ಆಮ್ಲೆಟ್ ಸೈಡಿಗಿಡಿ, ಮೊಟ್ಟೆಯೂ ಸೌಂದರ್ಯ ವರ್ಧಕ ಎಂಬುವುದು ನೆನಪಿಡಿ

First Published Dec 4, 2020, 4:34 PM IST

ಮೊಟ್ಟೆಯು ಅತ್ಯುತ್ತಮ ಪೋಷಕಾಂಶವುಳ್ಳ ಆಹಾರ ಮಾತ್ರವಲ್ಲ ನಿಮ್ಮ ಮುಖದಲ್ಲಿ ಯೌವನ ಉಳಿಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತ್ವಚೆಯ ಹೊಳಪನ್ನು ಹೆಚ್ಚಿಸಲು ಕೂಡ ಇದು ನೆರವಾಗುತ್ತದೆ. ಇನ್ನು ಮುಂದೆ ಮೊಟ್ಟೆ ತಂದಾಗ ಅದನ್ನು ತಿನ್ನುವುದರ ಜೊತೆಗೆ ಒಂದಿಷ್ಟು, ತಲೆಗೆ, ಮೈಗೆ ಹಚ್ಚಿದರೆ ಸೌಂದರ್ಯ ಹೆಚ್ಚೋದು ಖಂಡಿತಾ. ಹಾಗಾದ್ರೆ ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣಾ.. 

ಮೊಟ್ಟೆಯಲ್ಲಿ ಹಲವಾರು ಪೋಷಕಾಂಶಗಳು ಅಡಗಿದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಡಯಟ್​ನಲ್ಲಿ ಮೊಟ್ಟೆಯನ್ನು ಸೇರಿಸುವುದು ಉತ್ತಮ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಇದರಿಂದ ಆರೋಗ್ಯದ ಜೊತೆಗೆ ಸೌಂದರ್ಯ ಕೂಡ ಹೆಚ್ಚುತ್ತದೆ.
undefined
ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗದಲ್ಲಿ ಹತ್ತಿಯ ಉಂಡೆಯನ್ನು ಅದ್ದಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮುಖದಲ್ಲಿ ರಕ್ತದ ಪರಿಚಲನೆ ಸುಧಾರಿಸಲು ನೆರವು ನೀಡಿ ಮುಖ ತಾಜಾತನದಿಂದ ಹೊಳೆಯುವಂತೆ ಮಾಡುತ್ತದೆ.
undefined
ಮೊಟ್ಟೆಯ ಬಿಳಿ ಭಾಗವನ್ನು ಮುಲ್ತಾನಿ ಮಿಟ್ಟಿ ಜೊತೆ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತೊಳೆದುಕೊಂಡರೆ ಮುಖದಲ್ಲಿರುವ ಜಿಡ್ಡು ನಿವಾರಣೆಯಾಗುತ್ತದೆ.
undefined
ಮೊಟ್ಟೆಯ ಬಿಳಿ ಭಾಗವನ್ನು ಕ್ಯಾರೆಟ್ ಸಿಪ್ಪೆ, ಹಾಲಿನ ಜೊತೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಬಳಿಕ ಉಗುರು ಬಿಸಿ ನೀರಿನಲ್ಲಿ ತೊಳೆದುಕೊಂಡರೆ, ಇದು ತ್ವಚೆಯ ವಯಸ್ಸಾಗುವಿಕೆಯ ಲಕ್ಷಣವನ್ನು ತಡೆಯಲು ನೆರವಾಗುತ್ತದೆ.
undefined
ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಅದಕ್ಕೆ ಮೊಟ್ಟೆಯ ಬಿಳಿಯ ಭಾಗ ಸೇರಿಸಿ, ಸ್ವಲ್ಪ ಆಲಿವ್ ಎಣ್ಣೆ ಮಿಕ್ಸ್ ಮಾಡಿ ಹೇರ ಪ್ಯಾಕ್ ಮಾಡಿಕೊಳ್ಳಿ. ಈ ಹೇರ್ ಪ್ಯಾಕ್ ನಿಮ್ಮ ಕೇಶರಾಶಿಯನ್ನು ಬಲಯುತಗೊಳಿಸುತ್ತದೆ. ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
undefined
ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಮುಖವನ್ನು ಪೇಪರ್ ನಿಂದ ಮುಚ್ಚಿಕೊಳ್ಳಿ. ಇನ್ನೊಂದು ಸಲ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕಲೆ ನಿವಾರಣೆಯಾಗುತ್ತದೆ.
undefined
ಮೊಟ್ಟೆಯ ಬಿಳಿ ಭಾಗವನ್ನು ಅರ್ಧ ಚಮಚ ಲಿಂಬೆ ರಸದ ಜೊತೆಗ ಮಿಶ್ರಣ ಮಾಡಿ. ಇದಕ್ಕೆ ಕೆಲವು ಹನಿ ಬಾದಾಮಿ ಎಣ್ಣೆ ಮತ್ತು ಐದರಿಂದ ಆರು ಹನಿ ಜೇನು ಮಿಶ್ರಣ ಮಾಡಿ, ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಇದು ಚರ್ಮದ ಸೂಕ್ಷ್ಮ ರಂಧ್ರಗಳು ತೆರೆಯುವಂತೆ ಮಾಡುವುದರ ಜೊತೆಗೆ ಮುಖ ಹೊಳೆಯುವಂತೆ ಕೂಡ ಮಾಡುತ್ತದೆ. ಮುಖದಲ್ಲಿನ ಕಲೆ ಮತ್ತು ಕಣ್ಣಿನ ನೆರಿಗೆ ಕೂಡ ಹೋಗಲಾಡಿಸುತ್ತದೆ.
undefined
ಮೊಟ್ಟೆಯ ಹಳದಿ ಭಾಗಕ್ಕೆ ಎರಡು ಚಮಚ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷ ಬಿಟ್ಟು ಉಗುರು ಬಿಸಿ ನೀರಿನಲ್ಲಿ ತೊಳೆದುಕೊಂಡರೆ ಉತ್ತಮ ಫಲಿತಾಂಶ ನೀವೇ ಕಾಣುವಿರಿ.
undefined
ಈ ವಿಧಾನಗಳನ್ನು ವಾರದಲ್ಲಿ ಒಂದು ಬಾರಿ ಬಳಕೆ ಮಾಡುತ್ತಾ ಬಂದರೆ ಮುಖದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಸೌಂದರ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ.
undefined
click me!