ಗೋಧಿ ಹಿಟ್ಟು
ಇದೊಂದು ಸಿಂಪಲ್ ಟ್ರಿಕ್ಸ್ ಆಗಿದೆ. ಗೋಧಿ ಹಿಟ್ಟನ್ನು (wheat flour)ನೋಡಿ ಇರುವೆಗಳು ಓಡಿಹೋಗುತ್ತವೆ. ಮನೆಯಲ್ಲಿ ಇರುವೆಗಳ ಹಿಂಡು ಇರುವಲ್ಲಿ ಹಿಟ್ಟನ್ನು ಚಿಮುಕಿಸಿ, ಮ್ಯಾಜಿಕ್ ನೋಡಿ! ಈ ಟ್ರಿಕ್ಸ್ ಮೂಲಕ ಸುಲಭವಾಗಿ ಇರುವೆಗಳನ್ನು ಓಡಿಸಬಹುದು. ನೀವು ಬೇಕಿದ್ದರೆ ಟ್ರೈ ಮಾಡಿ ನೋಡಿ.
ದಾಲ್ಚಿನ್ನಿ
ಇರುವೆಗಳು ದಾಲ್ಚಿನ್ನಿಯ ವಾಸನೆಯನ್ನು ಇಷ್ಟಪಡುವುದಿಲ್ಲ. ಇದರಿಂದ ಇರುವೆಗಳು ದೂರ ಓಡುತ್ತದೆ ಇರುವೆಗಳು ಓಡಾಡುತ್ತಿರುವ ಮನೆಯಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿ. ಇದರ ವಾಸನೆಯಿಂದಾಗಿ ಇರುವೆಗಳು ದೂರ ಹೋಗುತ್ತದೆ. ಇರುವೆ ಕಾಟವನ್ನು ದೂರ ಮಾಡಬಹುದು.
ವಿನೇಗರ್ (vinegar)
ವಿನೆಗರ್ ನಿಂದಲೂ ಇರುವೆಯನ್ನು ದೂರ ಮಾಡಬಹುದು. ಇದಕ್ಕಾಗಿ ಸಮ ಪ್ರಮಾಣದಲ್ಲಿ ನೀರು ಮತ್ತು ವಿನೆಗರ್ ಅನ್ನು ಮಿಶ್ರಣ ಮಾಡಿ ಮತ್ತು ಇರುವೆಗಳು ಬರುವ ಅಡುಗೆಮನೆಯ ಮೂಲೆಗಳಲ್ಲಿ ಇರಿಸಿ. ಇದರಿಂದ ಇರುವೆಯ ಕಾಟವನ್ನು ತಪ್ಪಿಸಬಹುದು.
ಪುದೀನಾ
ಹತ್ತಿಯ ಉಂಡೆಯ ಮೇಲೆ ಕೆಲವು ಹನಿ ಪುದೀನಾ ಎಣ್ಣೆಯನ್ನು (mint oil) ಹಾಕಿ ಮತ್ತು ಇರುವೆಗಳು ಯಾವ ಸ್ಥಳದಿಂದ ಬರುತ್ತವೆಯೋ ಆ ಸ್ಥಳದಲ್ಲಿ ಇರಿಸಿ. ಪುದೀನಾದ ಗಾಢವಾದ ವಾಸನೆಯಿಂದ ಇರುವೆಗಳು ದೂರ ಓಡುತ್ತವೆ. ಮತ್ತೆ ಇರುವೆಗಳು ಆ ಜಾಗದಲ್ಲಿ ಬರೋದಿಲ್ಲ.
ಹುಳಿ ಹಣ್ಣಿನ ಸಿಪ್ಪೆಗಳು
ಕಿತ್ತಳೆ, ನಿಂಬೆಗಳಂತಹ ಸಿಟ್ರಸ್ ಹಣ್ಣುಗಳ ಸಿಪ್ಪೆಗಳನ್ನು ಇರುವೆಗಳು ಗೋಚರಿಸುವ ಸ್ಥಳದಲ್ಲಿ ಇರಿಸಿ. ನಿಂಬೆ, ಕಿತ್ತಳೆ ಹಣ್ಣಿನ ಸಿಪ್ಪೆಯ ಗಾಢ ಪರಿಮಳ ಇರುವೆಗಳಿಗೆ ಇಷ್ಟವಾಗೋದಿಲ್ಲ,ಇದರಿಂದ ಇರುವೆಗಳು ದೂರವಾಗುತ್ತದೆ. ಇದನ್ನು ಇಂದೇ ಟ್ರೈ ಮಾಡಿ ನೋಡಿ.
ಮೆಣಸಿನ ಕಾಯಿ
ಇರುವೆಗಳ ಸಂಖ್ಯೆ ಹೆಚ್ಚು ಗೋಚರಿಸುವ ಸ್ಥಳಗಳಲ್ಲಿ ಕೆಂಪು ಮೆಣಸಿನ ಪುಡಿಯನ್ನು ಹಾಕಿ. ಮೆಣಸಿನ ಘಾಟು ವಾಸನೆಗೆ ಇರುವೆಗಳು ದೂರವಾಗುತ್ತವೆ. ನೀವು ಮೆಣಸನ್ನು ಸುಟ್ಟು ಸಹ ಇಡಬಹುದು. ಇದರಿಂದ ಸಹ ಇರುವೆಗಳು ದೂರವಾಗುತ್ತದೆ.
ಲವಂಗ
ಲವಂಗವನ್ನು (clove)ಮನೆಯ ಮೂಲೆಗಳು, ಕಿಟಕಿಗಳು ಮತ್ತು ಬಾಗಿಲುಗಳ ಬಳಿ ಇರಿಸಿ, ಇರುವೆಗಳು ಬರುವುದಿಲ್ಲ. ಇದಲ್ಲದೆ ಲವಂಗವನ್ನು ನೀರಿಗೆ ಹಾಕಿ ಕುದಿಸಿ. ಆ ನೀರನ್ನು ಒಂದು ಬಾಟಲ್ ನಲ್ಲಿ ಹಾಕಿ ಸ್ಪ್ರೇ ಮಾಡಿ, ಇರುವೆಗಳು ಬರುವ ಜಾಗಕ್ಕೆ ಇದನ್ನು ಸ್ಪ್ರೇ ಮಾಡಿ, ಇದರಿಂದ ಇರುವೆಗಳು ದೂರವಾಗುತ್ತವೆ.
ಉಪ್ಪು
ನೀರಿಗೆ ಉಪ್ಪನ್ನು (salt water)ಸೇರಿಸಿ ಮತ್ತು ಇರುವೆಗಳ ಓಡಾಡುವ ಸ್ಥಳಗಳಲ್ಲಿ ಸಿಂಪಡಿಸುವ ಮೂಲಕ, ಇರುವೆಗಳು ಓಡಿಹೋಗುತ್ತವೆ. ಇದನ್ನು ನೀವು ಯಾವಾಗ ಬೇಕಾದರೂ ಟ್ರೈ ಮಾಡಬಹುದು. ಇದರಿಂದ ನೀವು ಕ್ಷಣದಲ್ಲಿ ಇರುವೆಗಳನ್ನು ದೂರ ಮಾಡಬಹುದು.