ಕಂಪನಿ ನಷ್ಟದಲ್ಲಿದ್ದು, ಯಾವ ಲೆಕ್ಕವೂ ಟ್ಯಾಲಿ ಆಗುತ್ತಿಲ್ಲ. ನೀವೇನೋ ಮದನ್ ಅವರನ್ನು ಕಂಪನಿಯ ಸಿಇಓ ಮಾಡಿದ್ರಿ. ಮದನ್ ಅವರು ಟ್ಯಾಕ್ಸ್ ಸಹ ಕಟ್ಟಿಲ್ಲ. ಮೂರ್ನಾಲ್ಕು ನೋಟಿಸ್ ಬಂದಿದ್ರೂ ಅದನ್ನು ಚೆಕ್ ಮಾಡಿಲ್ಲ. ಇಲ್ಲಿರೋ ಲೆಕ್ಕಕ್ಕೂ ನಿಮಗೂ ನೀಡಿರುವ ಲೆಕ್ಕವೇ ಬೇರೆಯಾಗಿದೆ.
ಒಂದರಿಂದ ಒಂದೂವರೆ ಕೋಟಿಯಷ್ಟು ನಷ್ಟವಾಗಿದ್ದು, ಕಂಪನಿ ಅಕೌಂಟ್‌ನಿಂದ ಲಕ್ಷ ಲಕ್ಷ ಹಣ ಡ್ರಾ ಆಗಿದೆ. ಕೆಲಸಗಾರರಿಗೂ ಸರಿಯಾದ ಸಂಬಳ ನೀಡಿಲ್ಲ. ಕಸ್ಟಮರ್ಸ್ ಮೇಲ್ ಗಳಿಗೂ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ದಾಖಲಾಗಿದೆ ಎಂದು ಎಲ್ಲಾ ವಿಷಯವನ್ನು ವೀರೇಂದ್ರನಿಗೆ ಸುಬ್ಬು ತಿಳಿಸಿದ್ದಾನೆ.