ಸೀರೆ ಕ್ಯಾನ್ಸರ್ ಎಂದರೇನು? ಸ್ಕ್ವಾಮಸ್ ಸೆಲ್ ಕಾರ್ಸಿನೋಮದ (SCC) ಲಕ್ಷಣ ತಿಳಿಯಿರಿ
health-life Aug 31 2026
Author: Mahmad Rafik Image Credits:Getty
Kannada
ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC)
ಬಾಸಲ್ ಸೆಲ್ ಕಾರ್ಸಿನೋಮದ ನಂತರ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಚರ್ಮದ ಕ್ಯಾನ್ಸರ್ ಅಂದ್ರೆ ಇದೇ ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC). ಇದು ಎರಡನೇ ಅತಿ ಸಾಮಾನ್ಯವಾದ ಚರ್ಮದ ಕ್ಯಾನ್ಸರ್ ಆಗಿದೆ.
Image credits: Getty
Kannada
SCCಗೆ ಕಾರಣವಾಗುವ ಅಪಾಯಕಾರಿ ಅಂಶಗಳು
ದೀರ್ಘಕಾಲ ಸೂರ್ಯನ ಬೆಳಕಿಗೆ (UV ಕಿರಣ) ಮೈಯೊಡ್ಡುವುದು, ವಯಸ್ಸಾಗುವುದು, ಕೆಲ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಸುಟ್ಟಗಾಯ, ಹಳೆ ಕಲೆ ಮತ್ತು ಕೆಲ ರೀತಿಯ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಇದಕ್ಕೆ ಕಾರಣವಾಗಬಹುದು.
Image credits: Getty
Kannada
ಸೀರೆ ಕ್ಯಾನ್ಸರ್ - ಇದೊಂದು ಅಪರೂಪದ ಕ್ಯಾನ್ಸರ್
ಸೀರೆ ಕ್ಯಾನ್ಸರ್ ಅನ್ನೋದು ಒಂದು ರೀತಿಯ ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC). ನಿರಂತರವಾಗಿ ಸೀರೆ ಉಡುವ ಮಹಿಳೆಯರ ಸೊಂಟದ ಭಾಗದಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
Image credits: Getty
Kannada
ಸೀರೆ ಕ್ಯಾನ್ಸರ್‌ಗೆ ಕಾರಣವೇನು?
ಸದಾ ಬಿಗಿಯಾಗಿ ಸೀರೆ ಉಡುವುದರಿಂದ ಚರ್ಮದಲ್ಲಿ ನಿರಂತರ ಕಿರಿಕಿರಿ, ಘರ್ಷಣೆ, ಚರ್ಮ ಸುಲಿಯುವುದು, ಚರ್ಮದ ಬಣ್ಣದಲ್ಲಿ ಬದಲಾವಣೆ ಮತ್ತು ಅಂತಿಮವಾಗಿ ಕ್ಯಾನ್ಸರ್ ಗಡ್ಡೆಗಳಾಗಿ ಬದಲಾಗುವ ಸಾಧ್ಯತೆ ಇರುತ್ತದೆ.
ಸೀರೆ ಭದ್ರಪಡಿಸಲು ಲಂಗದ (ಪೆಟ್ಟಿಕೋಟ್) ದಾರವನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟುವುದು ಮುಖ್ಯ ಕಾರಣ. ಇದರಿಂದ ಸೊಂಟದ ಮೇಲೆ ನಿರಂತರ ಒತ್ತಡ ಉಂಟಾಗಿ ಚರ್ಮದ ಸಮಸ್ಯೆಗಳು (ಡರ್ಮಟೋಸಸ್) ಶುರುವಾಗುತ್ತವೆ.