ಕರ್ಣನ ಜನ್ಮರಹಸ್ಯದ ಕೊನೆ ಹಂತ; ತಾರಾಳ ಕುತಂತ್ರಕ್ಕೆ ಇನ್ನಿಲ್ಲ ಶಕ್ತಿ, ಅಮ್ಮ-ಮಗನ ಮಿಲನ

Published : Oct 28, 2026, 01:33 PM IST

ಕರ್ಣನ ಜನ್ಮರಹಸ್ಯದ ಕಥೆಯಲ್ಲಿ ಇದೀಗ ರಮೇಶ್ ಮತ್ತು ಭುವನೇಶ್ವರಿ ಮುಖಾಮುಖಿಯಾಗಿದ್ದಾರೆ. ತಾರಾಳ ಕುತಂತ್ರದಿಂದ ರಮೇಶ್ ಮೇಲೆ ದ್ವೇಷ ಸಾಧಿಸುತ್ತಿರುವ ಭುವನೇಶ್ವರಿಗೆ ಸತ್ಯ ತಿಳಿಯಲಿದೆಯೇ ಎಂಬ ಕುತೂಹಲ ಮೂಡಿದೆ. ಕರ್ಣನಿಗೆ ತಾಯಿಯ ಪ್ರೀತಿ ಸಿಗುತ್ತದಾ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

PREV
15
ಕರ್ಣನ ಜನ್ಮರಹಸ್ಯ

ರಮೇಶ್‌ನ ಎದುರು ಸೀತಾ ಬಂದಾಗಿದ್ದು, ಕರ್ಣನಿಗೆ ಇಷ್ಟು ದಿನ ತನ್ನೊಂದಿಗೆ ಮಾತನಾಡುತ್ತಿದ್ದ ಭುವನೇಶ್ವರಿಯೇ ತಾಯಿ ಎಂಬ ವಿಷಯ ತಿಳಿಯೋ ಸಮಯ ಬಂದಾಗಿದೆ. ಹೌದು, ಕರ್ಣನ ಜನ್ಮರಹಸ್ಯವನ್ನೇ ಮುಂದಿಟ್ಟುಕೊಂಡು ಸೀರಿಯಲ್ ಆರಂಭವಾಗಿತ್ತು. ಹಂತ ಹಂತವಾಗಿ ಕರ್ಣನ ಜನ್ಮರಹಸ್ಯದ ಎಳೆಯನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಬರಲಾಗಿದೆ.

25
ಕರ್ಣ, ಭುವನೇಶ್ವರಿ ಮತ್ತು ರಮೇಶ್‌

ಈ ಮೂವರ ನಡುವೆ ತಡೆಗೋಡೆಯಾಗಿ ತಾರಾ ನಿಂತ್ಕೊಂಡಿದ್ದಾಳೆ. ಭುವನೇಶ್ವರಿ ಜೊತೆ ಸೇರಿಕೊಂಡು ಅಣ್ಣ ರಮೇಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ತಾರಾ ಪ್ಲಾನ್ ಮಾಡಿದ್ದಾಳೆ. ಕರ್ಣ, ಸಂಜು ಸೇರಿದಂತೆ ಎಲ್ಲರನ್ನೂ ನಾಶ ಮಾಡುವ ಗುರಿ ತಾರಾ ಹೊಂದಿದ್ರೆ, ಭುವನೇಶ್ವರಿಯದ್ದು ರಮೇಶನ ವಿರುದ್ಧದ ಸೇಡು. ಹಾಗಾಗಿ ತಾರಾ ಪ್ರತಿದಿನವೂ ಸರ್ಕಸ್ ಮಾಡುತ್ತಲೇ ಇರುತ್ತಾಳೆ.

35
ಎರಡನೇ ಬಾರಿಗೆ ಕರ್ಣನ ಮನೆಗೆ ಭುವನೇಶ್ವರಿ ಎಂಟ್ರಿ

ಈ ಹಿಂದೆ ರಮೇಶ್ ಇಲ್ಲದ ಸಮಯ ನೋಡಿಕೊಂಡು ಕರ್ಣನ ಮನೆಗೆ ಸೀತಾ (ಭುವನೇಶ್ವರಿ) ಬಂದಿದ್ದಳು. ರಮೇಶ್ ಬರೋವಷ್ಟರಲ್ಲಿ ಭುವನೇಶ್ವರಿ ಅಲ್ಲಿಂದ ತೆರಳಿದ್ದಳು. ಇದೀಗ ಕರ್ಣ ಮತ್ತು ನಿಧಿ ಜೊತೆಯಾಗಿ ಆರಂಭಿಸುತ್ತಿರೋ ಸಮಾಜಮುಖಿ ಕೆಲಸಕ್ಕೆ ಶುಭಕೋರಲು ಅನಿವಾರ್ಯವಾಗಿ ಭುವನೇಶ್ವರಿ ಮನೆಗೆ ಬರುವಂತಾಗಿದೆ.

45
ರಮೇಶ್ ಮತ್ತು ಭುವನೇಶ್ವರಿ ಮುಖಾಮುಖಿ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಮೇಶ್ ಮತ್ತು ಭುವನೇಶ್ವರಿ ಮುಖಾಮುಖಿಯಾಗಿದ್ದಾರೆ. ತನ್ನ ನೆಚ್ಚಿನ ಪ್ರೇಯಸಿಯನ್ನು ನೋಡುತ್ತಿದ್ದಂತೆ ರಮೇಶ್ ಖುಷಿಯಾಗಿದ್ದಾನೆ. ಯಾವುದು ಮನೆಯಲ್ಲಿ ನಡೆಯಬಾರದು ಅಂತ ಬಂದಿದ್ದ ಭುವನೇಶ್ವರಿಗೆ ರಮೇಶ್ ಎದುರಾಗಿರೋದು ಅಚ್ಚರಿಗೆ ಕಾರಣವಾಗಿದೆ. ದ್ವೇಷದಿಂದಾಗಿ ಇಷ್ಟು ದಿನ ರಮೇಶ್‌ನ ಮುಂದೆ ಭುವನೇಶ್ವರಿ ಬಂದರಿಲಿಲ್ಲ.

55
ತಪ್ಪು ತಿಳುವಳಿಕೆಯಲ್ಲಿರುವ ಭುವನೇಶ್ವರಿ

ತನ್ನಿಂದ ಮಗ ದೂರವಾಗಲು ರಮೇಶ್ ಕಾರಣ ಎಂದು ಭುವನೇಶ್ವರಿ ತಿಳಿದುಕೊಂಡಿದ್ದಾಳೆ. ಹಾಗೆಯೇ ತನ್ನನ್ನು ಪ್ರೀತಿಸಿ, ಗರ್ಭಿಣಿಯನ್ನಾಗಿಸಿ ರಮೇಶ್ ಮೋಸ ಮಾಡಿದ್ದಾನೆ ಎಂದು ಭುವನೇಶ್ವರಿ ಮನಸ್ಸಿನಲ್ಲಿದೆ. ಆದ್ರೆ ಇದರೆಲ್ಲದರ ಹಿಂದೆ ತಾರಾ ಇರೋ ಸತ್ಯ ಗೊತ್ತಿಲ್ಲ. ಇದೀಗ ಮನೆಗೆ ಬಂದಿರೋ ಭುವನೇಶ್ವರಿಯೇ ತನ್ನ ಸೀತಾ ಎಂದು ರಮೇಶ್ ಹೇಳುತ್ತಾನಾ? ಕರ್ಣನಿಗೆ ತಾಯಿಯ ಪ್ರೀತಿ ಸಿಗುತ್ತಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories