ಸಿಸೇರಿಯನ್ ಹೆರಿಗೆ ನಂತ್ರ ಸೀನುವಾಗ ಎಚ್ಚರವಿರಲಿ ಅಂತಾರಲ್ಲ, ಏಕೆ?

First Published Jan 12, 2023, 2:47 PM IST

ಸಾಮಾನ್ಯ ಹೆರಿಗೆಯಂತೆಯೇ, ಸಿ-ಸೆಕ್ಷನ್ ನಂತರವೂ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಸಿಸೇರಿಯನ್ ಹೆರಿಗೆಯ ನಂತರ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಎಷ್ಟೊಂದು ಬದಲಾವಣೆಯಾಗಿದೆ ಎಂದ್ರೆ, ಇದರಿಂದ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.. ಕೆಟ್ಟ ಜೀವನಶೈಲಿಯು (bad lifestyle) ಗರ್ಭಿಣಿ ಮಹಿಳೆಯರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ, ಇದರಿಂದಾಗಿ ಹೆರಿಗೆಯ ಸಮಯದಲ್ಲಿ ದೊಡ್ಡ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿ-ಸೆಕ್ಷನ್ ಅಂದರೆ ಸಿಸೇರಿಯನ್ ಹೆರಿಗೆಯ ಪ್ರಕರಣಗಳು ಮೊದಲಿಗಿಂತ ಹೆಚ್ಚಾಗಿ ಕಂಡು ಬರುತ್ತಿದೆ. ಸಾಮಾನ್ಯ ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳಾಗುವಂತೆ,  ಸಿ-ಸೆಕ್ಷನ್ ಹೆರಿಗೆಯ (c section delivery) ನಂತರ ಮಹಿಳೆಯರ ದೇಹದಲ್ಲಿ ಹೆಚ್ಚಿನ ಬದಲಾವಣೆಗಳು ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ

ಸಿ-ಸೆಕ್ಷನ್ ನಂತರ, ವೈದ್ಯರು 4 ರಿಂದ 5 ತಿಂಗಳವರೆಗೆ ಮೈದಾ ಇತ್ಯಾದಿಗಳನ್ನು ತಿನ್ನಬಾರದು ಎಂದು ಹೇಳುತ್ತಾರೆ. ಇದಲ್ಲದೆ, ಇನ್ನೂ ಅನೇಕ ವಿಷಯಗಳಿವೆ. ವೈದ್ಯರು ಹೇಳಿದಂತೆ ಸೀ ಸೆಕ್ಷನ್ ಬಳಿಕ ಏನೆಲ್ಲಾ ಮಾಡಬಾರದು, ಏನು ತಿನ್ನಬಾರದು ಅನ್ನೋದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ತಿಳಿಯಿರಿ. 

ಸೀನುವಾಗ ಅಥವಾ ಕೆಮ್ಮುವಾಗ ಕಾಳಜಿ ವಹಿಸಿ

ಸಿ-ಸೆಕ್ಷನ್ ನಂತರ, ಹೊಟ್ಟೆಯ ಕೆಳಗೆ ಆಪರೇಶನ್ ಮಾಡಿ ಹೊಲಿಗೆ ಹಾಕಿರುತ್ತಾರೆ, ಅವುಗಳಿಗೆ ವಿಶೇಷ ಆರೈಕೆಯ ಅಗತ್ಯವಿದೆ. ಈ ಹೊಲಿಗೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ವಿಶೇಷವಾಗಿ ಸೀನುವಾಗ ಮತ್ತು ಕೆಮ್ಮುವಾಗ (cough), ಅವುಗಳಿಗೆ ಹೆಚ್ಚು ಸ್ಟ್ರೆಸ್ ಆಗದಂತೆ ನೋಡಿಕೊಳ್ಳಬೇಕು. ಆದ್ದರಿಂದ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸಿ. 

ನಿಮಗೆ ಯಾವುದೇ ರೀತಿಯ ಸಮಸ್ಯೆಯಿದ್ದರೆ, ಸಾಧ್ಯವಾದಷ್ಟು ಬೇಗ ಅದರ ಔಷಧಿಗಳನ್ನು ತೆಗೆದುಕೊಳ್ಳಿ. ಸೀನುವಾಗ ಮತ್ತು ಕೆಮ್ಮುವಾಗ, ಹೊಲಿಗೆಗಳ ಮೇಲೆ ದಿಂಬನ್ನು ಇಡೋದು ಮತ್ತು ಸ್ಟಿಚ್ ಮೇಲೆ ಸ್ವಲ್ಪ ಒತ್ತಿ, ಇದರಿಂದ ಕೆಮ್ಮುವಾಗ ಸ್ಟಿಚ್ ಮೇಲೆ ಯಾವುದೇ ರೀತಿಯ ಪ್ರೆಶರ್ ಬೀಳೋದಿಲ್ಲ.

