ಅಮೃತಧಾರೆ ಧಾರಾವಾಹಿಯಲ್ಲಿ ನಕಲಿ ಭೂಮಿಕಾಳ ಬಗ್ಗೆ ಗೌತಮ್ ಮತ್ತು ಪಾರ್ಥನಿಗೆ ಅನುಮಾನ ಶುರುವಾಗಿದೆ. ಸತ್ಯ ತಿಳಿಯಲು ಅವಳನ್ನು ಹಿಂಬಾಲಿಸಿದಾಗ ಅಸಲಿ ಮತ್ತು ನಕಲಿ ಭೂಮಿಕಾ ಇಬ್ಬರೂ ಗೌತಮ್ ಕಣ್ಣಿಗೆ ಬೀಳುವ ಸಾಧ್ಯತೆ ಇದೆ. ಧಾರಾವಾಹಿ ಮುಕ್ತಾಯವಾಗಲಿದೆಯಾ ಅಥವಾ ಹೊಸ ತಿರುವು ಪಡೆಯಲಿದೆಯಾ ಎಂಬ ಕುತೂಹಲ ಮೂಡಿದೆ
ಅಮೃತಧಾರೆ ಸೀರಿಯಲ್ ಇದೀಗ ರೋಚಕ ಹಂತ ತಲುಪಿದೆ. ತಮ್ಮ ಮನೆಯಲ್ಲಿ ಇರುವ ಭೂಮಿಕಾ (ದೀಪಿಕಾ) ತನ್ನ ಪತ್ನಿ ಅಲ್ಲ ಎನ್ನುವ ಡೌಟ್ ಗೌತಮ್ಗೆ ಬಂದಿತ್ತು. ಜೊತೆಗೆ ಪಾರ್ಥಂಗೂ ಅತ್ತಿಗೆ ವಿಷ್ಯದಲ್ಲಿ ವಿಚಿತ್ರ ಅನುಮಾನ ಶುರುವಾಗಿತ್ತು.
26
ಭೂಮಿಕಾ ಬಳಿ ದೀಪಿಕಾ
ಇದೇ ಕಾರಣಕ್ಕೆ ಗೌತಮ್ ಮತ್ತು ಪಾರ್ಥ ಸೇರಿ ದೀಪಿಕಾಳನ್ನು ಫಾಲೋಮಾಡಿಕೊಂಡು ಹೋಗಿದ್ದಾರೆ. ಅಷ್ಟಕ್ಕೂ ದೀಪಿಕಾ ಗೌತಮ್ ಬಂದಿರೋ ವಿಷಯವನ್ನು ಭೂಮಿಕಾ ಬಳಿ ಹೇಳಲು ಹೋಗಿದ್ದಾಳೆ.
36
ಹಿಂಬಾಲಿಸಿ ಬಂದ ಗೌತಮ್
ಗೌತಮ್ ಮತ್ತು ಪಾರ್ಥ ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಷ್ಟರಲ್ಲಿ ಗೌತಮ್ ಬಂದಿರೋ ವಿಷಯವನ್ನು ದೀಪಿಕಾ,ಭೂಮಿಕಾಗೆ ಹೇಳಿದ್ದಾಳೆ.
ಗೌತಮ್ ವಾಪಸ್ ಆಗಿರೋ ವಿಷ್ಯ ತಿಳಿಯುತ್ತಲೇ ಭೂಮಿಕಾ ಖುಷಿಯಿಂದ ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿಯೂ ಗೌತಮ್ ಮತ್ತು ಪಾರ್ಥ ಅಲ್ಲಿಗೆ ಬಂದಿದ್ದಾರೆ.
56
ಇಬ್ಬರನ್ನೂ ನೋಡಿದ ಗೌತಮ್?
ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗೌತಮ್ ಇಬ್ಬರನ್ನೂ ನೋಡಿದ ಹಾಗೆ ತೋರಿಸಲಾಗಿದೆ. ನಿಜಕ್ಕೂ ಗೌತಮ್ ಇಬ್ಬರನ್ನೂ ನೋಡಿದರೆ ಅಲ್ಲಿಗೆ ಸೀರಿಯಲ್ ಮುಕ್ತಾಯವಾದಂತೆ.
66
ಮುಂದೇನು?
ಒಂದು ವೇಳೆ ಇನ್ನೂ ಏನಾದರೂ ಟ್ವಿಸ್ಟ್ ಕೊಟ್ಟು ಸೀರಿಯಲ್ ಎಳೆಯಲೂಬಹುದು. ಏಕೆಂದರೆ, ಈ ಸೀರಿಯಲ್ ಇನ್ನೂ ಬಹು ಬೇಡಿಕೆ ಹೊಂದಿದೆ. ಇದೇ ಕಾರಣಕ್ಕೆ ಇದಾಗಲೇ ಹಲವಾರು ಬಾರಿ ಮುಗಿಯಿತು ಮುಗಿಯಿತು ಎಂದುಕೊಳ್ಳುವಾಗಲೇ ಮತ್ತೊಂದು ಟ್ವಿಸ್ಟ್ ತಂದು ಸೀರಿಯಲ್ ಎಳೆಯಲಾಗುತ್ತಿದೆ. ಒಟ್ಟಿನಲ್ಲಿ ಏನಾಗಲಿದೆ ಎನ್ನೋದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.