆ ತಲೆ ತಿರುಗೋದು.   
ಗರ್ಭಾವಸ್ಥೆಯಲ್ಲಿ, ಉಸಿರಾಟದ ತೊಂದರೆ (Breathing problem)
ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳ
ಎದೆಯಲ್ಲಿ ನೋವಿನ ಅನುಭವ
ಹಠಾತ್ ಬೆವರುವಿಕೆ 
ಮತ್ತೆ ಮತ್ತೆ ಆತಂಕಕ್ಕೆ ಒಳಗಾಗುತ್ತಿದ್ದರೆ ತಕ್ಷಣ ಡಾಕ್ಟರ್ ಹತ್ತಿರ ಹೋಗಿ.

2. ಕಾಲಕಾಲಕ್ಕೆ ಬಿಪಿ(Blood pressure) ತಪಾಸಣೆ ಮಾಡಿಸಿಕೊಳ್ಳಿ-    
ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಪ್ಪಿಸಲು, ಕಾಲಕಾಲಕ್ಕೆ ಬಿಪಿ ಪರೀಕ್ಷಿಸಿಕೊಳ್ಳಿ. ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ, ಕೆಟ್ಟ ಕೊಲೆಸ್ಟ್ರಾಲ್ ಪರೀಕ್ಷಿಸಿ. ಗರ್ಭಾವಸ್ಥೆಯಲ್ಲಿ ಎದೆ ನೋವನ್ನು ಗ್ಯಾಸ್ ಎಂದು ನಿರ್ಲಕ್ಷಿಸಬಾರದು. ಇವು ಹೃದ್ರೋಗದ ಲಕ್ಷಣಗಳಾಗಿರಬಹುದು.

3. ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ಕೊಬ್ಬನ್ನು ತಪ್ಪಿಸಿ 
ಗರ್ಭಾವಸ್ಥೆಯಲ್ಲಿ ಅಧಿಕ ತೂಕ (Weight) ತಪ್ಪಿಸೋದು ಬಹಳ ಮುಖ್ಯ. ದೇಹದಲ್ಲಿ ಕೊಬ್ಬು ಹೆಚ್ಚಾಗೋದರಿಂದ, ಹೃದಯಾಘಾತದ ಅಪಾಯ ಹೆಚ್ಚಾಗಬಹುದು. ಸ್ಥೂಲಕಾಯತೆಯಿಂದಾಗಿ, ಹೃದ್ರೋಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. 

ಗರ್ಭಾವಸ್ಥೆಯಲ್ಲಿ ತೂಕ ನಿಯಂತ್ರಣದಲ್ಲಿಡಲು, ಯೋಗ (Yoga), ಉಸಿರಾಟದ ವ್ಯಾಯಾಮ, ಬ್ರಷ್ ವಾಕ್ ಇತ್ಯಾದಿಗಳನ್ನು ಆಶ್ರಯಿಸಬಹುದು. ಹೃದಯವನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಫೈಬರ್ ತೆಗೆದುಕೊಳ್ಳಿ. ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ, ಮಲಗಿ ತಿನ್ನುವ ಅಭ್ಯಾಸವನ್ನು ತ್ಯಜಿಸಿ ಮತ್ತು 3 ಸಲ ಹೆಚ್ಚಿನ ಆಹಾರ ತೆಗೆದುಕೊಳ್ಳುವ ಬದಲು, ದಿನಕ್ಕೆ 5 ಬಾರಿ ಸಣ್ಣ ಪ್ರಮಾಣದಲ್ಲಿ ಆರೋಗ್ಯಕರ ಆಹಾರ ಸೇವಿಸಿ.
 

4. ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರವನ್ನು(Healthy food) ಅನುಸರಿಸಿ     
ಗರ್ಭಾವಸ್ಥೆಯಲ್ಲಿ ಸಂಪೂರ್ಣ ಧಾನ್ಯಗಳು ಅಥವಾ ಹಣ್ಣುಗಳು, ಹಸಿರು ತರಕಾರಿಗಳನ್ನು ಸೇವಿಸಿ.
ಅಲ್ಲದೇ ಈ ಸಮಯದಲ್ಲಿ ಹೃದಯವನ್ನು ಆರೋಗ್ಯಕರವಾಗಿಡಲು, ಉಪ್ಪು, ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಮಾಡಿ. ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸೇರಿಸಿ. ಇದು ಅಪಧಮನಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತೆ ಮತ್ತು ಹೃದಯವನ್ನು ರಕ್ಷಿಸುತ್ತೆ.
 

ಗರ್ಭಾವಸ್ಥೆಯಲ್ಲಿ ನೀರಿನ ಕೊರತೆಯನ್ನು ತಪ್ಪಿಸಿ. ಪ್ರತಿದಿನ 8 ರಿಂದ 10 ಗ್ಯಾಲನ್ ನೀರು (Water) ಕುಡಿಯಿರಿ.
ಅಷ್ಟೇ ಅಲ್ಲ ಆಲ್ಕೋಹಾಲ್ ಮತ್ತು ಸಿಗರೇಟು ಸೇದೋದನ್ನು ಸಂಪೂರ್ಣವಾಗಿ ತ್ಯಜಿಸಿ. ಆಲ್ಕೋಹಾಲ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತೆ ಮತ್ತು ಹೃದಯವನ್ನು ಹಾನಿಗೊಳಿಸುತ್ತೆ. 

5. ಗರ್ಭಾವಸ್ಥೆಯಲ್ಲಿ ಒತ್ತಡವನ್ನು(Stress) ತಪ್ಪಿಸಿ 
ಗರ್ಭಾವಸ್ಥೆಯಲ್ಲಿ ಅತಿಯಾದ ಒತ್ತಡ ತೆಗೆದುಕೊಳ್ಳೋದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತೆ. ಹೃದಯ ಬಡಿತ ಹೆಚ್ಚಾದರೆ, ಸಾಮಾನ್ಯ ಹೆರಿಗೆ ಆಗೋದು ಕಷ್ಟ. ಒತ್ತಡದಿಂದ ಮುಕ್ತವಾಗಿರಲು ಮತ್ತು ಹೃದ್ರೋಗಗಳಿಂದ ದೂರವಿರಲು, ಪ್ರತಿದಿನ ಧ್ಯಾನ ಮಾಡಿ. 

ಯೋಗದ (Yoga) ಸಹಾಯವನ್ನು ತೆಗೆದುಕೊಳ್ಳಿ, ಆಳವಾದ ಉಸಿರಾಟದ ವ್ಯಾಯಾಮಗಳನ್ನು ಸಹ ಮಾಡಬಹುದು. ಒತ್ತಡ ಕಡಿಮೆ ಮಾಡಲು ಅತಿಯಾಗಿ ತಿನ್ನೋದನ್ನು ತಪ್ಪಿಸಿ. ಗರ್ಭಾವಸ್ಥೆಯಲ್ಲಿ ಒತ್ತಡ ಕಡಿಮೆ ಮಾಡುವ ಮೂಲಕ, ನೀವು ಸುರಕ್ಷಿತ ಹೆರಿಗೆಯಾಗುವಂತೆ ಮಾಡಬಹುದು. ಒತ್ತಡ ಹೆಚ್ಚಾದ್ರೆ, ಬಿಪಿ ಕೂಡ ಹೆಚ್ಚಾಗುತ್ತೆ, ಇದು ಅಪಾಯಕ್ಕೆ ಕಾರಣವಾಗಬಹುದು.  

Latest Videos

click me!