ಈ ಕೆಲಸ ಮಾಡಿಸಿದ್ರೆ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಚುರುಕಾಗುತ್ತೆ!

First Published Jul 5, 2021, 4:41 PM IST

ವೇಗವಾಗಿ ಬದಲಾಗುತ್ತಿರುವ ಈ ಯುಗದಲ್ಲಿ, ನೀವು ಬಹು-ಪ್ರತಿಭಾನ್ವಿತ (ಮಲ್ಟಿ - ಟಾಲೆಂಟೆಡ್ ) ಆಗಿರುವುದು ಬಹಳ ಮುಖ್ಯ, ಏಕೆಂದರೆ ಮುಂಬರುವ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಎಲ್ಲೆಡೆ ಸ್ಮಾರ್ಟ್ ಕೆಲಸವನ್ನು ತೋರಿಸಬೇಕಾಗುತ್ತದೆ. ಆದುದರಿಂದ ಮಕ್ಕಳ ಸ್ಮರಣಾಶಕ್ತಿ ಬೆಳೆಯುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾದರೆ ಪೋಷಕರು ಏನು ಮಾಡಬೇಕು ನೋಡೋಣ! 

ಬಾಲ್ಯದಿಂದಲೂ ಮೆದುಳಿನ ವ್ಯಾಯಾಮದ ಬಗ್ಗೆ ಗಮನ ನೀಡಿದರೆ, ಬೆಳೆದ ನಂತರ ಹೆಚ್ಚು ತೊಂದರೆ ಉಂಟಾಗುವುದಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವನ್ನು ಸ್ಮಾರ್ಟ್ ಮತ್ತು ತೀಕ್ಷ್ಣ ಬುದ್ಧಿಯವರನ್ನಾಗಿ ಮಾಡಲು ಬಯಸುತ್ತಾರೆ. ಮಗು ಬಹು-ಪ್ರತಿಭಾವಂತ ಮತ್ತು ತೀಕ್ಷ್ಣ ಬುದ್ಧಿಯವರಾಗಬೇಕೆಂದು ಬಯಸಿದರೆ, ಈಗಿನಿಂದಲೇ ಅವರ ಮೆದುಳಿನ ವ್ಯಾಯಾಮದ ಬಗ್ಗೆ ಗಮನ ಹರಿಸಬೇಕು.
undefined
ಮೆದುಳು ತೀಕ್ಷ್ಣವಾಗಿ, ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿಡಲು, ಅನೇಕರು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಬಾದಾಮಿ ಮತ್ತು ವಾಲ್ನಟ್ ಅನ್ನು ಮಕ್ಕಳಿಗೆ ನೀಡುತ್ತಾರೆ, ಆದರೆ ಮೆದುಳನ್ನು ತೀಕ್ಷ್ಣಗೊಳಿಸಲು ಇನ್ನೂ ಅನೇಕ ಆಯ್ಕೆಗಳಿವೆ. ಈ ಸುದ್ದಿಯಲ್ಲಿ ಈ ಆಯ್ಕೆಗಳ ಬಗ್ಗೆ ಹೇಳುತ್ತಿದ್ದೇವೆ.
undefined
ಮೆದುಳಿನ ವ್ಯಾಯಾಮದ ಅಗತ್ಯದೇಹವು ಸದೃಢವಾಗಿರಲು ವ್ಯಾಯಾಮ ಹೇಗೆ ಅಗತ್ಯವಿದೆಯೋ ಹಾಗೆಯೇ ಬುದ್ಧಿಯನ್ನು ತೀಕ್ಷ್ಣವಾಗಿಸಲು ಮೆದುಳಿನ ವ್ಯಾಯಾಮಮಾಡುವುದು ಬಹಳ ಮುಖ್ಯ. ಮೆದುಳಿನ ಆಟಗಳಾದ ಪ್ರಶ್ನೋತ್ತರ, ಒಗಟು, ಪದಬಂಧಗಳಂತಹ ಆಟಗಳನ್ನು ಮಕ್ಕಳೊಂದಿಗೆ ಆಡಿರಿ.
undefined
