ಸೀಮಂತ ಶಾಸ್ತ್ರ ಸಮಾರಂಭದಂದು ಕಣ್ಣೀರಿಟ್ಟ ಮಧು ಗೌಡ ಅತ್ತೆ.. ನೆಟ್ಟಿಗರಿಂದ ಕೇಳಿಬಂತು ಹೀಗೊಂದು ಕಾಮೆಂಟ್

Published : Aug 12, 2026, 10:13 AM IST

Madhu Gowda Baby Shower: ಕನ್ನಡದ ಖ್ಯಾತ ಯೂಟ್ಯೂಬರ್ ಮಧು ಗೌಡ ಅವರ ಸೀಮಂತ ಶಾಸ್ತ್ರದ ಸಂಭ್ರಮದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅತ್ತೆ ಮತ್ತು ಸೊಸೆಯ ನಡುವಿನ ಪ್ರೀತಿ.

PREV
17
ಕುಟುಂಬ ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ನೆರವೇರಿದ ಸೀಮಂತ ಶಾಸ್ತ್ರ

ಕುಟುಂಬ ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ನೆರವೇರಿದ ಸೀಮಂತ ಶಾಸ್ತ್ರ
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಜೋಡಿ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಅವರ ಮನೆಯಲ್ಲಿ ಈಗ ಸಂಭ್ರಮ ಮನೆಮಾಡಿದೆ. ಕಳೆದ ಎರಡು ದಿನದ ಹಿಂದೆ ಮಧು ಗೌಡ ಅವರ ಸೀಮಂತ ಶಾಸ್ತ್ರವು ಕುಟುಂಬದವರು ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

27
ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ ಮಧು

ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ ಮಧು
ಸಾಮಾನ್ಯವಾಗಿ ಸೀಮಂತ ಶಾಸ್ತ್ರದಲ್ಲಿ ಸಂಪೂರ್ಣ ಸಾಂಪ್ರದಾಯಿಕ ಉಡುಪು, ಆಭರಣಗಳನ್ನು ಧರಿಸುವುದು ವಾಡಿಕೆ. ಆದ್ದರಿಂದ ಮಧು ಗೌಡ ಹಳದಿ ಬಣ್ಣದ ರೇಷ್ಮೆ ಸೀರೆ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಮೈಸೂರಿನಲ್ಲಿ ನಡೆದ ಈ ಸಮಾರಂಭ ಅದ್ದೂರಿಯಾಗಿ ನಡೆಯಿತು.

37
ಭಾವುಕ ಕ್ಷಣ

ಭಾವುಕ ಕ್ಷಣ
ಕಾರ್ಯಕ್ರಮದ ಉದ್ದಕ್ಕೂ ಮಧು ಹಾಗೂ ಅವರ ಕುಟುಂಬದವರು ಸಾಕಷ್ಟು ಭಾವುಕರಾಗಿದ್ದರು. ವಿಶೇಷವಾಗಿ ಮಧು ಅವರ ಅತ್ತೆ ಅವರಿಗೆ ಶುಭ ಹಾರೈಸುವಾಗ ಬಿಕ್ಕಿ ಬಿಕ್ಕಿ ಅತ್ತರು. ಮಧು ಕೂಡ ತನ್ನ ಕುಟುಂಬದ ಪ್ರೀತಿಯನ್ನು ಕಂಡು ಭಾವುಕರಾದರು. ಸಮಾರಂಭದ ನಂತರ ಮಧು ಬೆಂಗಳೂರಿಗೆ ಹೊರಡುವಾಗ ಗಂಡ ನಿಖಿಲ್ ಫ್ಯಾಮಿಲಿಯವರು ಬೀಳ್ಕೊಟ್ಟ ದೃಶ್ಯ ಹೃದಯಸ್ಪರ್ಶಿಯಾಗಿತ್ತು.

47
ನೆಟ್ಟಿಗರ ಮೆಚ್ಚುಗೆಯ ಸುರಿಮಳೆ

ನೆಟ್ಟಿಗರ ಮೆಚ್ಚುಗೆಯ ಸುರಿಮಳೆ
ಸಾಮಾನ್ಯವಾಗಿ ಅತ್ತೆ-ಸೊಸೆ ಅಂದರೇನೇ ಕಿತ್ತಾಟ ಎನ್ನುವವರ ಮಧ್ಯೆ ಮಧು ಗೌಡ ಮತ್ತು ಅವರ ಅತ್ತೆಯ ನಡುವಿನ ಪ್ರೀತಿ ಕಂಡು ಜನ ಫಿದಾ ಆಗಿದ್ದಾರೆ. ಕಾರ್ಯಕ್ರಮ ಮುಗಿಸಿ ಮಧು ಬೆಂಗಳೂರಿಗೆ ಹೊರಡುವಾಗ, ಅತ್ತೆ ಅವರನ್ನು ಬಿಟ್ಟಿರಲಾರದೆ ಭಾವುಕರಾಗಿ ಅತ್ತ ದೃಶ್ಯ ಅನೇಕರ ಕಣ್ಣನ್ನು ತೇವಗೊಳಿಸಿದೆ.

ಮಧು ಗೌಡ ಅವರ ವಿಡಿಯೋಗೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು ಅತ್ತೆಯ ಗುಣವನ್ನು ಕೊಂಡಾಡುತ್ತಿದ್ದಾರೆ.

"ಇಂದಿನ ಕಾಲದಲ್ಲೂ ಸೊಸೆಯನ್ನು ಬಿಟ್ಟು ಇರಲು ಅತ್ತೆ ಅಳುತ್ತಾರೆ ಎಂದರೆ ನಿಜಕ್ಕೂ ಅಚ್ಚರಿ. ಆಂಟಿ ನೀವು ಗ್ರೇಟ್," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

"ಅತ್ತೆ-ಸೊಸೆ ಮಧ್ಯೆ ಇಷ್ಟು ಒಳ್ಳೆಯ ಬಾಂಧವ್ಯ ಇರುವುದನ್ನು ಕಂಡು ಖುಷಿಯಾಯಿತು. ವಿಡಿಯೋ ಕೊನೆಯಲ್ಲಿ ಅವರಿಬ್ಬರೂ ಅಳುವುದನ್ನು ನೋಡಿ ನನಗೂ ಅಳು ಬಂತು," ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

"ಮಧು ಅವರೇ, ಇಂತಹ ಅತ್ತೆಯನ್ನು ಪಡೆಯಲು ನೀವು ನಿಜಕ್ಕೂ ಪುಣ್ಯ ಮಾಡಿದ್ದೀರಿ," ಎಂಬ ಪ್ರತಿಕ್ರಿಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ.

57
ಯೂಟ್ಯೂಬರ್ ಗೆಳೆಯರ ಸಮಾಗಮ

ಯೂಟ್ಯೂಬರ್ ಗೆಳೆಯರ ಸಮಾಗಮ
ಮಧು ಅವರ ಈ ವಿಶೇಷ ದಿನದಂದು ಹಲವು ಪ್ರಸಿದ್ಧ ಯೂಟ್ಯೂಬರ್ ಗೆಳೆಯರು ಭಾಗವಹಿಸಿ ಶುಭ ಕೋರಿದರು. ಮಧು ಅವರ ತಂಗಿ ಸ್ವಾತಿ ಅವರು ಈ ಕಾರ್ಯಕ್ರಮದ ಬ್ಲಾಗ್ ಜವಾಬ್ದಾರಿಯನ್ನು ಹೊತ್ತುಕೊಂಡು, ಪ್ರತಿಯೊಂದು ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದರು.

67
ಗಂಡೋ-ಹೆಣ್ಣೋ? ನೆಟ್ಟಿಗರ ಕುತೂಹಲ

ಗಂಡೋ-ಹೆಣ್ಣೋ? ನೆಟ್ಟಿಗರ ಕುತೂಹಲ
ಸೀಮಂತದ ಸಂಭ್ರಮದ ನಡುವೆ ಅತಿಥಿಗಳು ಹಾಗೂ ನೆಟ್ಟಿಗರು ಮಗು ಗಂಡೋ ಅಥವಾ ಹೆಣ್ಣೋ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕೆಲವರು 'ಗಂಡು ಮಗು' ಬೇಕೆಂದು ಆಸೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು 'ಹೆಣ್ಣು ಮಗು' ಆಗಲಿ ಎಂದು ಹಾರೈಸಿದರು. ಮಧು ಮಾತ್ರ "ಯಾವುದೇ ಮಗು ಬಂದರೂ ನಾವು ಪ್ರೀತಿಯಿಂದ ಬರಮಾಡಿಕೊಳ್ಳುತ್ತೇವೆ" ಎಂದು ತಿಳಿಸಿದರು.

77
ಭರ್ಜರಿ ಊಟ

ಭರ್ಜರಿ ಊಟ
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಭರ್ಜರಿ ಊಟ ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ವೈವಿಧ್ಯಮಯ ಸಿಹಿ ತಿಂಡಿಗಳು, ಸ್ನ್ಯಾಕ್ಸ್ ಹಾಗೂ ಊಟದ ರುಚಿಯನ್ನು ಕಂಡು ಬಂದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ, ಮಧು ಗೌಡ ಅವರ ಸೀಮಂತ ಶಾಸ್ತ್ರವು ಪ್ರೀತಿ, ಸಂಭ್ರಮ ಹಾಗೂ ಭಾವನೆಗಳ ಸಂಗಮವಾಗಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಧು ಅವರಿಗೆ ಹರಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories