ದೇಶದ ನಂ. 1 ಶ್ರೀಮಂತ ಗೌತಮ್‌ ಅದಾನಿ ಪತ್ನಿಯ ಲೈಫ್‌ಸ್ಟೈಲ್ ಹೇಗಿದೆ?

First Published Nov 19, 2022, 5:03 PM IST

ವಿಶ್ವದ ಟಾಪ್ 10 ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿ ಅಗ್ರಸ್ಥಾನದಲ್ಲಿದ್ದಾರೆ. ಅದಾನಿ ಅವರ ನೆಟ್ ವರ್ತ್ 131.3 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಹೀಗಿರುವಾಗ ಅವರ ಪತ್ನಿ ಪ್ರೀತಿ ಅದಾನಿಯ ಬಗ್ಗೆ ನಿಮಗೆ ಗೊತ್ತಿದೆಯಾ ?

ವಿಶ್ವದ ಟಾಪ್ 10 ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋದು ನಿಮಗೆ ಗೊತ್ತೆ ಇದೆ ಅಲ್ವಾ?. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ (Forbes real time bileniers) ಸೂಚ್ಯಂಕದಲ್ಲಿ ಅದಾನಿ ಅವರ ನೆಟ್ ವರ್ತ್ 131.3 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಭಾರತದಲ್ಲಿ, ಅವರು ಮುಖೇಶ್ ಅಂಬಾನಿಯನ್ನು ಸಹ ಹಿಂದಿಕ್ಕಿದ್ದಾರೆ. ಆದರೆ ಅವರ ಪತ್ನಿ ಪ್ರೀತಿ ಅದಾನಿಯ ಬಗ್ಗೆ ನಿಮಗೆ ಗೊತ್ತಿದೆಯಾ ?

ಸರಳ ಜೀವನಶೈಲಿಯನ್ನು ಇಷ್ಟಪಡುತ್ತಾರೆ
ದೇಶದ ನಂ. 1 ಶ್ರೀಮಂತ, ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ತಮ್ಮ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಶ್ರೀಮಂತ ಉದ್ಯಮಿಯ ಪತ್ನಿಯಾಗಿರುವುದರ ಜೊತೆಗೆ ಪ್ರೀತಿ ಸ್ವತಃ ಶಿಕ್ಷಣತಜ್ಞೆಯೂ ಆಗಿದ್ದಾರೆ. ಅದಾನಿ ಗ್ರೂಪ್‌ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಮುಖ್ಯಸ್ಥೆಯೂ ಆಗಿದ್ದಾರೆ.

ಸಿಂಪಲ್ ಸೀರೆ, ಸಲ್ವಾರ್ ಧರಿಸುತ್ತಾರೆ
ಪ್ರೀತಿ ಅದಾನಿ ಸರಳ ಜೀವನಶೈಲಿಯನ್ನು ಇಷ್ಟಪಡುತ್ತಾರೆ. ಸಿಂಪಲ್ ಸೀರೆ, ಆಭರಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾದಾ ಬಣ್ಣದ ಕಾಟನ್ ಸೀರೆಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಹಗುರವಾದ ಸಲ್ವಾರ್‌ ಕಮೀಜ್‌ಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. 

ಮುತ್ತಿನ ಆಭರಣಗಳನ್ನು ಪ್ರೀತಿಸುತ್ತಾರೆ
ಪ್ಲಾಟಿನಂ, ಡೈಮಂಡ್‌ಗಳನ್ನು ಬಿಟ್ಟು ಪ್ರೀತಿ ಅದಾನಿ ಮುತ್ತುಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಪರ್ಲ್ಸ್ ಜ್ಯುವೆಲ್ಲರಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಹಲವು ಬಾರಿ ಅವರು ಪರ್ಲ್ಸ್‌ ಇಯರಿಂಗ್ಸ್, ಪರ್ಲ್ಸ್‌ ನೆಕ್ಲೇಸ್‌ನಲ್ಲಿ ಮಿಂಚುವುದನ್ನು ನೋಡಬಹುದು.

ಸರಳ ವಸ್ತುಗಳನ್ನು ಬಳಸುತ್ತಾರೆ
ಬಹುತೇಕ ಉದ್ಯಮಿಗಳ ಪತ್ನಿಯಂದಿರಿಗೆ ಕ್ರೇಜ್‌ ಇರುವಂತೆ ಗೌತಮ್‌ ಅದಾನಿ ಅವರ ಪತ್ನಿಗೆ ಕಾಸ್ಟ್ಲೀ ಹ್ಯಾಂಡ್‌ಬ್ಯಾಗ್‌, ಫೂಟ್‌ವೇರ್‌, ವಾಚ್‌ಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ. ಅವರು ಯಾವಾಗಲೂ ಹೆಚ್ಚು ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಲೆದರ್ ಸ್ಟ್ರಾಪಡ್ ವಾಚ್‌ಗಳನ್ನು ಅವರು ಹೆಚ್ಚಾಗಿ ಧರಿಸಿರುವುದನ್ನು ನೋಡಬಹುದು.

ಉತ್ತಮ ಮಹಿಳಾ ಉದ್ಯಮಿ
ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ ಅವರ ಪತ್ನಿಯಾಗಿದ್ದುಕೊಂಡು ಸಂಸ್ಥೆಯಲ್ಲಿ ಪ್ರೀತಿ ಅದಾನಿ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. 2018-2019ರಲ್ಲಿ ಪ್ರೀತಿ ಅದಾನಿ ತಮ್ಮ ಲೀಡರ್‌ಶಿಪ್‌ನಿಂದ ತಾವು ಮುಖ್ಯಸ್ಥರಾಗಿರುವ ವಿಭಾಗದಲ್ಲಿ ಲಾಭವನ್ನು 95ರಿಂದ 128 ಕೋಟಿ ರೂ. ಹೆಚ್ಚಿಸಿದ್ದಾರೆ. ಅದಾನಿ ಫೌಂಡೇಶನ್‌ನ ಅಧ್ಯಕ್ಷರೂ ಆಗಿದ್ದಾರೆ.

ಗೌತಮ್ ಅದಾನಿ ಯಾವುದೇ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರು ತಮ್ಮ ಕಠಿಣ ಪರಿಶ್ರಮದಿಂದಲೇ ಮೇಲೆ ಬಂದು ಅದಾನಿ ಗ್ರೂಪ್ (Adani Group) ಸ್ಥಾಪಿಸಿದರು. ಅಹ್ಮದಾಬಾದಿನ ಮಧ್ಯಮ ಕುಟುಂಬಕ್ಕೆ ಸೇರಿದ ಗೌತಮ್, ಶಾಲೆಯಲ್ ಬಳಿಕ, ಕಾಮರ್ಸ್ ಪದವಿಗೆ ಸೇರಿದ್ದರು, ಆದರೆ ಯಾವುದೋ ಕಾರಣದಿಂದಾಗಿ ಪದವಿಯನ್ನು ಪೂರ್ತಿಗೊಳಿಸಲಾಗಿರಲಿಲ್ಲ. ಅವರು ಹೆಚ್ಚು ವಿದ್ಯಾವಂತರಲ್ಲ. ಇದರ ಹೊರತಾಗಿಯೂ, ಅವರು ತಮ್ಮ ಕೋಟಿ ಕೋಟಿ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಗೌತಮ್ ಅದಾನಿ (Gautam Adani) ಕಡಿಮೆ ವಿದ್ಯಾವಂತರಾಗಿರಬಹುದು, ಆದರೆ ಅವರು ಮದುವೆಯಾಗಿದ್ದು ಮಾತ್ರ ವೈದ್ಯೆಯನ್ನು. ಅವರ ಪತ್ನಿ ಹೆಸರು ಪ್ರೀತಿ ಅದಾನಿ. ಪ್ರೀತಿ ಅದಾನಿ ವೃತ್ತಿಪರ ದಂತವೈದ್ಯೆ. ಅವರು ಪ್ರತಿ ಹೆಜ್ಜೆಯಲ್ಲೂ ತನ್ನ ಗಂಡನೊಂದಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ತಮ್ಮ ವೈದ್ಯಕೀಯ ಬದ್ಧತೆಯ ಜೊತೆಗೆ 'ಅದಾನಿ ಫೌಂಡೇಶನ್' ನ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳ ಶಿಕ್ಷಣಕ್ಕಾಗಿ ಸಹ ಕೆಲಸ ಮಾಡುತ್ತದೆ. 

click me!