ಸ್ನಾನ ಮಾಡುವಾಗ ಏನನ್ನು ಗಮನದಲ್ಲಿಟ್ಟುಕೊಳ್ಳಬೇಕು?

ಮೊದಲನೆಯದಾಗಿ, ಸರ್ಜರಿ (Surgery) ನಂತರ ಕೆಲವು ದಿನ ಸ್ನಾನ ಮಾಡಬೇಡಿ (do not take bath) ಎಂದು ವೈದ್ಯರು ನಿಮಗೆ ಸಲಹೆ ನೀಡುತ್ತಾರೆ. ಅದನ್ನು ಅನುಸರಿಸಿ. ಅದರ ನಂತರ, ವೈದ್ಯರು ನಿಮಗೆ ಸ್ನಾನ ಮಾಡಲು ಅನುಮತಿಸಿದಾಗ, ಸ್ನಾನ ಮಾಡುವ ಸರಿಯಾದ ವಿಧಾನದ ಬಗ್ಗೆ ಅವರನ್ನು ಕೇಳುವುದು ಮುಖ್ಯ. ಕೆಲವು ದಿನಗಳವರೆಗೆ ಸ್ನಾನ ಮಾಡುವಾಗ ಹೊಲಿಗೆಗಳನ್ನು ಏನನ್ನಾದರೂ ಮುಚ್ಚುವಂತೆ ಮತ್ತು ಸಾಬೂನು ಇತ್ಯಾದಿಗಳನ್ನು ಬಳಸದಂತೆ ವೈದ್ಯರು ನಿಮಗೆ ಸಲಹೆ ನೀಡುತ್ತಾರೆ.
 

ಬಟ್ಟೆಗಳನ್ನು ಧರಿಸುವಾಗ ಜಾಗರೂಕರಾಗಿರಿ

ಸಿ-ಸೆಕ್ಷನ್ ನಂತರ (after c section) ಕೆಲವು ದಿನಗಳವರೆಗೆ ಬಟ್ಟೆಗಳನ್ನು ಧರಿಸುವಾಗ ಅನೇಕ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೆಚ್ಚು ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಹೊಲಿಗೆಗಳ ಮೇಲೆ ಒತ್ತಡ ಉಂಟಾಗುತ್ತದೆ. ಸಿ-ಸೆಕ್ಷನ್ ನಂತರ, ಕೆಲವು ತಿಂಗಳುಗಳವರೆಗೆ ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆ ಧರಿಸಿ. ಇದನ್ನು ಮಾಡುವುದರಿಂದ ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
 

ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ

ಸಿ-ಸೆಕ್ಷನ್ ನಂತರ ವಿಶೇಷ ರೀತಿಯ ಆಹಾರ ತೆಗೆದುಕೊಳ್ಳುವುದು ಸಹ ಬಹಳ ಮುಖ್ಯ. ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಸರಿಯಾದ ಆಹಾರ ಪಡೆಯಲು ವೈದ್ಯರನ್ನು ಸಂಪರ್ಕಿಸಿ. ಹೆಚ್ಚು ಹುರಿದ ಅಥವಾ ಮೈದಾ ಇತ್ಯಾದಿಗಳನ್ನು ಸೇವಿಸಬಾರದು. ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ, ಇದರಿಂದ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

ಮನೆ ಕೆಲಸಗಳ ಬಗ್ಗೆ ಕಾಳಜಿ ವಹಿಸಿ

ಶಸ್ತ್ರಚಿಕಿತ್ಸೆಯ ಕೆಲವು ತಿಂಗಳ ನಂತರ, ಲಘು ಮನೆ ಕೆಲಸವನ್ನು ಮಾಡಲು ವೈದ್ಯರು ನಿಮಗೆ ಸಲಹೆ ನೀಡಿದ್ದರೆ, ಆಗ ನೀವು ಕೆಲವು ವಿಷಯಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚು ಆಯಾಸವಾಗುವಂತಹ, ಹೆವಿಯಾದ ಯಾವುದೇ ಕೆಲಸಗಳನ್ನು ಮಾಡೋದರಿಂದ ತಪ್ಪಿಸಿ.

click me!