9 ತಿಂಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಹುಡುಗಿಯ ಫಿಟ್ನೆಸ್‌ ಸ್ಟೋರಿ!

Suvarna News   | Asianet News
Published : Dec 16, 2020, 05:48 PM IST

ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ, 23 ಕೆಜಿ ಕಡಿಮೆ ಮಾಡಿಕೊಂಡಿರುವ ಈ ಹುಡುಗಿಯ ಬಗ್ಗೆ ತಿಳಿಯಲೇಬೇಕು. ಹಿಂದೊಮ್ಮೆ 82 ಕೆಜಿ ಇದ್ದ ಮುದಿತಾ ಯಾದವ್ ಕೇವಲ 9 ತಿಂಗಳಲ್ಲಿ ಒಟ್ಟು 23 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇವರ ವೈಯಿಟ್‌ ಲಾಸ್‌ ಹಾಗೂ  ಫಿಟ್‌ನೆಸ್  ಜರ್ನಿ ಬಗ್ಗೆ ಇಲ್ಲಿದೆ. 

PREV
110
9 ತಿಂಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಹುಡುಗಿಯ ಫಿಟ್ನೆಸ್‌ ಸ್ಟೋರಿ!

ಕಂಪನಿಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ 38 ವರ್ಷ ವಯಸ್ಸಿನ ಮುದಿತಾ ನೋಡಿದರೆ   25 ವರ್ಷದವರಂತೆ ಕಾಣುತ್ತಾರೆ. ಇದಕ್ಕೆ ಕಾರಣ ಅವರ ಫಿಟ್‌ನೆಸ್‌ ಗೀಳು. 

210

ಮುದಿತಾ ಅವರ ಪ್ರಕಾರ, ಅವರು ತೂಕ ಇಳಿಸಲು ಪ್ರಾರಂಭಿಸಿದಾಗ, ಪ್ರಾರಂಭದ 2-3 ತಿಂಗಳು ತುಂಬಾ ಕಷ್ಟವಾಗಿತ್ತು, ಏಕೆಂದರೆ ರಿಸಲ್ಟ್‌  ಬೇಗ ಕಾಣಿಸಲಿಲ್ಲ. ಆದರೆ ಕಠಿಣ ಪರಿಶ್ರಮದ ನಂತರ ಮುದಿತಾ ತನ್ನ ಸೊಂಟದ ಗಾತ್ರವನ್ನು 36 ಇಂಚಿನಿಂದ 28 ಇಂಚಿಗೆ ಇಳಿಸಿಕೊಂಡಿದ್ದಾರೆ. ಇಲ್ಲಿದೆ ಇವರ ಫ್ಯಾಟ್‌ ಟು ಫಿಟ್‌ ಜರ್ನಿಯ ವಿವರ. 

310

2010ರಲ್ಲಿ, ಮುದಿತಾ ಲಂಡನ್‌ನಲ್ಲಿದ್ದಾಗ, ತೀವ್ರ ಚಳಿಯಿಂದಾಗಿ ಮನೆಯಲ್ಲಿಯೇ ಇರುತ್ತಿದ್ದರು. ಈ ಸಮಯದಲ್ಲಿ, ಅವರ ತೂಕವೂ ಹೆಚ್ಚಾಯಿತು. 80 ಕೆಜಿ ದಾಟಿದಾಗ, ವೈಯಟ್ ಕಳೆದು ಲಾಸ್‌ ಬಗ್ಗೆ ಯೋಚಿಸಿದ. ಮುದಿತಾ ಮೊದಲು ಬ್ರಿಸ್ಕ್‌ ವಾಕ್‌ ಪ್ರಾರಂಭಿಸಿದರು, ಇದು 2-3 ಕೆಜಿ ತೂಕ ಕಡಿಮೆಯಾಗಲು ಸಹಾಯ ಮಾಡಿತು. ಅದರ ನಂತರ ನಿಧಾನವಾಗಿ ಸಂಪೂರ್ಣವಾಗಿ ಓಡಲು ಪ್ರಾರಂಭಿಸಿದರು.  

410

ಮುದಿತಾ ವರ್ಕೌಟ್‌ ಜೊತೆ  ಸರಿಯಾದ ಡಯಟ್‌ ಅನ್ನು ಅನುಸರಿಸಿದರು.  
ಬ್ರೆಕ್‌ಫಾಸ್ಟ್‌: ಪಾಲಕ್‌ ಅಥವಾ ಬೀಟ್ ಜ್ಯೂಸ್‌, ಬೆರಿಹಣ್ಣುಗಳು ಮತ್ತು ಸ್ಟ್ರಾಬೆರಿಗಳೊಂದಿಗೆ ಓಟ್ಸ್‌, ಮೊಟ್ಟೆಗಳೊಂದಿಗೆ ಆವಕಾಡೊ ಟೋಸ್ಟ್ ಅಥವಾ ಕಡಿಮೆ ಸಕ್ಕರೆ ಅಂಶವಿರುವ  ಹಣ್ಣುಗಳು.
ಊಟ: ಆಲಿವ್ ಎಣ್ಣೆ ಹಾಕಿದ  ಹಸಿರು ತರಕಾರಿಗಳೊಂದಿಗೆ ಚಿಕನ್ / ಚೀಸ್ / ಟೋಫು  
ಸ್ನ್ಯಾಕ್ಸ್‌ : ಗ್ರೀನ್ ಟೀ ಅಥವಾ ಕಾಫಿಯೊಂದಿಗೆ ಮಖಾನಾ ಅಥವಾ ಡ್ರೈ ಫ್ರೂಟ್ಸ್ .
ಡಿನ್ನರ್ : ಚಿಕನ್ / ಗ್ರಿಲ್ಡ್ ಫಿಶ್ ಅಥವಾ ಬ್ರೌನ್ ರೈಸ್‌ನೊಂದಿಗೆ ತರಕಾರಿಗಳು /ಟೋಫು

