ದುಬಾರಿ ರೇಷ್ಮೆ ಸೀರೆ ಮೇಲಿನ ಎಣ್ಣೆ/ಜಿಡ್ಡು ಕಲೆ ಹೀಗೆ ತೆಗೆದ್ರೆ ಬಣ್ಣವೂ ಮಾಸಲ್ಲ!

Published : Sep 04, 2026, 09:45 AM IST

ದುಬಾರಿ ಸೀರೆಗಳ ಮೇಲಿನ ಎಣ್ಣೆಯಂತಹ ಹಠಮಾರಿ ಕಲೆಗಳನ್ನು ಹೆಚ್ಚು ಖರ್ಚಿಲ್ಲದೆ ಮನೆಯಲ್ಲೇ ತೆಗೆಯಬಹುದು. ಸರಳ ವಸ್ತುಗಳನ್ನು ಬಳಸಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸುವ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ದುಬಾರಿ ಬೆಲೆಯ ಸೀರೆಗಳು

ಕೆಲವೊಮ್ಮೆ ದುಬಾರಿ ಬೆಲೆಯ ಸೀರೆಗಳು ಧರಿಸಿದ ಸಂದರ್ಭದಲ್ಲಿ ಕಾಫಿ/ಟೀ ಸೇರಿದಂತೆ ಇನ್ನಿತರ ವಸ್ತುಗಳು ಚೆಲ್ಲುತ್ತವೆ. ಅದರಲ್ಲಿಯೂ ಎಣ್ಣೆಯಂತಹ ಜಿಡ್ಡು ಕಲೆಯುಂಟಾದ್ರೆ ಕ್ಲೀನಿಂಗ್‌ಗಾಗಿ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸಿ ಹಠಮಾರಿ ಕಲೆಗಳನ್ನು ಸುಲಭವಾಗಿ ತೆಗೆಯಬಹುದಾಗಿದೆ.

25
ಶಾಂಪೂ

ಸೀರೆ ಮೇಲಿನ ಎಣ್ಣೆ ಕಲೆಗಳನ್ನು ತೆಗೆಯಲು ಶಾಂಪೂ ಬಳಕೆ ಮಾಡಬಹುದಾಗಿದೆ. ಕಲೆ ಇರೋ ಜಾಗದ ಮೇಲೆ ಶಾಂಪೂ ಹಾಕಿ ಕೈಯಿಂದ ಸ್ಕ್ರಬ್ ಮಾಡಿ. ಮನೆಯಲ್ಲಿ ಹಲ್ಲುಜ್ಜುವ ಬ್ರಷ್ ಸಹ ಬಳಕೆ ಮಾಡಬಹುದು. ಬ್ರಷ್‌ ಕೆಲವೊಮ್ಮೆ ಸೀರೆ ನೂಲನ್ನು ಹಾಳು ಮಾಡಬಹುದು. ಹಾಗಾಗಿ ಕೈಗಳಿಂದಲೇ ಮೃದುವಾಗಿ ಉಜ್ಜಿ. ಹೀಗೆ ಉಜ್ಜಿದ ಮೇಲೆ ಶುದ್ಧವಾದ ನೀರಿನಲ್ಲಿ ತೊಳೆಯಿರಿ.

35
ವಿನೆಗರ್

ವಿನೆಗರ್ ನ್ಯಾಚುರಲ್ ಕ್ಲೀನಿಂಗ್ ಅಂಶಗಳನ್ನು ಹೊಂದಿರುತ್ತದೆ. ದುಬಾರಿ ಅಥವಾ ರೇಷ್ಮೆ ಸೀರೆ ಮೇಲೆಯುಂಟಾಗಿರುವ ಮೊಂಡು ಕಲೆ ಹೋಗಲಾಡಿಸಲು ಯಾವುದೇ ವಿನೆಗರ್ ಬಳಕೆ ಮಾಡಬಹುದಾಗಿದೆ. ಕಲೆ ಮೇಲೆ ವಿನೆಗರ್ ಹಾಕಿ ಮೃದುವಾಗಿ ಉಜ್ಜಿ. 10-15 ನಿಮಿಷದ ಬಳಿಕ ಶುದ್ಧ ನೀರಿನಲ್ಲಿ ತೊಳೆದ್ರೆ ಮೊಂಡು ಕಲೆ ಮಾಯವಾಗುತ್ತದೆ.

45
ಬಿಸಿನೀರು

ಸೀರೆ ಮೇಲಿನ ಎಣ್ಣೆ ಕಲೆಗಳನ್ನು ತೆಗೆಯಲು ಬಿಸಿನೀರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಣ್ಣೆ ಕೊಳೆಯಾಗಿರುವ ಸೀರೆಯ ಭಾಗವನ್ನು ಬಿಸಿನೀರಿನಲ್ಲಿ 10 ರಿಂದ 15 ನಿಮಿಷದ ಅದ್ದಿಡಿ. ನಂತರ ಕೈಗಳಿಂದ ಮೃದುವಾಗಿ ಉಜ್ಜಿ, ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಒಣಗಿಸಿ. ಈ ರೀತಿ ಮಾಡಿದ್ರೆ ಕಲೆಗಳು ಮಾಯವಾಗಿ ಹೋಗುತ್ತವೆ.

55
ನಿಂಬೆರಸ ಮತ್ತು ಬಿಸಿನೀರು

ಸೀರೆ ಮೇಲೆ ಕಲೆಯುಂಟಾರುವ ಜಾಗದಲ್ಲಿ ನಿಂಬೆಹಣ್ಣಿನ ರಸ ಸಿಂಪಡಿಸಿ ಮೃದುವಾಗಿ ಸ್ಕ್ರಬ್ ಮಾಡಿ. ನಂತರ ಆ ಜಾಗವನ್ನು ಬಿಸಿನೀರಿನಿಂದ ತೊಳೆದ್ರೆ ಕಲೆ ತೀವ್ರತೆ ಕಡಿಮೆಯಾಗುತ್ತದೆ. ದುಬಾರಿ ಸೀರೆಗಳನ್ನು ತೊಳೆಯುವಾಗ ನೀರು ಅತಿ ಬಿಸಿಯಾಗಿರದಂತೆ ನೋಡಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories