Naa Ninna Bidalaare serial: 'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ರಿಷಿಕಾ, ಶೂಟಿಂಗ್ ಬಿಡುವಿನಲ್ಲಿ ಸಹ-ಕಲಾವಿದರಿಗೆ "ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ?" ಎಂದು ತಮಾಷೆಯ ಒಗಟು ಕೇಳಿದ್ದಾರೆ.. ಈ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ನಾ ನಿನ್ನ ಬಿಡಲಾರೆ ಸೀರಿಯಲ್ ಪ್ರಮುಖ ಪಾತ್ರಧಾರಿ ರಿಷಿಕಾ ಶೂಟಿಂಗ್ ಬಿಡುವಿನ ಸಮಯದಲ್ಲಿ ತಮಾಷೆ ಮಾಡುತ್ತಿರುತ್ತಾರೆ. ಈ ತಮಾಷೆಯ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ದುರ್ಗಾ ಪಾತ್ರದಲ್ಲಿ ರಿಷಿಕಾ ನಟಿಸುತ್ತಿದ್ದು, ಸೀರಿಯಲ್ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
25
ದುರ್ಗಾ ಪ್ರಶ್ನೆ
ಶೂಟಿಂಗ್ ಸ್ಥಳದಲ್ಲಿ ದುರ್ಗಾ ತಮ್ಮೊಂದಿಗಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ತಮಾಷೆ ಪ್ರಶ್ನೆ ಮತ್ತು ಒಗಟುಗಳನ್ನ ಕೇಳಿ ವಿಡಿಯೋ ಮಾಡಿಕೊಳ್ಳುತ್ತಿರುತ್ತಾರೆ. ಕೆಲವರು ತಮಾಷೆ ಪ್ರಶ್ನೆಗಳಿಗೆ ತರಲೆ ಉತ್ತರ ನೀಡಿ ಎಲ್ಲರನ್ನು ನಗಿಸುತ್ತಾರೆ. ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿ ದುರ್ಗಾ, ಲಾಜಿಕ್ ಇಲ್ಲದ ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆ ಏನು? ಸರಿ ಉತ್ತರ ನೀಡಿದವರಾರು ಎಂದು ನೋಡೋಣ ಬನ್ನಿ.
35
ಭೂಕಂಪವಾದ್ರೆ ಏನಾಗುತ್ತೆ?
ಮೊದಲು ಹಿತಾ ಬಳಿ, ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ ಎಂದು ದುರ್ಗಾ ಕೇಳುತ್ತಾರೆ. ಹಿತಾಗೆ ಉತ್ತರ ಗೊತ್ತಾಗಲ್ಲ. ನಂತರ ಊಟ ಮಾಡುತ್ತಿರೋ ಮಾಯಾಗೂ ಪ್ರಶ್ನೆ ಕೇಳಿದಾಗ, ಗೊತ್ತಿಲ್ಲ ಎಂದು ನಗುತ್ತಾರೆ. ಇದೇ ವೇಳೆ ಮಾಯಾ ಪಾತ್ರದಲ್ಲಿ ನಟಿಸುತ್ತಿರುವ ಕೋಳಿ ರಮ್ಯಾ ಅವರನ್ನು ತಮ್ಮ ಸೀರಿಯಲ್ ಕುಟುಂಬಕ್ಕೆ ಸ್ವಾಗತಿಸುತ್ತಾರೆ.
ನಂತರ ಶಾನ್ವಿಗೂ ಈ ಪ್ರಶ್ನೆ ಕೇಳಿದಾಗ ಭೂಕಂಪ ಆದರೆ ಶೇಕ್ ಆಗುತ್ತೆ, ಅಂದ್ರೆ ಶೇಕ್ ಅಬ್ದುಲ್ಲಾನಾ ಎಂದು ಹೇಳಿ ನಗುತ್ತಾರೆ. ನಂತರ ಶರತ್ ಮತ್ತು ಮತ್ತೋರ್ವ ವ್ಯಕ್ತಿ ಬಳಿಯಲ್ಲಿಯೂ ಹೋಗಿ ಇದೇ ಪ್ರಶ್ನೆಯನ್ನು ದುರ್ಗಾ ಕೇಳುತ್ತಾರೆ. ಶರತ್ ಜೊತೆಯಲ್ಲಿದ್ದ ವ್ಯಕ್ತಿ, ಭೂಕಂಪವಾದ್ರೆ ಹಸುಗಳು ಭಯಗೊಂಡು ಸಗಣಿ ಹಾಕುತ್ತವೆ ಎಂದಾಗ ಮೂವರು ನಗುತ್ತಾರೆ.
ದುರ್ಗಾ ಪ್ರಶ್ನೆಗೆ ಶರತ್ ಸರಿಯಾದ ಉತ್ತರ ನೀಡುತ್ತಾರೆ. ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ ಅಂದ್ರೆ ಮಿಲ್ಕ್ ಶೇಕ್ ಆಗುತ್ತೆ ಎಂದಿದ್ದಾರೆ. ಇದುವೇ ಸರಿಯಾದ ಉತ್ತರ ಎಂದು ದುರ್ಗಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.