510

ಸ್ಥೂಲಕಾಯತೆಯಿಂದಾಗಿ, ಮುದಿತಾರ ಪಿರಿಯರ್ಡ್ಸ್‌ ಆಗಾಗ್ಗೆ ಎರಡರಿಂದ ಎರಡೂವರೆ ತಿಂಗಳು ವಿಳಂಬವಾಗುತ್ತಿತ್ತು. ಆದರೆ ಅವರು ಫಿಟ್‌ನೆಸ್‌ಗಾಗಿ ಓಡಲು ಪ್ರಾರಂಭಿಸಿದಾಗಿನಿಂದ, ಇಲ್ಲಿಯವರೆಗೆ ಎಂದಿಗೂ ಮುಂದೆ ಹೊಗಿಲ್ಲ. ತೂಕ ಕಡಿಮೆ ಮಾಡಿಕೊಂಡ ಕಾರಣದಿಂದ ಅವರ ಆರೋಗ್ಯವೂ ಉತ್ತಮಗೊಂಡಿದೆ  '10 ವರ್ಷಗಳಿಂದ ನನ್ನ ವೈದ್ಯಕೀಯ ವೆಚ್ಚಗಳು ಕೇವಲ 200 ಅಥವಾ 500 ರೂಪಾಯಿಗಳಾಗಿರಬೇಕು ಮತ್ತು ಅದೂ ನನಗೆ ಜ್ವರ ಬಂದಾಗ' ಎಂದು ಹೇಳುತ್ತಾರೆ ಮುದಿತಾ.

610

ತನ್ನ ಮೊಟಿವೇಶನ್‌  ಕಡಿಮೆಯಾದಾಗಲೆಲ್ಲಾ ತಾನು ಫೇಸ್‌ಬುಕ್‌ನಲ್ಲಿ 100 ಡೇಸ್ ಚಾಲೆಂಜ್ ನೀಡುತ್ತಿದ್ದೆ, ಇದರಲ್ಲಿ ಸಕ್ಕರೆ, ಜಂಕ್ ಫುಡ್ ಮತ್ತು ಆಲ್ಕೋಹಾಲ್ ಮುಂತಾದವುಗಳಿಂದ ನೂರು ದಿನಗಳವರೆಗೆ ದೂರವಿರಬೇಕಾಯಿತು. ಇದಲ್ಲದೇ, ಈ ಚಾಲೆಂಜ್‌ನಲ್ಲಿ ಅವರು ತಮ್ಮೊಂದಿಗೆ ಅನೇಕ ಜನರನ್ನು ಸಂಪರ್ಕಿಸಲು ಪ್ರಾರಂಭಿಸಿದರು, ಇದು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿತು.

710

ಮುದಿತಾ ಸಿಸ್ಟರ್‌ಹುಡ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಫುಡ್‌ ಪ್ಲಾನ್‌ ಅನ್ನು ಇತರೆ ಮಹಿಳೆಯರೊಂದಿಗೆ ಉಚಿತವಾಗಿ ಹಂಚಿಕೊಳ್ಳುತ್ತಾರೆ. ಅವರು ಇದನ್ನು ಖ್ಯಾತಿ ಗಳಿಸುವುದಕ್ಕಾಗಿ ಅಲ್ಲ, ಆದರೆ ಮಹಿಳೆಯರಿಗೆ ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸಲು ಶುರು ಮಾಡಿದ್ದಾರೆ.

810

ಫಿಟ್ನೆಸ್‌ನಿಂದ ಎರಡನೇ ಬಾರಿಗೆ ತೂಕ ಇಳಿಸಿಕೊಂಡೆ. ಫಿಟ್ನೆಸ್ ಮೂಲಕ, ಒಬ್ಬರು ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹದು ಎಂದು ಕಲಿತೆ. ಹತ್ತು ವರ್ಷಗಳಲ್ಲಿ, ಫಿಟ್‌ ಮಾತ್ರವಲ್ಲದೆ ಉತ್ತಮ ಬಾಡಿ ಶೇಪ್‌ ಹೊದಲು ಬಯಸಿದ್ದೆ ಎನ್ನುತ್ತಾರೆ ಮುದಿತಾ. 

910

ನೀವು ಫಿಟ್‌ ಆಗಿರಲು ಬಯಸಿದರೆ ಮೊದಲು ಶಿಸ್ತು ಕಲಿಯಿರಿ. ಇದು ನಿಮ್ಮನ್ನು ಸದೃಡವಾಗಿರಿಸುವುದಲ್ಲದೆ ಜನರ ದೃಷ್ಟಿಯಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳುವ ಮುದಿತಾ ಮಹಿಳೆಯರ ಫಿಟ್‌ನೆಸ್ ಬಗ್ಗೆಯೂ ಮಾತನಾಡುತ್ತಾರೆ.

1010

ಕೆಲಸದ ಸಂದರ್ಭದಲ್ಲಿ ಅವರ ಫಿಟ್‌ನೆಸ್ ಅನ್ನು ನಿರ್ಲಕ್ಷಿಸಬಾರದು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಮಕ್ಕಳಲ್ಲಿ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಬಹುದು ಎನ್ನುತ್ತಾರೆ. 

click me!

Recommended Stories