ಪ್ರಶ್ನೋತ್ತರ ಅಂದರೆ ರಸಪ್ರಶ್ನೆ ಅಥವಾ ಕ್ವಿಜ್ ಆಟವನ್ನು ಆಡಿದರೆ ಮಕ್ಕಳ ಸ್ಮರಣೆಯನ್ನು ಹೆಚ್ಚಿಸುತ್ತದೆ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಜೊತೆಗೆ ಮನಸ್ಸು ಚುರುಕಾಗುತ್ತದೆ.
undefined
ಕ್ರೀಡೆ ಕೂಡ ಮುಖ್ಯಮಕ್ಕಳಿಗೆ ಕ್ರೀಡೆ ಬಹಳ ಮುಖ್ಯ. ಈ ಕಾರಣದಿಂದಾಗಿ, ಅವರು ಚುರುಕು ಬುದ್ಧಿಯಾಗುತ್ತಾರೆ, ದೇಹವು ಸಕ್ರಿಯವಾಗಿದ್ದರೆ, ಮನಸ್ಸು ಸಹ ವೇಗವಾಗಿ ಚಲಿಸುತ್ತದೆ. ಆಡುವ ಮೂಲಕ, ಮಕ್ಕಳ ಮೆದುಳಿಗೆ ಆಮ್ಲಜನಕದ ಹರಿವು ವೇಗವಾಗಿರುತ್ತದೆ, ಈ ಕಾರಣದಿಂದಾಗಿ ಮೆದುಳು ಸದೃಢವಾಗಿರುತ್ತದೆ ಮತ್ತು ಮೆದುಳಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
undefined
ಕಲಾತ್ಮಕತೆಯೂ ಮುಖ್ಯಬಾಲ್ಯದಿಂದಲೂ ಮಕ್ಕಳಿಗೆ ಕಲೆಯ ಬಗ್ಗೆ ಆಸಕ್ತಿಬೆಳೆಸಬೇಕು, ಈ ಕಾರಣದಿಂದಾಗಿ ಅವರ ಮೆದುಳು ವೇಗವಾಗಿ ಮತ್ತು ಉತ್ತಮವಾಗಿ ಬೆಳೆಯುತ್ತದೆ, ಏಕೆಂದರೆ ಕಲೆಮೂಲಕ ಮಕ್ಕಳು ಹೊಸ ವಿಷಯಗಳನ್ನು ನೋಡುತ್ತಾರೆ, ಕಲಿಯುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ವಿಶೇಷವೆಂದರೆ ಕಲೆಯ ಅಭ್ಯಾಸವು ಮಕ್ಕಳನ್ನು ಕಾಲ್ಪನಿಕವಾಗಿಸುತ್ತದೆ ಮತ್ತು ಬಹು ಆಯಾಮದ ಚಿಂತನೆಯನ್ನು ಬೆಳೆಸುತ್ತದೆ.
undefined
ಹೊಸ ಭಾಷೆಯಕಲಿಕೆಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಇತರ ಭಾಷೆಗಳನ್ನು ಕಲಿಯುವಂತೆ ಮಾಡಿದರೆ, ಅವರು ಬಹು-ಪ್ರತಿಭಾವಂತರಾಗುತ್ತಾರೆ. ಅನೇಕ ಭಾಷೆಗಳನ್ನು ತಿಳಿದಿರುವ ಮಕ್ಕಳ ಮೆದುಳು, ಒಂದೇ ಭಾಷೆ ತಿಳಿದಿರುವ ಮಗುವಿಗಿಂತ ವೇಗವಾಗಿರುತ್ತದೆ. ಇದು ಮಗುವಿನಲ್ಲಿ ಹೆಚ್ಚಿನ ಸಾಮರ್ಥ್ಯಗಳನ್ನು ಬೆಳೆಸುತ್ತದೆ. ಇದು ಅವರ ಭವಿಷ್ಯಕ್ಕೂ ಉತ್ತಮವಾಗಿದೆ.
undefined
ಗಣಿತ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯಮಕ್ಕಳಿಗೆ ಬಾಲ್ಯದಿಂದಲೂ ಗಣಿತದ ಉತ್ತಮ ಅಭ್ಯಾಸ ನೀಡಬೇಕು. ಇದು ಮಗುವಿನ ಮೆದುಳನ್ನು ತೀಕ್ಷ್ಣಗೊಳಿಸುವ ವಿಷಯವಾಗಿರುವುದರಿಂದ, ಗಣಿತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಜನರು ಇತರರಿಗಿಂತ ಹೆಚ್ಚು ಬುದ್ಧಿವಂತರು ಎಂದು ಕಂಡುಬಂದಿದೆ.
undefined
click me!