ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರೋಗಗಳು ನಿಮಗೆ ತಿಳಿದಿದೆಯೇ?

First Published | Aug 17, 2024, 8:38 PM IST

ಮಹಿಳೆಯರು ತಮ್ಮ ಆರೋಗ್ಯಕ್ಕಿಂತ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದರಿಂದಾಗಿ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ವಾಸ್ತವವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಕಾಯಿಲೆಗಳೇನೆಂದು ನಿಮಗೆ ತಿಳಿದಿದೆಯೇ? 

ಮಹಿಳೆಯರ ದೈನಂದಿನ ಜೀವನ ಹೇಗಿರುತ್ತದೆ ಎಂದು ವಿಶೇಷವಾಗಿ ಏನು ಹೇಳಬೇಕಿಲ್ಲ. ಮನೆಯ ಒಳಗೂ ಮತ್ತು ಹೊರಗೂ ಮಹಿಳೆ ದುಡಿಯುತ್ತಾಳೆ. ಹೊರಗೆ ದುಡಿದು ಮನೆಯ ಜವಾಬ್ದಾರಿಗಳನ್ನು ಮಹಿಳೆ ನಿರ್ವಹಿಸುತ್ತಾರೆ. ಇಡೀ ಕುಟುಂಬದ ಜವಾಬ್ದಾರಿ ಮಹಿಳೆಯ ಹೆಗಲ್ಮೇಲೆಯೇ ಇರುತ್ತದೆ.

ಕುಟುಂಬಸ್ಥರ ಬಗ್ಗೆ ಕಾಳಜಿವಹಿಸುವ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡುವುದಿಲ್ಲ. ಅನೇಕ ಮಹಿಳೆಯರು ತಮಗಾಗಿಯೂ ಸ್ವಲ್ಪ ಸಮಯವನ್ನು ಮೀಸಲಿಡಬೇಕೆಂದು ಯೋಚಿಸುವುದಿಲ್ಲ. ಸದಾ ಕುಟುಂಬದ ಬಗ್ಗೆಯೇ ಯೋಚಿಸುತ್ತಾರೆ. ಇದೇ ಅವರನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತದೆ.

Tap to resize

ವಾಸ್ತವವಾಗಿ ಮಹಿಳೆಯರು ಯಾವ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾಗುತ್ತಾರೆಂದು ಬಹುತೇಕರಿಗೆ ತಿಳಿದಿರಲ್ಲ. ವಿಶೇಷವಾಗಿ ಪುರುಷರು ಮಹಿಳೆಯರ ಎದುರಿಸುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು.  

ರಕ್ತಹೀನತೆ

ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆಗೆ ಹೆಚ್ಚಾಗಿ ಕಂಡು ಬರುತ್ತದೆ. ಇದು ಭಾರತದಲ್ಲಿ ಸಾಮಾನ್ಯ ಸಮಸ್ಯೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಮುಟ್ಟಿನ ಮತ್ತು ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ಹೆಚ್ಚು ರಕ್ತಸ್ರಾವ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಸುಮಾರು 75% ಮಹಿಳೆಯರು ಕಬ್ಬಿಣದ ಕೊರತೆ, ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ.

ಸ್ತನ ಕ್ಯಾನ್ಸರ್

ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಮ್ಮ ದೇಶ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಭಾರತೀಯ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. 
 

ಮಾನಸಿಕ ಆರೋಗ್ಯ

ಪುರುಷರಿಗಿಂತ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಹೆಚ್ಚು ಹದಗೆಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವುದು, ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ಒತ್ತಡ ಮುಂತಾದ ಹಲವು ಕಾರಣಗಳಿಂದ ಅವರ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ತಜ್ಞರು ಹೇಳುತ್ತಾರೆ. 

ಆಸ್ಟಿಯೊಪೊರೋಸಿಸ್

ಮೂಳೆಗಳು ಗಟ್ಟಿಯಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಆದರೆ ಕ್ಯಾಲ್ಸಿಯಂ ಕೊರತೆ, ಇತರ ಪೋಷಕಾಂಶಗಳ ಕೊರತೆಯಿಂದ ಆಸ್ಟಿಯೊಪೊರೋಸಿಸ್ ಉಂಟಾಗುತ್ತದೆ. ಮೂಳೆಗಳು ದುರ್ಬಲವಾಗುತ್ತವೆ. ಆದರೆ ಈ ಆಸ್ಟಿಯೊಪೊರೋಸಿಸ್ ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕ್ಯಾಲ್ಸಿಯಂ ಕೊರತೆ, ಸರಿಯಾದ ಪೌಷ್ಟಿಕ ಆಹಾರ ಸೇವಿಸದಿರುವುದು, ಜೀವನಶೈಲಿಯ ಬದಲಾವಣೆಗಳಿಂದ ಆಸ್ಟಿಯೊಪೊರೋಸಿಸ್ ಉಂಟಾಗುತ್ತದೆ.

Latest Videos

click me!