ಅನೇಕ ಬಾರಿ, ಮನೆಯ ದೋಷಗಳು ನೆಗಟಿವ್ ಎನರ್ಜಿಗೆ ಕಾರಣವಾಗುತ್ತೆ, ಆದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ(Negative power) ಹೆಚ್ಚಳ ಸಹ ಈ ಪರಿಸ್ಥಿತಿಗೆ ಕಾರಣವಾಗಬಹುದು. ಅದಕ್ಕಾಗಿ ನೀವು ಯಾವ ವಸ್ತುಗಳು ನೆಗೆಟಿವ್ ಪವರ್ ಪರಿಣಾಮ ಹೆಚ್ಚಿಸುತ್ತೆ, ಹಣ ಮತ್ತು ಸಂತೋಷದ ಕೊರತೆ ಹೆಚ್ಚಿಸುತ್ತೆ ಎಂದು ತಿಳಿದುಕೊಳ್ಳೋದು ಮುಖ್ಯ.
ತಪ್ಪಿಯೂ ಈ ತಪ್ಪು ಮಾಡಬೇಡಿ
ಧರ್ಮಗ್ರಂಥಗಳ ಪ್ರಕಾರ, ಸುಗಂಧ ದ್ರವ್ಯ, ಪರ್ಫ್ಯೂಮ್ (Perfume) ಮುಂತಾದ ಪರಿಮಳಯುಕ್ತ ವಸ್ತುವನ್ನು ರಾತ್ರಿ ಎಂದಿಗೂ ಬಳಸಬಾರದು. ತೀಕ್ಷ್ಣವಾದ ಪರಿಮಳದಿಂದ ನಕಾರಾತ್ಮಕ ಶಕ್ತಿ ನಿಮ್ಮತ್ತ ಆಕರ್ಷಿತವಾಗುತ್ತೆ. ಇದನ್ನು ಹಗಲಿನ ಹೊತ್ತಲ್ಲಿ ಬಳಕೆ ಮಾಡೋದು ಉತ್ತಮ.
ಮನೆ, ಆಫೀಸ್ ಅಥವಾ ಅಂಗಡಿ ಯಾವುದೇ ಸ್ಥಳ ಕತ್ತಲಾಗಿಡಬಾರದು(Dark). ಅವುಗಳನ್ನು ಹೆಚ್ಚು ದಿನಗಳ ಕಾಲ ಕತ್ತಲೆಯಲ್ಲಿಡೋದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಆದುದರಿಂದ ಮನೆಯಲ್ಲಿ ಯಾವಾಗಲೂ ಬೆಳಕು ಇರುವಂತೆ ನೋಡಿ. ಸೂರ್ಯನ ಬೆಳಕು ಮನೆಯೊಳಗೆ ಬೀಳೋದು ತುಂಬಾನೆ ಮುಖ್ಯ.
ಮನೆಯಲ್ಲಿ ಪ್ರತಿದಿನ ಪೂಜೆ(Pooja)-ಪಠಣ ಮಾಡಲು ಸೂಚಿಸಲಾಗುತ್ತೆ, ಏಕೆಂದರೆ ಮಂತ್ರ ಪಠಿಸೋದು, ದೀಪ ನಿಯಮಿತವಾಗಿ ಬೆಳಗಿಸಿದ್ರೆ ಕೆಟ್ಟ ನೆರಳು ಎಂದಿಗೂ ಬಿಳೋದಿಲ್ಲ. ಜೊತೆಗೆ ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚುತ್ತೆ ಎಂದು ಸಹ ಹೇಳಲಾಗುತ್ತೆ.
ಮನೆ ಕೊಳಕಾಗಿದ್ರೆ, ಪ್ರತಿದಿನ ದೈಹಿಕ ಶುಚಿತ್ವ ಮಾಡದಿದ್ರೆ, ಆಗ ನಕಾರಾತ್ಮಕ ಶಕ್ತಿ ಬೇಗನೆ ಪರಿಣಾಮ ಬೀರುತ್ತೆ. ಆದ್ದರಿಂದ ಮನೆ ಮತ್ತು ನಿಮ್ಮನ್ನು ಸ್ವಚ್ಛವಾಗಿರಿಸಿಕೊಳ್ಳಿ. ಪ್ರತಿದಿನ ಸ್ನಾನ ಮಾಡಿ, ಅದೇ ರೀತಿ ಪ್ರತಿದಿನ ಮನೆಯನ್ನು ಕ್ಲೀನ್ (Clean)ಮಾಡಿ ಇಡಿ.
ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಕೇತ ಹೀಗಿರುತ್ತೆ
ನೀವು ಮನೆಯ ಒಳಗೆ ಯಾವಾಗಲೂ ಆಯಾಸ(Tired), ಬೇಜಾರು ಮತ್ತು ಗೊಂದಲ ಅನುಭವಿಸಿದ್ರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ. ಅವುಗಳನ್ನು ತೆಗೆದುಹಾಕಲು ಪ್ರತಿದಿನ ಮನೆಯಲ್ಲಿ ಗಂಟೆ ಅಥವಾ ಶಂಖವನ್ನು ಬಳಸಿ.
ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾದಾಗ, ವಿಷಯಗಳು ನಿಮಗೆ ಸರಿಹೊಂದೋದಿಲ್ಲ. ಹಲವಾರು ಬಾರಿ ಕೊನೆಯ ಹಂತ(Last stage) ತಲುಪಿದ ನಂತರ, ಅವಕಾಶ ಕೈಮೀರಿ ಹೋಗುತ್ತೆ . ಹಾಗಾಗಿ, ಜಾಗರೂಕರಾಗಿರಿ ಮತ್ತು ಆತ್ಮಬಲ ಕಡಿಮೆಯಾಗಲು ಬಿಡಬೇಡಿ.
ಮನೆಯಲ್ಲಿ ಭಿನ್ನಾಭಿಪ್ರಾಯ ಹೊಂದಿರೋದು, ಒಬ್ಬ ವ್ಯಕ್ತಿಯು ನಿರಂತರವಾಗಿ ಅನಾರೋಗ್ಯಕ್ಕೆ(Unhealthy) ಒಳಗಾಗೋದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಲಕ್ಷಣಗಳು. ಆ ಸಮಯದಲ್ಲಿ ಎಚ್ಚರಿಕೆಯಿಂದ ಇರೋದು ಮುಖ್ಯವಾಗಿದೆ.