STI ಕಾರಣಗಳ ಬಗ್ಗೆ ಸಂಶೋಧನೆ ಏನು ಹೇಳುತ್ತೆ ?
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (ಎನ್ಸಿಬಿಐ) ನಡೆಸಿದ ಸಂಶೋಧನೆಯು STI ಗಳಿಗೆ ಕಾರಣಗಳನ್ನು ವಿವರಿಸುತ್ತೆ. ಸೋಂಕು ಕೇವಲ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಮಾತ್ರ ಸಂಭವಿಸೋದಿಲ್ಲ ಎಂದು ಈ ಸಂಶೋಧನೆ ಸ್ಪಷ್ಟವಾಗಿ ಹೇಳುತ್ತೆ. ಇದು ಓರಲ್ ಟ್ರಾನ್ಸ್ಮಿಷನ್, ಅತಿಯಾದ ಆಲ್ಕೋಹಾಲ್ (Alcohol) ಬಳಕೆ, ವೇಶ್ಯಾವಾಟಿಕೆ, ಆನುವಂಶಿಕ ಸಮಸ್ಯೆ, ಮಾದಕ ವಸ್ತುಗಳ ಬಳಕೆ, ರೇಜರ್ ಅಥವಾ ಟೂತ್ ಬ್ರಷ್, ಬ್ಯಾಕ್ಟೀರಿಯಾ ಟ್ರಾನ್ಸ್ಮಿಷನ್, ಚರ್ಮದಿಂದ ಚರ್ಮದ ಸೋಂಕಿನಿಂದ ಉಂಟಾಗಬಹುದು.