ನವಿಲುಗರಿಯನ್ನು(Peacock) ಅನೇಕ ಮಕ್ಕಳು ಬಾಲ್ಯದಲ್ಲಿ ತಮ್ಮ ಪುಸ್ತಕದ ಪುಟಗಳಲ್ಲಿ ಇಡುತ್ತಿದ್ದರು, ಇದರಿಂದ ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯುತ್ತೆ, ಹಾಗೂ ಓದದೇನೆ ಪಾಸ್ ಆಗಬಹುದು ಎಂದು ನಂಬುತ್ತಿದ್ದರು. ಧರ್ಮಗ್ರಂಥಗಳಲ್ಲಿ, ನವಿಲುಗರಿಯನ್ನು ತುಂಬಾ ಮಂಗಳಕರವೆಂದು ಹೇಳಲಾಗುತ್ತೆ.
ಇಲ್ಲಿ ಇದೀಗ ಮೋರ್ ಪಂಖ್ ಗಿಡದ(Morpankhi plant) ಬಗ್ಗೆ ಮಾಹಿತಿ ನೀಡುತ್ತೇವೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಅನೇಕ ಪ್ರಯೋಜನಗಳಿವೆ, ಅದರ ಪ್ರಯೋಜನ ಮತ್ತು ಅದನ್ನು ಮನೆಯಲ್ಲಿ ನೆಡುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಮೋರ್ಪಾನ್ಕ್ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ…
ಮನೆಯಲ್ಲಿ ಮೋರ್ಪಾನ್ಕ್ ಸಸ್ಯ ನೆಡೋದ್ರಿಂದ ಒತ್ತಡದ ಪರಿಸ್ಥಿತಿ ಸೃಷ್ಟಿಯಾಗೋದಿಲ್ಲ ಎಂದು ನಂಬಲಾಗಿದೆ. ಕುಟುಂಬದಲ್ಲಿ(Family) ಏಕತೆ ಇರುತ್ತದೆ. ಪರಸ್ಪರರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರುತ್ತಾರೆ. ಭಿನ್ನಾಭಿಪ್ರಾಯ ಇರೋದಿಲ್ಲ ಎಂದು ನಂಬಲಾಗಿದೆ.
ಮೋರ್ಪಾನ್ಕ್ ಸಸ್ಯ ಮನೆಯಲ್ಲಿ ಸಕಾರಾತ್ಮಕತೆ ಸೃಷ್ಟಿಸಲು ಕಾರಣವಾಗುತ್ತೆ. ಮನೆಯಲ್ಲಿ ಸದಸ್ಯರ ಬುದ್ಧಿಶಕ್ತಿ ಬೆಳೆಯಲು ಸಹಾಯ ಮಾಡುತ್ತೆ. ಮನಸ್ಸು ಕೆಲಸದ ಕಡೆಗೆ ಕೇಂದ್ರೀಕೃತವಾಗಿರುತ್ತೆ. ಅಲ್ಲದೇ ಇದು ಮಕ್ಕಳ ಮನಸ್ಸನ್ನು ತೀಕ್ಷ್ಣಗೊಳಿಸುತ್ತೆ ಮತ್ತು ಅಧ್ಯಯನದಲ್ಲಿ(Reading) ಆಸಕ್ತಿ ಹೊಂದುವಂತೆ ಮಾಡುತ್ತೆ.
ಈ ಸಸ್ಯದ ಪ್ರಭಾವದಿಂದಾಗಿ ಮನೆಯ ವಿಪತ್ತು ಸಹ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಕುಟುಂಬದಲ್ಲಿ ಶಾಂತಿ (Peace) ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಮತ್ತು ಆರ್ಥಿಕ ಪ್ರಯೋಜನಗಳಿಗಾಗಿ ಇದನ್ನು ಬಹಳ ಉತ್ತಮವೆಂದು ಪರಿಗಣಿಸಲಾಗಿದೆ.
ನೀವು ನಿಮ್ಮ ಮನೆಯಲ್ಲಿ ಮೋರ್ಪಾನ್ಕ್ ಸಸ್ಯ ನೆಟ್ಟಾಗಲೆಲ್ಲಾ, ಅದನ್ನು ಒಂದೇ ಗಿಡ ನೆಡಬೇಡಿ, ಯಾವಾಗಲೂ ಅದನ್ನು ಜೋಡಿಯಾಗಿ ನೆಡಿ. ಇದು ವೈವಾಹಿಕ ಜೀವನವನ್ನು(Marriage life) ಸಂತೋಷವಾಗಿರಿಸುತ್ತೆ . ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಮತ್ತು ಸಹಕಾರವು ಮುಂದುವರಿಯುತ್ತೆ
ಮೋರ್ಪಾನ್ಕ್ ಸಸ್ಯ ಯಾವಾಗಲೂ ಮನೆಯ ಮುಖ್ಯ ದ್ವಾರದಲ್ಲಿ(Main Door)ನೆಡಬೇಕು. ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸೋದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇರೋದಿಲ್ಲ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಯಾವಾಗಲೂ ನೆಲೆಸಿರುತ್ತೆ.
ನೀವು ಮನೆಯೊಳಗೆ ಮೋರ್ಪಾನ್ಕ್ ಸಸ್ಯ ನೆಟ್ಟರೆ, ಅದನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ನೆಡಿ. ಈ ಸಸ್ಯ ಬಿಸಿಲು (Sun light) ಬಿಳೋ ಸ್ಥಳದಲ್ಲಿ ಅದನ್ನು ಇರಿಸಿ, ಏಕೆಂದರೆ ಆಗ ಮಾತ್ರ ಅದು ಸರಿಯಾಗಿ ಬೆಳೆಯಲು ಸಾಧ್ಯವಾಗುತ್ತೆ .
ಧರ್ಮಗ್ರಂಥಗಳ ಪ್ರಕಾರ, ಮೋರ್ಪಾನ್ಕ್ ಸಸ್ಯ ಒಣಗಿದರೆ, ಎರಡನೇ ಮೋರ್ಪಾನ್ಕ್ ಸಸ್ಯ ತಕ್ಷಣವೇ ನೆಡಬೇಕು. ಏಕೆಂದರೆ ಈ ಸಸ್ಯ ಮನೆಯ ಸದಸ್ಯರನ್ನು ರೋಗಗಳಿಂದ ರಕ್ಷಿಸುತ್ತೆ ಎಂದು ನಂಬಲಾಗಿದೆ.