BBK 12: Risha Gowda ನಡವಳಿಕೆ ಸರಿ ಇಲ್ಲ, ಬುದ್ಧಿಯೂ ಇಲ್ಲ- ತಲೆ ಮೇಲೆ ಹೊಡೆದಂತೆ ಮಾತಾಡಿದ ಜಾಹ್ನವಿ

Published : Oct 26, 2025, 01:36 PM IST

Bigg Boss Kannada Season 12: ಕಿಚ್ಚ ಸುದೀಪ್‌ ಅವರು ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಯಾರ ಮೇಲೆ ಏನು ಅಭಿಪ್ರಾಯ ಇದೆ ಎಂದು ತಲೆ ಮೇಲೆ ಹೊಡೆದಂತೆ ಹೇಳಿ ಎಂದಿದ್ದರು. ಅದರಂತೆ ಸ್ಪರ್ಧಿಗಳು ಪರಸ್ಪರ ಆರೋಪ ಮಾಡಿದ್ದಾರೆ. ಈ ಬಾರಿ ಮಹಿಳಾ ಮಣಿಗಳ ಮಧ್ಯೆ ಜಗಳ ಶುರುವಾಗಿದೆ. 

PREV
15
ಚಂಡಿಯಾದ ಮಲ್ಲಮ್ಮ

ಆ ಕಡೆ ಹೋದರೆ, ಈ ಕಡೆ ಹೋದರೆ ಈ ಕಡೆ ಹೋಗ್ತಾರೆ ಎಂದು ಮಲ್ಲಮ್ಮ ಅವರು ಕಾಕ್ರೋಚ್‌ ಸುಧಿಗೆ ಹೇಳಿದ್ದಾರೆ. ಧ್ರುವಂತ್‌ ಅವರು ಮಲ್ಲಮ್ಮ ಜೊತೆಗಿರೋದನ್ನು ಕಾಕ್ರೋಚ್‌ ಸುಧಿ ಅವರು ಡ್ರಾಮಾ ಎಂದು ಹೇಳಿದ್ದರು. ಈ ಡ್ರಾಮಾವನ್ನು ನಿಲ್ಲಿಸಬೇಕು ಎಂದು ಕಾಕ್ರೋಚ್‌ ಹೇಳಿದ್ದರು.

25
ರಿಷಾ ಹೇಳಿದ್ದೇನು?

“ಜಾಹ್ನವಿ ಅವರು ಸ್ಟ್ಯಾಂಡ್‌ ಅಂತ ಹೇಳಿದೆ, ಇಲ್ಲಿಗೆ ಬಂದ್ಮೇಲೆ ಸ್ಟ್ಯಾಂಡ್‌ ಅಲ್ಲ ದೊಡ್ಡ ಬಕೆಟ್‌ ಅಂತ ಗೊತ್ತಾಯ್ತು ಎಂದು ರಿಷಾ ಗೌಡ ಅವರು ಹೇಳಿದ್ದಾರೆ. ರಿಷಾ ಹಾಗೂ ಜಾಹ್ನವಿ ಅವರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ.

35
ಜಾಹ್ನವಿ ಹೇಳಿದ್ದೇನು?

“ಕಲಾವಿದರಿಗೆ ನಟನೆ ಎಷ್ಟು ಮುಖ್ಯವೋ ಅಷ್ಟೇ ನಡವಳಿಕೆ ಕೂಡ ಮುಖ್ಯ. ರಿಷಾ ಗೌಡ ನಾಲಿಗೆ ಮಾತ್ರ ಉದ್ದ ಇದೆ. ತಲೆಯಲ್ಲಿ ಏನೂ ಇಲ್ಲ” ಎಂದು ಜಾಹ್ನವಿ ಹೇಳಿದ್ದಾರೆ. ರಿಷಾ ಗೌಡ ಅವರು ಗಿಲ್ಲಿ ನಟ, ಚಂದ್ರಪ್ರಭ ಜೊತೆಗೆ ಕ್ಲೋಸ್‌ ಆಗಿರೋ ಬಗ್ಗೆ ಜಾಹ್ನವಿ ಮಾತನಾಡಿದ್ದರು. ಇದು ದೊಡ್ಡ ಜಗಳ ಉಂಟು ಮಾಡಿತ್ತು.

45
ಗೌರವ ಕೊಟ್ಟು, ತಗೋಳಿ

ಅಶ್ವಿನಿ ಗೌಡ ಅವರು ಬೇರೆಯವರಿಗೆ ಗೌರವ ಕೊಟ್ಟು, ಗೌರವ ತಗೋಳೋದನ್ನು ಕಲಿಯಬೇಕು ಎಂದು ಕಾವ್ಯ ಶೈವ ಹೇಳಿದ್ದಾರೆ. ಅಶ್ವಿನಿ ಗೌಡ ಅವರಿಗೂ ಗಿಲ್ಲಿ ನಟ, ಕಾವ್ಯ ಶೈವಗೂ ಆಗಿ ಬರೋದಿಲ್ಲ. ಇವರು ಈಗಾಗಲೇ ಸಾಕಷ್ಟು ಬಾರಿ ಜಗಳ ಆಡಿದ್ದಾರೆ.

55
ಎಲಿಮಿನೇಶನ್‌ ಇಲ್ಲ

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಎಲಿಮಿನೇಶನ್‌ ಇಲ್ಲ. ಆದರೆ ಸ್ಪರ್ಧಿಗಳಿಗೆ ಇದು ಅರಿವಿಲ್ಲ. ವೈಲ್ಡ್‌ಕಾರ್ಡ್‌ ಎಂಟ್ರಿಗಳಿಂದ ಆಟದ ಸ್ವರೂಪ ಸ್ವಲ್ಪ ಬದಲಾಗಿದೆ. ಮುಂದಿನ ವಾರ ಯಾರು ಹೊರಗಡೆ ಹೋಗ್ತಾರೆ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories