ಅತಿಯಾದ ಹೇರ್ ಫಾಲ್‌ನಿಂದ ಕಿರಿಕಿರಿ: ಚಿಂತೆ ಬಿಟ್ಟು ಹೀಗ್ಮಾಡಿ

First Published Dec 2, 2020, 2:58 PM IST

ನೀವು ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದೀರಾ ಮತ್ತು ಕೂದಲು ಉದುರಿ ನೆತ್ತಿ ಕಾಣಿಸುತ್ತಿದೆಯೇ?  ವಿಪರೀತ ಕೂದಲು ಉದುರುವ ಸಮಸ್ಯೆಗೆ ಸರಿಯಾಗಿ ಕೂದಲಿನ ಕಾಳಜಿ ವಹಿಸದೆ ಇರುವುದೇ ಕಾರಣವಾಗಿದೆ. ನೀವು ಇನ್ನೂ ಅದರ ಚಿಕಿತ್ಸೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ಸರಳವಾದ ಬದಲಾವಣೆಗಳು, ಕೂದಲ ರಕ್ಷಣೆಯ ದಿನಚರಿ ಮತ್ತು ಜೀವನಶೈಲಿಯ ಆಯ್ಕೆಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.
 

ಕೂದಲು ಉದುರಲು ಕಾರಣವೇನು ?:ಕೂದಲು ಉದುರುವಿಕೆಗೆ ಕಾರಣಗಳು ಹಲವಾರು. ಇವುಗಳು ನಿಮ್ಮ ದೈನಂದಿನ ಅಭ್ಯಾಸಗಳು, ನೀವು ಅನುಸರಿಸುವ ಆಹಾರ ಪದ್ಧತಿ ಮತ್ತು ನೀವು ವಾಸಿಸುತ್ತಿರುವ ಹವಾಮಾನ ಪರಿಸ್ಥಿತಿಗಳನ್ನು ಸಹ ಅವಲಂಭಿಸಿದೆ. ಇತರ ಕೆಲವು ಕಾರಣಗಳಲ್ಲಿ ಒತ್ತಡ, ನಿಮ್ಮ ಕೂದಲ ರಕ್ಷಣೆಯ ದಿನಚರಿ, ನಿಮ್ಮ ಕೂದಲಿನ ಮೇಲೆ ನೀವು ಬಳಸುತ್ತಿರುವ ಉತ್ಪನ್ನಗಳು, ಹಾರ್ಮೋನ್ ಮಟ್ಟಗಳು ಮತ್ತು ನಿಮ್ಮ ಆಂತರಿಕ ಆರೋಗ್ಯ ಕೂಡ ಸೇರಿದೆ.
undefined
ಹೊಸ ಕೂದಲು ಬೆಳೆಯುವುದು ಹೇಗೆ?:ನೀವು ಕಳೆದುಕೊಂಡ ಕೂದಲನ್ನು ಮತ್ತೆ ಬೆಳೆಸಲು ನೀವು ಪ್ರಯತ್ನಿಸುತ್ತಿದ್ದರೆ ಅಥವಾ ನಿಮ್ಮಲ್ಲಿರುವ ಕೂದಲಿನ ಗುಣಮಟ್ಟ ಮತ್ತು ಪೂರ್ಣತೆಯನ್ನು ಸುಧಾರಿಸಲು ಬಯಸಿದರೆ, ಈ ಸುಲಭವಾದ ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ. ಇವು ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ.
undefined
ರೋಸ್ಮರಿ ಎಣ್ಣೆ: ರೋಸ್ಮರಿ ಎಣ್ಣೆಯು ಅಂಟಿ ಇನ್ಫ್ಲಾಮೇಟರಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಇದು ನೈಸರ್ಗಿಕ ಆಯ್ಕೆಯಾಗಿದೆ. ನೀವು ಮಾಡಬೇಕಾಗಿರುವುದು ನಿಮ್ಮ ಅಂಗೈಯಲ್ಲಿ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಪ್ರತಿ ರಾತ್ರಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಜೊತೆಗೆ ರೋಸ್ಮರಿ ಎಣ್ಣೆಯನ್ನು ಹೊಂದಿರುವ ನೈಸರ್ಗಿಕ ಶಾಂಪೂ ಬಳಸಿ.
undefined
ತೆಂಗಿನ ಎಣ್ಣೆ: ಮನೆಯಲ್ಲಿ ಕೂದಲಿನ ಬೆಳವಣಿಗೆಯನ್ನು ಸುಲಭವಾಗಿ ಉತ್ತೇಜಿಸುವ ಅತ್ಯುತ್ತಮ ಎಣ್ಣೆಯೆಂದರೆ, ತಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದು. ನೀವು ಹೊಸದಾಗಿ ಹಿಂಡಿದ ಈರುಳ್ಳಿ ರಸದ ಕೆಲವು ಹನಿಗಳನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಬಹುದು. ಇವೆರಡರ ಮಿಶ್ರಣವು ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
undefined
ಲೋಳೆಸರ: ಮನೆಯಲ್ಲಿ ಸುಲಭವಾಗಿ ಬೆಳೆಯುವ ಸಸ್ಯವು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲೋವೆರಾ ಹಚ್ಚುವುದರಿಂದ ತಲೆಹೊಟ್ಟು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ನೆತ್ತಿಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಆಯ್ಕೆಯ ಎಣ್ಣೆಯಲ್ಲಿ ನೀವು ಸ್ವಲ್ಪ ಅಲೋವೆರಾ ರಸವನ್ನು ಬೆರೆಸಬಹುದು.
undefined
ಈರುಳ್ಳಿ ರಸ: ಈರುಳ್ಳಿ ರಸದ ಕೆಲವು ಹನಿಗಳು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಿಮಗೆ ಬೇಕಾಗಿರುವುದು ಒಂದು ಚಮಚ ಹಸಿ ಈರುಳ್ಳಿ ರಸ. ಈಗ ನಿಮ್ಮ ಬೆರಳ ತುದಿಯನ್ನು ಬಳಸಿ ನಿಮ್ಮ ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಹರಡಿ ಮಸಾಜ್ ಮಾಡಿ. ಸ್ವಲ್ಪ ಸಮಯದವರೆಗೆ ಇರಿಸಿ ನಂತರ ಅದನ್ನು ಬೆಚ್ಚಗಿನ ನೀರಿನಿಂದ ಸಲ್ಫೇಟ್ ಮುಕ್ತವಾದ ಶಾಂಪೂ ಬಳಸಿ ತೊಳೆಯಿರಿ.
undefined
ಮೊಟ್ಟೆಯ ಹಳದಿ: ಮೊಟ್ಟೆಯ ಹಳದಿ ಲೋಳೆ ನಿಮ್ಮ ಕೂದಲಿಗೆ ಅದ್ಭುತಗಳನ್ನು ಮಾಡುತ್ತದೆ. ಅದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಡೆದ ಮೊಟ್ಟೆಯನ್ನು ನಿಮ್ಮ ನೆತ್ತಿಯ ಮೇಲೆ ನೇರವಾಗಿ ಹಚ್ಚಬಹುದು. ಇಪ್ಪತ್ತು ನಿಮಿಷಗಳ ಬಳಿಕ ಅದನ್ನು ತಣ್ಣೀರಿನಿಂದ ತೊಳೆಯಿರಿ. ನಿಮ್ಮ ಕೂದಲನ್ನು ಶಾಂಪೂ ಮಾಡಲು ಮರೆಯಬೇಡಿ ಏಕೆಂದರೆ ಇದು ತೀವ್ರವಾದ ವಾಸನೆಯನ್ನು ಹೊಂದಿರುತ್ತದೆ. ಸಸ್ಯಾಹಾರಿಗಳಾದವರು ಮೊಸರು ಬಳಸಬಹುದು.
undefined
ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಿ. ಒತ್ತಡವು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಬಹುದು. ನಿಮ್ಮ ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಪ್ಯಾರಾಗಾನ್ ಮತ್ತು ಸಲ್ಫೇಟ್ ನಂತಹ ರಾಸಾಯನಿಕ ಇರುವುದನ್ನು ತಪ್ಪಿಸಿ. ನಿಮ್ಮ ಕೂದಲಿನ ಮೇಲೆ ಹೆಚ್ಚು ಬಿಸಿಯಾದ ಅಥವಾ ತಣ್ಣನೆಯ ನೀರನ್ನು ಬಳಸಬೇಡಿ. ಉತ್ತಮ ಗುಣಮಟ್ಟದ ಸಲ್ಫೇಟ್ ಮುಕ್ತ ಶಾಂಪೂ ಬಳಸಿ
undefined
ಇದಲ್ಲದೆ, ನೀವು ಉತ್ತಮ ಆಹಾರ ಸೇವಿಸಿ. ನಿಮ್ಮ ಆಹಾರದಲ್ಲಿ ಸೊಪ್ಪು, ವಾಲ್ನಟ್ , ಆವಕಾಡೊ, ಕ್ಯಾರೆಟ್ ಮುಂತಾದ ಆಹಾರಗಳನ್ನು ಸೇರಿಸಿ. ಜೀವಸತ್ವಗಳು, ಸತು, ಪ್ರೋಟೀನ್, ಕಬ್ಬಿಣ ಇತ್ಯಾದಿ ಪೋಷಕಾಂಶಗಳ ಕೊರತೆಯು ಕೂದಲನ್ನು ದುರ್ಬಲಗೊಳಿಸುತ್ತದೆ.
undefined
click me!