ಯಶಸ್ ಬಿಚ್ಚಿಟ್ಟ ರಹಸ್ಯ ಕೇಳಿ ಗಗನ್ ಕಣ್ಣೀರು, ತಾಂಡವ್ ಶಾಕ್; ಏಕಾಂಗಿಯಾದ ವಿವಿಐಪಿ?

Published : Oct 28, 2026, 11:41 AM IST

ಬಿಗ್‌ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ಕೃಷ್ಣನ್ ನಡುವೆ ಭಾರೀ ವಾಕ್ಸಮರ ನಡೆದಿದೆ. ಟಾಸ್ಕ್ ಒಂದರಲ್ಲಿ ಯಶಸ್ ಆಡಿದ ಕಟು ಮಾತುಗಳಿಂದ ಗಗನ್ ಭಾವುಕರಾಗಿದ್ದಾರೆ. ಆಪ್ತ ಗೆಳೆಯ ತಾಂಡವ್ ರಾಮ್ ಕೂಡ ದೂರವಾಗಿದ್ದು, ಗಗನ್ ಮನೆಯಲ್ಲಿ ಏಕಾಂಗಿಯಾದಂತೆ ಕಾಣುತ್ತಿದ್ದಾರೆ.

PREV
15
ಏಕಾಂಗಿಯಾದ್ರಾ ಗಗನ್ ಚಿನ್ನಪ್ಪ?

ಬಿಗ್‌ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ಕೃಷ್ಣನ್ ನಡುವಿನ ಕಿಚ್ಚು ಜ್ವಾಲಮುಖಿಯಾಗಿ ಸ್ಪೋಟಗೊಂಡಿದೆ. ಕಳೆದ ವೀಕೆಂಡ್‌ನಲ್ಲಿ ಸುದೀಪ್‌ ಅವರ ನೇರ ಮಾತುಗಳಿಂದ ಕೊಂಚ ಕುಸಿದಿರುವ ಗಗನ್ ಚಿನ್ನಪ್ಪ, ಏಕಾಂಗಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಆಪ್ತ ಗೆಳೆಯ ತಾಂಡವ್ ರಾಮ್ ಸಹ ಇಬ್ಬರ ನಡುವಿನ ಸ್ನೇಹದ ನಡುವೆ ಗೆರೆಯೊಂದನ್ನು ಎಳೆದುಕೊಂಡಿದ್ದಾರೆ.

25
ಗಗನ್ ಮತ್ತು ಯಶಸ್ ನಡುವೆ ಮಾತಿನ ಚಕಮಕಿ

ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿರೋ ಗಗನ್‌ ಚಿನ್ನಪ್ಪ ವಿರುದ್ಧ ಯಶಸ್ ಕೃಷ್ಣ ಆಡಿದ ಮಾತುಗಳು ನೇರವಾಗಿಯೇ ಹೃದಯಕ್ಕೆ ತಾಗಿದ್ದು, ಕಣ್ಣಾಲಿಗಳು ತೇವಗೊಂಡು ಭಾವುಕರಾಗಿದ್ದಾರೆ. ಇಷ್ಟು ದಿನ ತಾನಾಯ್ತು, ತನ್ನ ಆಟ ಎಂದಿದ್ದ ಯಶಸ್ ಸಹ ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡಲು ಆರಂಭಿಸಿದ್ದಾರೆ. ಮಂಗಳವಾರವಷ್ಟೇ ಗಗನ್ ಮತ್ತು ಯಶಸ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

35
ಗಗನ್‌ ನೋವುಂಟು ಮಾಡಿದ ಯಶಸ್ ಮಾತು

ಈ ವಾಕ್ಸಮರ ಮತ್ತೆ ಮುಂದುವರಿದಿದ್ದು, ಗಗನ್ ಮೇಲಿನ ಕೋಪವನ್ನು ಟಾಸ್ಕ್‌ವೊಂದರಲ್ಲಿ ಯಶಸ್ ಹೊರ ಹಾಕಿರೋದು ಕಂಡು ಬಂದಿತ್ತು. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಯಾವ ಟಾಸ್ಕ್ ಎಂದು ಸ್ಪಷ್ಟನೆ ನೀಡಿಲ್ಲ. ಸ್ಪರ್ಧಿ ಮೇಲೆ ನೀರು ಎರಚುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ನೀಡಲಾಗಿದೆ. ಈ ವೇಳೆ ಯಶಸ್ ಹೇಳಿದ ಮಾತುಗಳು ಗಗನ್‌ಗೆ ನೋವುಂಟು ಮಾಡಿದಂತೆ ಕಾಣಿಸುತ್ತಿದೆ.

45
ಯಶಸ್ ಹೇಳಿದ್ದೇನು?

ಮುಚ್ಕೊಂಡು ಕೂತ್ಕೋ ಅಂದ್ಕೂಡಲೇ ಸುಮ್ನೆ ಕುಳಿತುಕೊಳ್ಳಲು ನಾನೇನು ನಿಮ್ಮ ಶಿಷ್ಯ ಅಲ್ಲವಾ? ನಾನು ಸಹ ಹೋಗಲೋ? ಬಾರೋ ಎಂದು ಹೇಳಬಹುದು. ಸೆಕೆಂಡ್ ಹೀರೋ ಅಂತೀರಲ್ಲ, 25ನೇ ವಯಸ್ಸಿಗೆ ನೀವೇನೂ ಫಸ್ಟ್ ಹೀರೋ ಆಗಿದ್ರಾ? ವೀಕೆಂಡ್‌ನಲ್ಲಿ ನಿಮಗೆ ಮಟನ್ ಬಿರಿಯಾನಿ ಕಾದಿದೆ ಎಂದು ತಾಂಡವ್ ಹೇಳಿದ್ದರು ಎಂಬ ವಿಷಯವನ್ನು ಎಲ್ಲರ ಮುಂದೆ ಯಶಸ್ ಬಹಿರಂಗಗೊಳಿಸಿದೆ. ಒಂದೆಡೆ ಯಶಸ್ ಕಟು ಮಾತುಗಳಿಂದಲೇ ನಿಂದಿಸುತ್ತಿದ್ರೆ, ಇನ್ನುಳಿದ ಸ್ಪರ್ಧಿಗಳು ಗಗನ್ ಮೇಲೆ ನೀರು ಎರಚುತ್ತಿದ್ದರು.

55
ತಾಂಡವ್ ಮುಂದೆ ಕಣ್ಣೀರು

ಈ ಟಾಸ್ಕ್ ಮುಗಿದ್ಮೇಲೆ ಗಗನ್ ಮತ್ತು ತಾಂಡವ್ ಪ್ರತ್ಯೇಕವಾಗಿ ಕುಳಿತು ಮಾತನಾಡಿದ್ದಾರೆ. ಈ ವೇಳೆ ಯಶಸ್ ಹೇಳಿದ ಮಾತುಗಳೆಲ್ಲವೂ ಸತ್ಯವೇ ಎಂಬುದರ ಬಗ್ಗೆ ಸ್ಪಷ್ಟನೆ ತೆಗೆದುಕೊಂಡಂತೆ ಕಾಣಿಸುತ್ತಿದೆ. ಈ ಹಿಂದೆ ತನ್ನ ಬಗ್ಗೆ ಗಗನ್ ಹೇಳಿಕೆಯನ್ನು ಗಮನಿಸಿ ತಾಂಡವ್ ಭಾವುಕರಾಗಿದ್ದರು. ಈಗ ಗಗನ್ ಚಿನ್ನಪ್ಪ ಭಾವುಕರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories