ಸುಂದರ ತ್ವಚೆ, ರೇಷ್ಮೆಯಂತಹ ಕೂದಲಿಗೆ ಬೇಕು ಬ್ಲಾಕ್ ಟೀ ಮ್ಯಾಜಿಕ್

First Published Jan 13, 2021, 6:53 PM IST

ಚಹಾ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಒಂದು. ತ್ವಚೆಯ ಆರೈಕೆಗೆ ಇದು ಅತ್ಯುತ್ತಮವಾದುದು ಎಂದು ತಿಳಿದಿರಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ತುಂಬಿಕೊಂಡಿದ್ದು, ಇದು ವಿಷಕಾರಿ ಅಂಶ ಮತ್ತು ಜೀವಕೋಶದ ಪುನಶ್ಚೇತನಕ್ಕೆ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಟೀಗಳು ಲಭ್ಯವಿವೆ. ಇದು ಭಾರತದಲ್ಲಿ ಸುಲಭವಾಗಿ ಸಿಗುವ ಪದಾರ್ಥವಾಗಿದ್ದು,  ಕೂದಲು ಮತ್ತು ಚರ್ಮಕ್ಕೆ ಮ್ಯಾಜಿಕ್ ಮಾಡುವ ವಿಧಾನ ಇಲ್ಲಿದೆ.

ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಳನ್ನು ನಿಭಾಯಿಸುವುದು ತುಂಬಾ ಸವಾಲಿನ ಕೆಲಸ. ಕಣ್ಣಿನ ಸುತ್ತಲಿನ ಚರ್ಮವನ್ನು ಬಿಗಿಗೊಳಿಸಲು ತಂಪಾದ ಟೀ ಬ್ಯಾಗ್ ಗಳನ್ನು ಬಳಸಬಹುದು.
undefined
ಟೀ ಬ್ಯಾಗ್ ಬಳಸುವ ಮೂಲಕ ಸೂಕ್ಷ್ಮ ಗೆರೆಗಳು ಮತ್ತು ಸುಕ್ಕುಗಳು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಮಾಯವಾಗುವಂತೆ ಮಾಡುತ್ತದೆ. ಒಳ್ಳೆಯ ರಾತ್ರಿಯ ನಿದ್ರೆಯಿಂದ ಎದ್ದ ನಂತರ ಪ್ರತಿದಿನ ಬೆಳಿಗ್ಗೆ ಇದನ್ನು ಮಾಡಬಹುದು.
undefined
ಅಂದ ಹೆಚ್ಚಿಸುತ್ತದೆ : ಕೆಲವರಿಗೆ ಬೆಳಗ್ಗೆ ಮುಖ ಮತ್ತು ಕಣ್ಣುಗಳು ಉಬ್ಬಿದ ಅನುಭವವಾಗುತ್ತದೆ. ಕಣ್ಣಿನ ಸುತ್ತಲೂ ಉಬ್ಬಿ ದಪ್ಪಗಾಗಿರುವುದನ್ನು ನಿವಾರಿಸಲು ಬಯಸಿದರೆ, ಕಣ್ಣಿನ ಸುತ್ತ ಇರುವ ಸುಕ್ಕುಗಳ ಆರೈಕೆಯನ್ನು ಹೇಗೆ ಮಾಡುತ್ತೀರಿ ಹಾಗೆಯೇ ಮಾಡಬಹುದು.
undefined
ಟೀ ಬ್ಯಾಗ್ ಗಳು ಕಣ್ಣುಗಳ ಸುತ್ತಲಿನ ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ ಮತ್ತು ಟೀ ಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಸ್ವಲ್ಪ ಪ್ರಮಾಣದ ಕೆಫೀನ್ ಇರುವುದರಿಂದ ಇದು ಸುಲಭವಾಗಿ ದಪ್ಪವಾಗಿರುವ ಭಾಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಕೂದಲಿಗೆ ಹೊಳಪನ್ನು ನೀಡುತ್ತದೆ: ಕಪ್ಪು ಟೀ ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸ್ನಾನದ ನಂತರ ಕೂದಲನ್ನು ಚೆನ್ನಾಗಿ ಅಂದಗೊಳಿಸಲು ಕಪ್ಪು ಟೀ ಯನ್ನು ಬಳಸುವುದರಿಂದ ಕೂದಲು ಕಪ್ಪು ಮತ್ತು ಕಾಂತಿಯಿಂದ ಕೂಡಿರುತ್ತದೆ.
undefined
ಕೂದಲಿನ ಮೇಲೆ ಬಣ್ಣದ ಪರಿಣಾಮವನ್ನು ಹೆಚ್ಚಿಸಲು ಬಯಸಿದರೆ ಕಪ್ಪು ಟೀಗೆ ಸ್ವಲ್ಪ ಮೆಹಂದಿ ಪುಡಿಯನ್ನು ಕೂಡ ಸೇರಿಸಬಹುದು. ಇದರಿಂದ ಅಂದ ಹೆಚ್ಚುತ್ತದೆ.
undefined
ಕಪ್ಪು ಟೀ ಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು, ಇದು ಫ್ರೀ radicalsಹೊರಹಾಕಲು ಮತ್ತು ವಿಷಕಾರಿ ಅಂಶ ಹೊರಹಾಕಲು ಸಹಾಯ ಮಾಡುತ್ತದೆ.
undefined
ಕಪ್ಪು ಟೀ ಯನ್ನು ಕಲೆಗಳನ್ನು ತಿಳಿಗೊಳಿಸಲು ಮತ್ತು ಚರ್ಮದ ಟೋನ್ ಅನ್ನು ಸಮಗೊಳಿಸಲು ಬಳಸಬಹುದು.
undefined
ತ್ವಚೆಯ ಮೇಲೆ ಬಿಸಿಕಪ್ಪು ಟೀಯನ್ನು ಬಳಸಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ ಅಥವಾ ತಣ್ಣಗಿನ ಟೀ ಬ್ಯಾಗ್ ಗಳನ್ನು ಬಳಸಿ .
undefined
click me!