ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಹಿತಾಳ ಆತ್ಮ ದೇಹದಿಂದ ಹೊರಬಂದಿದೆ. ದುರ್ಗಾ ಮತ್ತು ಅಂಬಿಕಾ ಆತ್ಮವನ್ನು ಮರಳಿ ದೇಹ ಸೇರಿಸಲು ಪ್ರಯತ್ನಿಸುತ್ತಿದ್ದರೆ, ಮಾಳವಿಕಾ ಮಾಟ-ಮಂತ್ರದ ಮೂಲಕ ಅದನ್ನು ತನ್ನ ವಶಕ್ಕೆ ಪಡೆಯಲು ಸಂಚು ರೂಪಿಸಿದ್ದಾಳೆ.
ಜೀ ಕನ್ನಡದ ನಾ ನಿನ್ನ ಬಿಡಲಾರೆ ಸದ್ಯ ಕನ್ನಡದ ಟ್ರೆಂಡಿಂಗ್ ಹಾರರ್ ಸೀರಿಯಲ್. ಹಳ್ಳಿ ಪವರ್ ರಿಯಾಲಿಟಿ ಶೋಗಾಗಿ ಸೀರಿಯಲ್ ಸಮಯ ರಾತ್ರಿ 9.30ರ ಬದಲಾಗಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಸದ್ಯ ಸೀರಿಯಲ್‌ನಲ್ಲಿ ಹಿತಾ ಆತ್ಮ ದೇಹದಿಂದ ಹೊರಗೆ ಬಂದಿದ್ದು, ಮಾಳವಿಕಾ ಈ ಆತ್ಮವನ್ನ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಮುಂದಾಗಿದ್ದಾಳೆ.
25
ದೇವಿಯನ್ನು ನಂಬದ ದುರ್ಗಾ
ಸೀರಿಯಲ್ ಆರಂಭದಿಂದಲೂ ಕಥಾ ನಾಯಕಿ ದುರ್ಗಾಗೆ, ದೇವಿ (ದೇವರು) ಅಂದ್ರೆ ಆಗಲ್ಲ. ತನ್ನ ಕುಟುಂಬ ವಿಭಜನೆ ಆಗಿದ್ದಕ್ಕೆ, ಅಕ್ಕನ ಸಾವಿಗೆ ಆ ದೇವಿಯೇ ಕಾರಣ ಅನ್ನೋದು ದುರ್ಗಾಳ ಕೋಪ. ಹಾಗಾಗಿ ದೇವಿ ಇರುವಿಕೆ ಸುಳ್ಳು ಎಂದು ವಾದಿಸುತ್ತಲೇ ಬಂದಿದ್ದಾಳೆ. ದೇವಿಯ ಪವಾಡಗಳನ್ನು ನಂಬಲ್ಲ ಎಂದು ಹಲವು ಬಾರಿ ದುರ್ಗಾ ಹೇಳಿದ್ದುಂಟು.
35
ದುರ್ಗಾಳ ನಂಬಿಕೆ
ದೇವರು ನಂಬದ ದುರ್ಗಾ, ಇನ್ನುಳಿದ ಎಲ್ಲಾ ವಿಷಯಗಳನ್ನು ನಂಬುತ್ತಾಳೆ. ಅಪ್ಪನಲ್ಲಿರುವ ದೈವಿಕ ಶಕ್ತಿ, ಮಾಳವಿಕಾ ಮಾಡುವ ಮಾಟ-ಮಂತ್ರ, ರಕ್ತಾಕ್ಷಿಯ ಅಟ್ಟಹಾಸ ಸೇರಿದಂತೆ ತನ್ನೊಂದಿಗಿರುವ ಅಂಬಿಕಾ ಆತ್ಮವನ್ನು ಸಹ ಬಲವಾಗಿ ನಂಬುತ್ತಾಳೆ. ಆದ್ರೆ ದೈವ ಶಕ್ತಿಯನ್ನು ಮಾತ್ರ ನಂಬದ ದುರ್ಗಾಳ ನಂಬಿಕೆಯನ್ನು ಕಂಡು ವೀಕ್ಷಕರು ಸಹ ಕನ್ಫ್ಯೂಸ್ ಆಗುತ್ತಿದ್ದಾರೆ.
ಹಿತಾ ಆತ್ಮವನ್ನು ದೇಹಕ್ಕೆ ಸೇರಿಸುವ ಪ್ರಕ್ರಿಯೆಯಲ್ಲಿ ಅಂಬಿಕಾ-ದುರ್ಗಾ ತೊಡಗಿಕೊಂಡಿದ್ದಾಳೆ. ಇದಕ್ಕಾಗಿ ಅಪ್ಪನ ಮಾತಿಗೆ ಒಪ್ಪಿ ದುರ್ಗಾ ಆ ದೇವಿಯ ನಾಮಸ್ಮರಣೆಯಲ್ಲಿ ತೊಡಗಿಕೊಂಡಿದ್ದಾಳೆ. ಮತ್ತೊಂದೆಡೆ ದೇಹವನ್ನು ಸೇರಿಕೊಳ್ಳುವಂತೆ ಹಿತಾ ಆತ್ಮಕ್ಕೆ ಅಂಬಿಕಾ ಮನವೊಲಿಸುತ್ತಿದ್ದಾಳೆ.
ಹಿತಾ ದೇಹದಿಂದ ಹೊರಗೆ ಬಂದಿರುವ ಆತ್ಮ ಮತ್ತೊಮ್ಮೆ ದೇಹ ಪ್ರವೇಶಿಸಲು ಹಿಂದೇಟು ಹಾಕುತ್ತಿದೆ. ಮತ್ತೊಂದೆಡೆ ದೇವಾಲಯಕ್ಕೆ ಹೋಗೋದಾಗಿ ಹೇಳಿ ಮನೆಯಿಂದ ಹೊರಗೆ ಬಂದಿರುವ ಮಾಳವಿಕಾ, ಮಾಟ ಮಂತ್ರದಲ್ಲಿ ತೊಡಗಿಕೊಂಡಿದ್ದಾಳೆ. ಮುಂದಿನ ಸಂಚಿಕೆ ರೋಚಕ ತಿರುವು ಪಡೆದುಕೊಳ್ಳುವುದು ಖಚಿತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.