ಮಹಿಳೆಯರು ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಮುಖದ ಮೇಲೆ ಸಣ್ಣ ಕಲೆಯಾದ್ರೂ ಯುವತಿಯರು ಚಿಂತೆಗೊಳಗಾಗುತ್ತಾರೆ. ಯಾವುದೇ ಉತ್ಪನ್ನಗಳನ್ನು ಬಳಸದೇ ಸುಂದರವಾಗಿ ಕಾಣಿಸಿಕೊಳ್ಳಬೇಕಾದ್ರೆ ಚರ್ಮದ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವು
ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡೋದರಿಂದ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಕಾಲಜನ್ ಅಂಶವಿರುವ ಆಹಾರವನ್ನು ಸೇವಿಸುವ ಮೂಲಕ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಕಾಲಜನ್ ಅತ್ಯುತ್ತಮ ಪ್ರೋಟೀನ್ ಹೊಂದಿರುತ್ತದೆ. ಹಾಗಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ವಯಸ್ಸಾದರೂ ಅದರ ಛಾಯೆಗಳು ಮುಖದಲ್ಲಿ ಕಾಣದಂತೆ ಮಾಡುತ್ತದೆ.
ಕಾಲಜನ್ ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಆದರೆ, ಕೆಲವೊಮ್ಮೆ ಕೆಲವು ಕಾರಣಗಳಿಂದ ಅದು ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಅಂತಹ ಸ್ಥಿತಿಯಲ್ಲಿ, ಚರ್ಮವು ಮಂದ ಮತ್ತು ವಯಸ್ಸಾದಂತೆ ಕಾಣುತ್ತದೆ. ಆದ್ದರಿಂದ ಕಾಲಜನ್ ಭರಿತ ಆಹಾರಗಳನ್ನು ಸೇವಿಸಬೇಕು.
ಕಾಲಜನ್ ಅಂಶ ಇರೋ ಆಹಾರ ಸೇವನೆ ನಿಮ್ಮ ಚರ್ಮವನ್ನು ಹೊಳೆಯುವಂತೆ ನೋಡಿಕೊಳ್ಳುತ್ತದೆ. ಬೀನ್ಸ್, ಧಾನ್ಯಗಳು ಮತ್ತು ಸೋಯಾ ಅನೇಕ ಅಮೈನೋ ಆಮ್ಲಗಳನ್ನು ಹೊಂದಿದ್ದು ಅದು ದೇಹಕ್ಕೆ ಸಮಪರ್ಕವಾದ ಕಾಲಜನ್ ಒದಗಿಸುತ್ತದೆ. ವಿಟಮಿನ್-ಸಿ ಸಮೃದ್ಧವಾಗಿರುವ ಆಹಾರಗಳು ಕಾಲಜನ್ ರಚನೆಗೆ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಚರ್ಮದ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸಲು ಬಹಳ ಮುಖ್ಯ. ಚರ್ಮದ ಜೀವಕೋಶಗಳು ಹಾನಿಗೊಳಗಾದ್ರೆ ಬಾಹ್ಯವಾಗಿ ಆಂಟಿಆಕ್ಸಿಡೆಂಟ್ ಮತ್ತು ಕಾಲಜನ್ ಅಂಶವಿರೋ ಆಹಾರ ಸೇವಿಸಬೇಕಾಗುತ್ತದೆ.
ಮಧ್ಯ ವಯಸ್ಸಿನಲ್ಲಿಯೇ ಮುಖದ ಮೇಲೆ ಕಪ್ಪು ಕಲೆಗಳು, ಸುಕ್ಕು ಉಂಟಾಗುತ್ತಿದ್ದರೆ ಚರ್ಮದ ಜೀವಕೋಶಕ್ಕೆ ಹಾನಿಯಾಗ್ತಿದೆ ಎಂದರ್ಥ. ಅದಕ್ಕಾಗಿ ಟೊಮೆಟೋ, ಬೀಟ್ರೂಟ್, ಕ್ಯಾರೆಟ್, ಬೆರ್ರಿ, ಕಿವಿ ಹಾಗೂ ಸಿ ವಿಟಮಿನ್ ಅಂಶ ಇರೋ ಆಹಾರ ಸೇವಿಸಬೇಕು. ಈ ಆಹಾರ ಚರ್ಮದ ಜೀವಕೋಶದ ಹಾನಿಯನ್ನು ತಡೆಯುತ್ತದೆ
ಮಾರುಕಟ್ಟೆಯಲ್ಲಿ ಹಲವು ಸೌಂದರ್ಯ ವರ್ಧಕಗಳು ಸಿಗುತ್ತವೆ. ಯಾವುದೇ ಉತ್ಪನ್ನ ಬಳಕೆ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಬೇಕು.