ಅಮ್ಮ ಹೇಳಿದ ಮಕ್ಕಳ ಆಹಾರ ತಯಾರಿಸಿ ಕೋಟ್ಯಾಧಿಪತಿಯಾದ ಮಧುರೈ ವೈದ್ಯೆ

First Published | Apr 1, 2023, 4:09 PM IST

ಸಾಧಿಸಬೇಕೆಂಬ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಹಲವಾರು ಉದಾಹರಣೆಗಳಿವೆ. ಅದರಲ್ಲಿ ಈ ವೈದ್ಯೆಯ ಕಥೆ ಕೂಡ ಒಂದು. ತಮ್ಮ ತಾಯಿ ಹೇಳಿದ ಮಕ್ಕಳ ಆಹಾರದ ರೆಸಿಪಿಯನ್ನು ತಯಾರಿಸಿ ಬ್ಯುಸಿನೆಸ್ ಮಾಡಿದ ಈ ವೈದ್ಯೆ ಇದೀಗ ವರ್ಷಕ್ಕೆ ಮೂರು ಕೋಟಿ ಸಂಪಾದನೆ ಮಾಡುತ್ತಾರೆ. ಇವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. 

ತಮ್ಮ ತಾಯಿ ಹೇಳಿದ ಮಕ್ಕಳ ಆಹಾರದ ರೆಸಿಪಿ ತಯಾರಿಸಿ, ವರ್ಷಕ್ಕೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಪಾದಿಸಿದ್ದಾರೆ ವೈದ್ಯೆ. ಅವರು ಬೇರೆ ಯಾರೂ ಅಲ್ಲ ವೈದ್ಯೆ ಹೇಮಪ್ರಿಯಾ ನಟೇಸನ್. 2014ರಲ್ಲಿ ಮಗು ಹುಟ್ಟಿದ ಬಳಿಕ ವೈದ್ಯೆಯಾದ ಮಧುರೈನ ಹೇಮಪ್ರಿಯಾ ನಟೇಸನ್ (Dr Hemapriya Natesan) ಮಕ್ಕಳ ಆರೋಗ್ಯ, ಮತ್ತು ಆಹಾರ ಕುರಿತಾದ ಮಾಹಿತಿ ನೀಡಲು My Little Moppet’ ಎಂಬ ಬ್ಲಾಗ್ ಆರಂಭಿಸಿದರು. 

ಈ ಬ್ಲಾಗ್ ಮೂಲಕ ವೈದ್ಯೆ ತಮ್ಮ ತಾಯಿ ಮತ್ತು ಅತ್ತೆಯವರು ತಿಳಿಸಿದಂತಹ ಮಕ್ಕಳ ಆರೋಗ್ಯಕ್ಕೆ ಬೇಕಾದಂತಹ ಸಾಂಪ್ರದಾಯಿಕ ಮಲ್ಟಿಗ್ರೇನ್ ಪೌಡರ್ ಬಗ್ಗೆ ಮಾಹಿತಿ ನೀಡಿದರು. ಆದರೆ ಅದು ಅವರು ಅಂದುಕೊಂಡಿರದಷ್ಟು ಹಿಟ್ ಆಯಿತು. ಇದರಿಂದಾಗಿಯೇ ಮುಂದೆ ಆಕೆ ಮಕ್ಕಳಿಗಾಗಿ ನ್ಯೂಟ್ರಿಯೆಂಟ್ ಆಹಾರವನ್ನು (nutrient food) ತಯಾರಿಸುವಂತಹ ಬ್ಯುಸಿನೆಸ್ ಆರಂಭಿಸಲು ದಾರಿ ದೀಪವಾಯಿತು. ಅದಕ್ಕೆ ಅವರು ತಮ್ಮ ಬ್ಲಾಗ್ ಹೆಸರನ್ನೇ ಇಟ್ಟರು. 

Tap to resize

ಕಳೆದ ಏಳು ವರ್ಷಗಳಿಂದ ಹೆಮಪ್ರಿಯಾ ತಮ್ಮ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸುಮಾರು ಒಂದು ಲಕ್ಷಕ್ಕೂ ಅಧಿಕ ತಾಯಂದಿರಿಗೆ ಮಾರಿದ್ದಾರೆ  ಸುಮ್ಮನೆ ಒಂದು ಬ್ಲಾಗ್ ಆರಂಭಿಸಿದ ಬಾಣಂತಿ ತಾಯಿ, ಇದೀಗ ವರ್ಷಕ್ಕೆ ಮೂರು ಕೋಟಿ ಸಂಪಾದಿಸುವಂತಹ ಮಲ್ಟಿ ಕ್ರೊರ್ ಕಂಪನಿ (multi crore business woman) ನಡೆಸುತ್ತಿದ್ದಾರೆ. 

ಇವರು ತಯಾರಿಸುತ್ತಿರುವ ಮಲ್ಟಿಗ್ರೇನ್ ಪೌಡರ್ ನ  (muktigrain powder)ವಿಶೇಷತೆ ಎಂದರೆ ಇದನ್ನು 19 ಆರೋಗ್ಯಯುತ ಸಾಮಾಗ್ರಿಗಳನ್ನು ಬಳಸಿ ತಯಾರಿಸಲಾಗುತ್ತಿದೆ. ಅಲ್ಲದೇ ಇದನ್ನು ಪುಟಾಣಿ ಶಿಶುಗಳಿಗೆ ಮಣ್ಣಿಯಂತೆ ಹಾಗೂ ದೊಡ್ಡ ಮಕ್ಕಳಿಗೆ ಪಾನೀಯವನ್ನು ಮಾಡಿ ಕುಡಿಸಬಹುದು. 

ಇಂದು ಈ ಕಂಪನಿ ಮೊಳಕೆ ರಾಗಿ ಪುಡಿ, ಒಣಗಿದ ಖರ್ಚೂರ ಪುಡಿ, ಕುಕೀಸ್, ಕ್ರಾಕರ್ಸ್, ಎನರ್ಜಿ ಬಾರ್, ಮಕ್ಕಳಿಗೆ ಮಣ್ಣಿ ಅಥವಾ ಗಂಜಿ ಮಾಡಲು ಪುಡಿ, ಸಿರಿಯಲ್ಸ್, ಮಿಲೆಟ್ ನೂಡಲ್ಸ್, ಪ್ಯಾನ್ ಕೇಕ್ ತಯಾರಿಸುತ್ತದೆ. ಅಲ್ಲದೇ ದಿನಕ್ಕೆ ಸುಮಾರು 200 ಕ್ಕೂ ಅಧಿಕ ಆರ್ಡರ್ ಗಳು ಇವರಿಗೆ ಸಿಗುತ್ತಿದೆ. ಈ ಪ್ರಾಡಕ್ಟ್ ಗಳ ದರ ವಿಭಿನ್ನವಾಗಿದ್ದು, ಮೊಳಕೆ ರಾಗಿ ಪುಡಿ 100ಗ್ರಾಂ ಟ್ರಯಲ್ ಪ್ಯಾಕ್ ದರ 149 ರೂ. ಅಗಿದೆ, ಇನ್ನು ಮಲ್ಟಿಗ್ರೇನ್ ಪೌಡರ್ ದರ 302 ಆಗಿದೆ. 

ಹೇಮ ಪ್ರಿಯಾ ಇಂದಿಗೂ ಬ್ಲಾಗ್ ಬರೆಯುತ್ತಲೇ ಇದ್ದಾರೆ. ಇವರ ಬ್ಲಾಗಿನಲ್ಲಿ ನೀವು ರೆಸಿಪೀಸ್, ವಿಡಿಯೋ, ಮೀಲ್ ಪ್ಲ್ಯಾನ್ (meal plan), ಟಾಯ್ಸ್, ಮಕ್ಕಳ ಚಟುವಟಿಕೆಗಳು, ಮಕ್ಕಳ ಬೆಳವಣಿಗೆ ಹೀಗೆ ಹಲವಾರು ಮಾಹಿತಿಗಳನ್ನು ನೀಡುತ್ತಲೇ ಇದ್ದಾರೆ. ಜೊತೆಗೆ ಮಕ್ಕಳ ಬೆಳವಣಿಗೆ ಬಗ್ಗೆ ಪೋಷಕರ ಪ್ರಶ್ನೆಗೆ ಉತ್ತರವನ್ನು ಸಹ ನೀಡುತ್ತಾರೆ. 
 

ಇಷ್ಟೇ ಅಲ್ಲ ಇದರ ಜೊತೆ ಹೇಮಪ್ರಿಯಾ ತಮ್ಮ ಪತಿ ಡಾ. ಗೋಪಿ ನಲ್ಲಯನ್ ಜೊತೆ ಸೇರಿಕೊಂಡು Little Moppet ಹಾರ್ಟ್ ಪೌಂಡೇಶನ್ ಕೂಡ ನಡೆಸುತ್ತಿದ್ದಾರೆ. ಇದರ ಮೂಲಕ ಅವರು ತಮಿಳುನಾಡಿನಾದ್ಯಂತ ಕ್ಯಾಂಪ್ ಗಳನ್ನು ನಡೆಸಿ, ಅದರ ಮೂಲಕ ಯಾವೆಲ್ಲಾ ಮಕ್ಕಳಿಗೆ ಹೃದಯ ಸಂಬಂಧಿತ ಸಮಸ್ಯೆಗಳಿವೆ ಎಂದು ಪತ್ತೆ ಹಚ್ಚಿ, ತಮ್ಮ ಪೌಂಡೇಶನ್ ಮೂಲಕ ಉಚಿತ ಚಿಕಿತ್ಸೆ ನೀಡುತ್ತಾರೆ. 

ಸಾಧನೆ ಮಾಡಬೇಕು ಎಂದು ಅಂದುಕೊಂಡಿರುವವರಿಗೆ ಡಾ. ಹೇಮಪ್ರಿಯಾ ಒಂದು ಸಲಹೆ ನೀಡಿದ್ದು, ನೀವು ಏನಾದರೂ ಮಾಡಬೇಕೆಂಬ ಛಲ ತೊಟ್ಟಿದ್ದರೆ, ಅದನ್ನು ಖಂಡಿತವಾಗಿಯೂ ಮಾಡಲು ಸಾಧ್ಯವಾಗುತ್ತೆ. ಹಣದ ಹಿಂದೆ ಓಡಬೇಡಿ, ಬದಲಾಗಿ ನಿಮ್ಮ ಪ್ಯಾಶನ್ ಹಿಂದೆ ಓಡಿ ಎನ್ನುತ್ತಾರೆ. 

Latest Videos

click me!